ಸೌಜನ್ಯ ಪ್ರಕರಣ: ಬೆಳ್ತಂಗಡಿ ಚಲೋ ಸಂದರ್ಭ ಬಿಜೆಪಿ ವಿರುದ್ಧ ಹರಿಹಾಯ್ದ ವಸಂತ್ ಬಂಗೇರ ! ನಳಿನ್, ಕಾರ್ಕಳದ ಸುನಿಲ್ ಕುಮಾರ್ ಏನು ಸೊಪ್ಪು ಕಡೀತಿದ್ರಾ?

Sowjanya murder case Vasant Bangera lashed out at BJP on the occasion of Belthangadi

Sowjanya case: ಸೌಜನ್ಯ ಅತ್ಯಾಚಾರ ಮತ್ತು ಕೊಲೆ(Sowjanya case) ಜೊತೆಗೆ ಧರ್ಮಸ್ಥಳದ ಸುತ್ತಮುತ್ತ ನಡೆದ ಅಸಹಜ ಸರಣಿ ಸಾವುಗಳನ್ನು ವಿರೋಧಿಸಿ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಬೇಕೆಂದು ಬೆಳ್ತಂಗಡಿ ಚಲೋ ಕಾರ್ಯಕ್ರಮವು ಇಂದು 28 ಆಗಸ್ಟ್ 2023ರಲ್ಲಿ ನಡೆಯುತ್ತಿದೆ. ಸೌಜನ್ಯಾ ಪ್ರಕರಣವನ್ನು SIT ತನಿಖೆಗೆ ವಹಿಸಿಕೊಡಬೇಕೆಂದು ಒತ್ತಾಯ ಮಾಡಲಾಗಿದೆ.

Sowjanya case

ಈ ಸಂದರ್ಭದಲ್ಲಿ ವಸಂತ ಬಂಗೇರ ಏನಂದ್ರು ಗೊತ್ತೇ ?
ಸಿಬಿಐ ಗೆ ಕೊಡದೆ ನಾನು ಬೆಳ್ತಂಗಡಿಗೆ ಬರಲ್ಲ ಅಂತ ನಾನು ಸದನದಲ್ಲಿ ಹೇಳಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ ‘ ನೋಡಿ ಬಂಗೇರ, ಇದೆಲ್ಲ ಬೇಡ ‘ ಎಂದಿದ್ರು. ಆ ನಂತರ ನನ್ನನ್ನು ಕರೆದು ಸಿದ್ದರಾಮಯ್ಯ ಒಂದೂವರೇ ಗಂಟೆ ಮಾತಾಡಿದ್ರು. ನಾನು ಸರಿಯಾಗಿ ವಿವರಿಸಿದೆ. ನಂತರ ಮತ್ತೆ ಸದನ ಶುರುವಾಯಿತು. ಅಲ್ಲಿ ಸಿದ್ದರಾಮಯ್ಯ ನೇರವಾಗಿ ಬಂದು ಸಿಬಿಐ ತನಿಖೆಗೆ ಆದೇಶ ಕೊಟ್ರು. ಆಗ ಕಾಂಗ್ರೆಸ್ ಸರ್ಕಾರ ಕೂಡಾ ಕೇಂದ್ರದಲ್ಲಿ ಇತ್ತು. ಅಲ್ಲಿ ತನಿಖೆ 6 ತಿಂಗಳು ಚೆನ್ನಾಗಿ ನಡೀತು. ಆಗ ಮುರುಗನ್ ಎನ್ನುವ ವ್ಯಕ್ತಿ ಒಳ್ಳೆಯ ಅಧಿಕಾರಿ ಇದ್ದರು. ಆಗ ಮನ ಮೋಹನ್ ಸಿಂಗ್ ಪ್ರಧಾನಿ ಆಗಿದ್ರು. ನಂತರ ಕಾಂಗ್ರೆಸ್ ಸರ್ಕಾರ ಹೋಯ್ತು. ಮೋದಿ ಸರ್ಕಾರ ಬಂತು. ಅಲ್ಲಿಂದ ತನಿಖೆ ಹಳ್ಳ ಹಿಡಿಯಿತು ” ಎಂದು ವಸಂತ ಬಂಗೇರ ಹೇಳಿದರು.

” ಕಾರ್ಕಳದ ಸುನಿಲ್ ಕುಮಾರ್ ಶಾಸಕ ಮತ್ತು ಮಂತ್ರಿ ಆಗಿದ್ದವರು. ಯಾಕೆ ಸದನದಲ್ಲಿ ಯಾಕೆ ಅವರು ಸೌಜನ್ಯ ಪ್ರಕರಣ ವಿಷಯ ಎತ್ತಿಲ್ಲ ? ಏನು ಸುನಿಲ್ ಕುಮಾರ್ ಸೊಪ್ಪು ಕಡಿಯಲು ಹೋಗಿದ್ರಾ?” ಎಂದು ಬಂಗೇರ ಸುನಿಲ್ ಕುಮಾರ್ ಗೆ ಝಾಡಿಸಿದರು. ಜತೆಗೆ ಹರೀಶ್ ಪೂಂಜಾ ಕೂಡಾ ಸದನದಲ್ಲಿ ಯಾವತ್ತೂ ಪ್ರಸ್ತಾಪಿಸಿಲ್ಲ. ಎಂದು ಬಂಗೇರ ಅವರು ಕಿಡಿಕಾರಿದರು.

