ಚಂದ್ರಯಾನ್-3 ಮಿಷನ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪಾಕಿಸ್ತಾನ, ಪಕ್ಕದ ರಾಷ್ಟ್ರವೊಂದು ಹೀಗೂ ಹೇಳುತ್ತಾ ?
ಭಾರತದ ಚಂದ್ರಯಾನ 3 (Chandrayan 3)ಯಶಸ್ಸಿನ ಬಗ್ಗೆ ವಿಶ್ವಕ್ಕೆ ವಿಶ್ವವೇ ಮೆಚ್ಚುಗೆಯ ಮಹಾಪೂರವನ್ನು ಹರಿಸಿ ಭಾರತ ಹೆಮ್ಮೆಯಂತೆ ಬೀಗುವಂತೆ ಮಾಡಿದೆ. ಆದರೆ ನಮ್ಮ ಪಕ್ಕದ ರಾಷ್ಟ್ರ ಸಾಮಾನ್ಯವಾಗಿ ವೈರಿ ರಾಷ್ಟ್ರ ಎಂದೇ ಕರೆಸಿಕೊಳ್ಳುವ ಪಾಕಿಸ್ತಾನವು ನಮ್ಮ ಈ ಸಾಧನೆಯ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಿದೆ ಎಂಬುದು ನಿಮಗೆ ಗೊತ್ತೇ ?
ಹೌದು 23 ನೆಯ ತಾರೀಖಿನಂದು ನಾವು ಅಂತರಿಕ್ಷ ಯಾನ ಮತ್ತು ಬಾಹ್ಯಾಕಾಶ ವಿಜ್ಞಾನ ಲೋಕದಲ್ಲಿ ಮಹತ್ತರ ಸಾಧನೆಗೈದಿದ್ದೆವು. ಅಂದು ಬುಧವಾರದ ಸಂಜೆಯ ಹೊತ್ತಿಗೆ ಭಾರತ ಚಂದನ ಅಂಗಳಕ್ಕೆ ಕಾಲು ಚಾಚಿ ನಿಂತಿತ್ತು. ದೇಶ ವಿದೇಶಗಳು ಭಾರತದ ಸಾಧನೆಯನ್ನು ಹೊಗಳಿದ್ದರು. ಆದರೆ ಅದನ್ನು ರಾಷ್ಟ್ರ ಪಾಕಿಸ್ತಾನ ಮಾತ್ರ ಏನು ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತಿತ್ತು. ಇದೀಗ ವಿಶ್ವದಾದ್ಯಂತ ಶ್ಲಾಘನೆಗಳು ಭಾರತಕ್ಕೆ ಒದಗಿ ಬರುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಬಾಯಿಬಿಟ್ಟಿದೆ.
ಏನು ಹೇಳಿತು ಪಾಕಿಸ್ತಾನ ಮತ್ತು ಪಾಕಿಸ್ತಾನ ಮೀಡಿಯಾ ?
ಚಂದ್ರಯಾನ 3 ಮಿಷನ್ ಯಶಸ್ಸನ್ನು ಪಾಕಿಸ್ತಾನವು ಮಹಾನ್ ವೈಜ್ಞಾನಿಕ ಸಾಧನೆ ಎಂದು ಬಣ್ಣಿಸಿದೆ ಇಸ್ರೋ ವಿಜ್ಞಾನಿಗಳ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ ಪಾಕಿಸ್ತಾನ. ಜತೆಗೆ ಅದೇ ದೇಶದ ಪ್ರಮುಖ ಪತ್ರಿಕೆಗಳು ಭಾರತವನ್ನು ಇನ್ನೊಂದು ಹೆಜ್ಜೆ ಹೆಚ್ಚು ಹೊಗಳಿವೆ. ವಿಶ್ವದ ಶ್ರೀಮಂತ ರಾಷ್ಟ್ರಗಳಿಗಿಂತ ಕಡಿಮೆ ಬಜೆಟ್ಟಿನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಭಾರಿ ಸಾಧನೆ ಮಾಡಿದೆ ಎಂದು ಪಾಕಿಸ್ತಾನದ ಪತ್ರಿಕೆಗಳು ಪ್ರಶಂಸೆ ವ್ಯಕ್ತಪಡಿಸಿವೆ.
