Online Betting Fraud: ಬಿ ಕ್ಯಾರ್ಫುಲ್! ಆನ್‍ಲೈನ್ ಬೆಟ್ಟಿಂಗ್ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ಕಂಪನಿಗಳ ಮುಟ್ಟುಗೋಲು

Crime news online betting fraud enforcement directorate attaches properties worth rs 5.87 crore of firms linked to gambling

Share the Article

Online Betting Fraud: ಆನ್ ಲೈನ್ ಬೆಟ್ಟಿಂಗ್ ಇತ್ತೀಚೆಗೆ ಹೆಚ್ಚಾಗಿ ಚಾಲ್ತಿಯಲ್ಲಿದ್ದು, ಹಲವಾರು ನಕಲಿ ಕಂಪನಿಗಳು ಬೆಟ್ಟಿಂಗ್ (Online Betting Fraud)ಮತ್ತು ಜೂಜಾಟದ ನೆಪದಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದೆ. ಜೊತೆಗೆ ಸಾವಿರಾರು ಜನರು ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಇದೀಗ ಆನ್‍ಲೈನ್ ಬೆಟ್ಟಿಂಗ್ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ಕಂಪನಿಗಳಿಗೆ ಇ.ಡಿ ಬಿಸಿ ಮುಟ್ಟಿಸಿದೆ.

ಹೌದು, ಆನ್‍ಲೈನ್ ಬೆಟ್ಟಿಂಗ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ಕಂಪನಿಗಳಿಗೆ ಬಿಸಿ ಮುಟ್ಟಿಸಿರುವ ಜಾರಿ ನಿರ್ದೇಶನಾಲಯ(ED) 5.87 ಕೋಟಿ ರೂ. ಮೊತ್ತದ ಆಸ್ತಿ ಮುಟ್ಟುಗೋಲು ಹಾಕಿದೆ. ಈ ಮೂಲಕ ಜೂಜಾಟದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇ.ಡಿ ನಿರ್ಣಾಯಕವಾದ ಮಹತ್ವದ ಹೆಜ್ಜೆ ಇಟ್ಟಿದೆ.

ಅಕ್ರಮ ಆನ್‌ಲೈನ್ ಜೂಜು, ಬೆಟ್ಟಿಂಗ್ ಮತ್ತು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಹಲವಾರು ಕಂಪನಿಗಳು ತೊಡಗಿಸಿಕೊಂಡಿವೆ ಎಂದು ಆರೋಪಿಸಿ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (DGGI) ಕಚೇರಿಯಿಂದ ದೂರು ದಾಖಲಾಗಿತ್ತು.