ಈ ಮಹಾ ಧರಣಿಯ ನೇತೃತ್ವವನ್ನು ಬೆಳ್ತಂಗಡಿಯ ಮಾಜಿ ಶಾಸಕ ಶ್ರೀ ವಸಂತ ಬಂಗೇರ ಅವರು ವಹಿಸಿಕೊಂಡಿದ್ದಾರೆ. ಪ್ರಗತಿಪರ ಸಂಘಟನೆ ಉಳಿದಂತೆ ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ , ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಸಾಹಿತಿ ಮತ್ತು ಕಾಮ್ರೇಡ್ ನೀಲಾ, ಛಲವಾದಿ ಸಂಘಟನೆ ನಾಯಕ ಮೀನಾಕ್ಷಿ, ಮುನೀರ್ ಕಾಟಿಪಳ್ಳ, ಸುರೇಂದ್ರ ರಾವ್, ಮಹಿಳಾ ಚಳವಳಿ ನಾಯಕಿ ಸಂಗಾತಿ ಗೌರಮ್ಮ, ರೈತ ಸಂಘ ಮುಖಂಡ ಭರತ್ ರಾಜ್, ಪತ್ರಕರ್ತ ವಿಠಲ್ ಮಲೆಕುಡಿಯ, ಸಿಪಿಐ ನಾಯಕರು, ಪ್ರಭಾ ಬೆಳವಂಗಳ, ವಿಚಾರವಾದಿ ನರೇಂದ್ರ ನಾಯಕ್, ಬೆಂಗಳೂರು ವಿವಿಯ ಮಾಜಿ ಸೆನೆಟ್ ಸದಸ್ಯೆ ಲಕ್ಷ್ಮೀ, ಸಬೀಹಾ ಭೂಮಿಗೌಡ, ಪ್ರಗತಿಪರ ಸಂಘಟನೆಗಳು, ಹೈ ಕೋರ್ಟ್ ವಕೀಲ ಶ್ರೀನಿವಾಸ್,ಬಿ.ಎಂ.ಭಟ್ ಮುಂತಾದ 100 ಕ್ಕೂ ಹೆಚ್ಚು ಸಂಘಟನೆಗಳು ಈ ಬೃಹತ್ ಚಳವಳಿಗೆ ತಮ್ಮ ಬೆಂಬಲ ನೀಡಿ ಆಗಮಿಸಿದ್ದರು.

ಕಾರ್ಯಕ್ರಮದ ಮೊದಲಲ್ಲಿ ಪುಣ್ಯಕೋಟಿ ಕಥೆಯ ರೂಪದಲ್ಲಿ ಸೌಜನ್ಯ ಜೀವನ ಕಥೆ ಸುಶ್ರಾವ್ಯವಾಗಿ ಕೇಳಿಬಂದ ಹಾಡನ್ನು ಕೇಳಿ ನೆರೆದಿದ್ದ ಜನರು ಕಣ್ಣು ಒದ್ದೆ ಮಾಡಿಕೊಂಡರು.

ನಾವು ಸೌಜನ್ಯಗೆ ನ್ಯಾಯ ಕೊಡದೆ ಮಲಗುವ ಮಕ್ಕಳಲ್ಲ – ಬಿ.ಎಂ.ಭಟ್

ಸೌಜನ್ಯ ಹೋರಾಟ ನಡೆಸಿದರೆ ಕ್ಷೇತ್ರಕ್ಕೆ ಅವಮಾನ ಆಗುತ್ತದೆ ಎನ್ನುವ ಮಾತಿಗೆ ಹೋರಾಟಗಾರ ಬಿ ಎಂ ಭಟ್ ಖಡಕ್ ಉತ್ತರ ನೀಡಿದ್ದಾರೆ. ಸೌಜನ್ಯ ಹೋರಾಟ ನಡೆದರೆ ಇವರಿಗೆ ಯಾಕೆ ಉರಿಯುತ್ತೆ ? ಸೌಜನ್ಯ ಅತ್ಯಾಚಾರ ಮಾಡಿದ ಬಗ್ಗೆ ಮಾತಾಡಿದರೆ ಅದು ಧರ್ಮಸ್ಥಳ ಬಗ್ಗೆ ಅವಮಾನ ಹೇಗಾಗುತ್ತದೆ. ನಂಗೆ ಧರ್ಮಸ್ಥಳ ಕುಟುಂಬಕ್ಕೆ ಅವಮಾನ ಆಗುತ್ತದೆ ಎಂದು ಹೇಳಿ ನಮಗೆ ಸೀನಪ್ಪ ಎಂಬವರು ನೋಟೀಸು ಕಳಿಸುತ್ತಾರೆ. ಈ ಸೀನಪ್ಪ ಯಾರು. ನಾವು ಹೋರಾಟ ಮಾಡಿದ್ರೆ ಕ್ಷೇತ್ರಕ್ಕೆ ಅವಮಾನ ಹೇಗಾಗುತ್ತದೆ ? ಈ ಸೀನಪ್ಪನ್ನ ಹಿಡಿದ್ರೆ ಎಲ್ಲಾ ಗೊತ್ತಾಗುತ್ತೆ ಎಂದು ಬಿಎಂ ಭಟ್ ಕಿಡಿ ಕಾರಿದ್ದಾರೆ. ನಾವು ಸೌಜನ್ಯಗೆ ನ್ಯಾಯ ಕೊಡದೆ ಮಲಗುವ ಮಕ್ಕಳಲ್ಲ ಎಂದು ಬಿಎಮ್ ಭಟ್ ಹೇಳಿದ್ದಾರೆ.

ಇದನ್ನೂ ಓದಿ: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ : ಮತ್ತೆ ಸಿಡಿದ ವಸಂತ ಬಂಗೇರ ,ಇಂದು ಬೆಳ್ತಂಗಡಿಯಲ್ಲಿ ಮಹಾಧರಣಿ

Leave A Reply

Your email address will not be published.