ಭಾರತದ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶ ವಿದೇಶಾಂಗ ಕಚೇರಿಯ ವಕ್ತಾರಾ ಮುಮ್ತಾಜ್ ಜಹರಾ ಬಲೋಚ್, ‘ ಇದು ದೊಡ್ಡ ವೈಜ್ಞಾನಿಕ ಸಾಧನೆ ಎಂದು ಹೇಳಬಲ್ಲೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು ‘ ಎಂದು ಚುಟುಕಾಗಿ ತಮ್ಮ ಮಾತು ಮುಗಿಸಿದ್ದಾರೆ. ಆದರೆ ಪಾಕಿಸ್ತಾನದ ಮಾಧ್ಯಮಗಳು ಬುಧವಾರದ ಭಾರತದ ಐತಿಹಾಸಿಕ ಘಟನೆಗೆ ಮೊದಲ ಪುಟದ ಕವರೇಜ್ ನೀಡಿ ಹೆಚ್ಚಿನ ಪ್ರಚಾರ ಕೊಟ್ಟಿವೆ.
ಪಾಕಿಸ್ತಾನದ ಡಾನ್ ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ, ‘ ಭಾರತದ ಬಾಹ್ಯಾಕಾಶ ಅನ್ವೇಷಣೆ ‘ ಎಂಬ ಶೀರ್ಷಿಕೆ ಅಡಿಯಲ್ಲಿ ಚಂದ್ರಯಾನ 3 ಮಿಷನ್ ಯಶಸ್ಸನ್ನು ಐತಿಹಾಸಿಕ ಎಂದು ಕರೆದಿದೆ.0ಶ್ರೀಮಂತ ರಾಷ್ಟ್ರಗಳು ಹೆಚ್ಚಿನ ಮೊತ್ತವನ್ನು ವ್ಯಯಿಸಿ ಸಾಧಿಸಿದ್ದನ್ನು ಭಾರತವು ಕೆಲವೇ ಕೆಲವು ಬಜೆಟ್ ಖರ್ಚು ಮಾಡಿ ಆ ನಿರ್ದಿಷ್ಟ ಸಾಧನೆ ಮಾಡಿದೆ. ಈ ಸಾಧನೆಯು ಮೆಚ್ಚುಗೆಗೆ ಅರ್ಹವಾಗಿದೆ ಎಂದು ಡಾನ್ ಪತ್ರಿಕೆ ಬರೆದಿದೆ. ಬಹುಶ: ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖವಾದದ್ದು ಭಾರತದ ಸರ್ಕಾರದ ನೀತಿ ಇರಬಹುದು. ಅದರ ಜೊತೆಗೆ ಅದನ್ನು ಸಾಧ್ಯ ಮಾಡಿದ್ದು ಭಾರತದ ಇಂಜಿನಿಯರ್ ಗಳು ಮತ್ತು ವಿಜ್ಞಾನಿಗಳ ಗುಣಮಟ್ಟ ಮತ್ತು ಸಮರ್ಪಣಾ ಭಾವವಾಗಿದೆ ಎಂದು ಪತ್ರಿಕೆಯು ಕಾಮೆಂಟ್ ಮಾಡಿದೆ. “ನಮ್ಮ ಮತ್ತು ಭಾರತದ ಹೋಲಿಕೆಗಳು ಅಸಹ್ಯಕರವಾಗಿವೆ; ಆದರೆ ಭಾರತದ ಬಾಹ್ಯಾಕಾಶ ಯಶಸ್ಸಿನಿಂದ ಪಾಕಿಸ್ತಾನವು ಸಾಕಷ್ಟು ಕಲಿಯಬಹುದಾಗಿದೆ ” ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ಸಂಪಾದಕೀಯದಲ್ಲಿ ವಿವರಿಸಿದೆ.
ಅದೇ ರೀತಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಅನ್ನುವ ಇನ್ನೊಂದು ಪತ್ರಿಕೆಯು ಕೂಡ ಭಾರತದ ಸಾಧನೆ ಎಂದು ಹೊಗಳಿದೆ. ಅಮೇರಿಕಾ ರಷ್ಯ ಚೀನಾ ಮುಂತಾದ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ಮಾಡಲಾಗದ ಸಾಧನೆಯನ್ನು ಭಾರತ ಸಾಧಿಸಿ ತೋರಿಸಿದೆ ಎಂದು ಅದು ಶ್ಲಾಘಿಸಿದೆ.