ಈಗಾಗಲೇ ಗುಪ್ತಚರ ನಿರ್ದೇಶನಾಲಯದ ಮಹಾ ನಿರ್ದೇಶಕರ ಕಚೇರಿಯಿಂದ ಬಂದ ದೂರಿನ ಪ್ರಕಾರ ಬೆಂಗಳೂರಿನ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (PMLA) ವಂಚಕ ಕಂಪೆನಿಗಳ ವಿರುದ್ಧ ತನಿಖೆ ನಡೆಸಲಾಗಿತ್ತು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ ಬೆಟ್ಟಿಂಗ್‌ ತನಿಖೆಯ ಅನ್ವಯ ನಕಲಿ ಕಂಪನಿಗಳು ಮತ್ತು ಆ ಕಂಪನಿಗಳಿಗೆ ಸೇರಿದ ವ್ಯಕ್ತಿಗಳ ಬ್ಯಾಂಕ್‌ ಖಾತೆಯಲ್ಲಿನ 5.87 ಕೋಟಿ ರೂ. ಚರಾಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ನಕಲಿ ಕಂಪನಿಗಳು ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬಲಿಂಗ್ ಹೆಸರಲ್ಲಿ ಜನರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದವು. ಎನ್.ಶ್ಯಾಮಲಾ ಹಾಗೂ ಉಮರ್ ಫಾರುಖ್ ಎಂಬ ವಂಚಕರು ಬೇರೆ ವ್ಯಕ್ತಿಗಳ ದಾಖಲೆ ಪತ್ರಗಳನ್ನು ದುರ್ಬಳಕೆ ಮಾಡಿಕೊಂಡು ವಿವಿಧ ಹೆಸರಿನಲ್ಲಿ ಕಂಪನಿಗಳನ್ನು ತೆರೆದಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಜನರನ್ನು ವಂಚಿಸುವ ಉದ್ದೇಶದಿಂದಲೇ ವೇಲ್ ಬೈಟ್ ಇಂಟರಾಕ್ಟಿವ್, ವೇಲ್‌ನಿಂದ ಅನೇಕ ಘಟಕಗಳು ಆಕ್ಯುಲಸ್ ವಾಲ್ವ್ ಎಂಟರ್‌ಟೈನ್‌ಮೆಂಟ್ ಮತ್ತು ನೆಸ್ಟ್ರಾ ವೆಬ್ ಸೊಲ್ಯೂಷನ್‌, ರಾಕ್‌ಸ್ಟಾರ್ ಇಂಟರಾಕ್ಟಿವ್, ಇಂಡೀ ವರ್ಲ್ಡ್ ಸ್ಟುಡಿಯೋ, ಫಾಲ್ಕನ್ ಎಂಟರ್‌ಟೈನ್‌ಮೆಂಟ್ ಏಜೆನ್ಸಿಗಳು, ದಿ ನೆಕ್ಸ್ಟ್ ಲೆವೆಲ್ ಟೆಕ್ನಾಲಜಿ, ರಿಫ್ಟ್ ಗೇಮರ್ ಟೆಕ್ನಾಲಜೀಸ್, ರಿಯಾಲಿಟಿ ಕೋಡ್ ಟೆಕ್ನಾಲಜಿ, ಟೆನೆಸ್ ಸೊಲ್ಯೂಷನ್ಸ್, ಎಲೆಕ್ಟ್ರಾನಿಕ್ ವರ್ಚುವಲ್ ಸೊಲ್ಯೂಷನ್ಸ್, ಝಝಾಗೊ ಸಿಸ್ಟಮ್ಸ್, ಝಿಂಗಾ ಇಂಟರಾಕ್ಟಿವ್, ಸೇರಿದಂತೆ ಹಲವು ನಕಲಿ ಕಂಪನಿಗಳನ್ನು ತೆರೆದಿದ್ದರು ಎನ್ನಲಾಗಿದೆ.

ಈ ನಕಲಿ ಕಂಪನಿಗಳು ಬೆಟ್ಟಿಂಗ್ ಮತ್ತು ಜೂಜಾಟದ ನೆಪದಲ್ಲಿ ಹಣ ಸಂಗ್ರಹಿಸಿ ವಂಚನೆ ಚಟುವಟಿಕೆಗಳಲ್ಲಿ ತೊಡಗಿದ್ದವು. ವಂಚಕರು Bestartech, Khelo24bet, ಮತ್ತು Betinexchangeನಂತಹ ವೆಬ್‌ಸೈಟ್‌ಗಳ ಮೂಲಕ ಜನರಿಗೆ ವಂಚಿಸುತ್ತಿದ್ದರು.

ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ ಜನರು ಇಂತಹ ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬಲಿಂಗ್ ಗೆ ಬೆಟ್ಟಿಂಗ್ ಮತ್ತು ಜೂಜಾಟದ ನೆಪದಲ್ಲಿ ಹಣ ಹೂಡಿಕೆ ಮಾಡಬಾರದಾಗಿ ಎಚ್ಚರ ನೀಡಲಾಗಿದೆ.

ಇದನ್ನೂ ಓದಿ: ವೇತನ ನಿಯಮಗಳಲ್ಲಿ ಅಮೋಘ ಬದಲಾವಣೆ ! ನಿಮ್ಮ ಕೈ ಸೇರಲಿದೆ ಬರುವ ತಿಂಗಳಿನಿಂದಲೇ ಹೆಚ್ಚಿನ ವೇತನ

Leave A Reply