ದಕ್ಷಿಣ ಕನ್ನಡ: ನಿಂತಿದ್ದ ಲಾರಿಗೆ ಸೀರೆಯ ತೊಟ್ಟಿಲು ಕಟ್ಟಿದ ತಾಯಿ!! ಮಗುವನ್ನು ತೂಗುವ ದೃಶ್ಯ ವೈರಲ್ !

ದಕ್ಷಿಣ ಕನ್ನಡ: ತಾಯಿ ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎನ್ನುವುದು ಜಗದಲ್ಲಿರುವ ಸತ್ಯ. ತಾಯಿ ಪ್ರೀತಿಗೆ ಮಿಗಿಲಾಗಿ ಯಾವ ಪ್ರೀತಿಯೂ ಇಲ್ಲ. ಅಂತೆಯೇ ಇಲ್ಲೊಂದು ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡಿದ್ದು, ಇತ್ತೀಚಿಗೆ ಸದ್ದು ಮಾಡಿದ್ದ ಕನ್ನಡದ ಖ್ಯಾತ ನಟರೊಬ್ಬರ ಸಿನಿಮಾವೊಂದರ ದೃಶ್ಯವನ್ನು ಹೋಲುವ ಹೆತ್ತ ಕರುಳಿನ ಮಮತೆಯ ದೃಶ್ಯ ಜಿಲ್ಲೆಯಿಂದ ಸುದ್ದಿಯಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ (ಮಂಗಳೂರು ಬೆಂಗಳೂರು ರಸ್ತೆಯಲ್ಲಿ) ಈ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ. ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ರಸ್ತೆ ಕಾಮಗಾರಿ ನಡೆಸುವ ಕಾರ್ಮಿಕ ಕುಟುಂಬವೊಂದರ ಮಹಿಳೆಯೊಬ್ಬರು ತನ್ನ ಎಳೆಯ ಕಂದಮ್ಮನನ್ನು ನಿಂತಿದ್ದ ಲಾರಿಯೊಂದಕ್ಕೆ ಬಟ್ಟೆಯ ಉಯ್ಯಾಲೆ ಕಟ್ಟಿ ತೂಗುವ ದೃಶ್ಯ ಇದಾಗಿದೆ.

ರಸ್ತೆ, ಕಟ್ಟಡ ಮುಂತಾದ ಕಾಮಗಾರಿಗಳಿಗೆ ಬರುವ ಹೊರ ಜಿಲ್ಲೆಗಳ ವಲಸೆ ಕಾರ್ಮಿಕರು ಇಲ್ಲಿ ಜೋಪಡಿ ನಿರ್ಮಿಸಿಕೊಂಡು ದಿನ ದೂಡುತ್ತಾರೆ. ಟಾರ್ಪಲ್ ಹೊದಿಕೆಯ ಗೂಡು, ಚಿಕ್ಕ ಜೋಪಡಿ ಮಾಡಿಕೊಂಡು ವಾಸ್ತವ್ಯ ಹೂಡುವ ಇಂತಹ ಕಾರ್ಮಿಕ ಕುಟುಂಬಗಳ ಮಹಿಳೆಯರು ತಮ್ಮ ಕೂಸುಗಳನ್ನು ಕಂಕುಳಲ್ಲಿ ಕೂರಿಸಿಕೊಂಡೇ ಬಿಸಿಲಿಗೆ ಕೆಲಸ ಮಾಡುತ್ತಿರುವುದು ಕಲ್ಲೆದೆಯನ್ನೂ ಕರಗಿಸುವಂತ್ತಿರುತ್ತದೆ.

ತಮ್ಮ ಕಷ್ಟ ಏನೂ ಅರಿಯದ ಮುಗ್ಧ ಕಂದಮ್ಮಗಳಿಗೆ ಅರಿವಾಗದೆ ಇರಲಿ, ಅವರ ನಿದ್ದೆಗೆ ಕೊರತೆ ಬಾರದಿರಲಿ ಎನ್ನುವ ತಾಯಿಯ ನಿಷ್ಕಲ್ಮಶ ಮನಸ್ಸು ಇಂದು ಕೆಲಸದ ನಡುವೆಯೇ ನಿಂತಿದ್ದ ಲಾರಿಗೆ ತೊಟ್ಟಿಲು ಕಟ್ಟಿ ಮಗುವಿನ ಸುಖನಿದ್ರೆಗೆ ತೊಟ್ಟಿಲು ತೂಗುವ ದೃಶ್ಯ ಸಾಮಾಜಿಕ ಜಾಲತಾಣದ ಮೂಲಕ ಜಗತ್ತಿಗೆ ತಿಳಿದುಬಂದಿದೆ. ಒಂದು ವೇಳೆ ಹರಕು ಸೀರೆಯಲ್ಲಿ ತೊಟ್ಟಿಲು ಬಿಗಿದು, ಅದರಲ್ಲಿ ಮಗು ಮಲಗಿಸುವ ಹೊತ್ತಲ್ಲಿ, ಏಕಾಏಕಿ ಲಾರಿ ಡ್ರೈವರ್ ನ ಗಮನಕ್ಕೆ ಇದು ಬಾರದೆ ಲಾರಿ ಹೊರಟರೆ…..? ಪ್ರಾರ್ಥನೆ ಒಂದೇ ಇಳಿದಿರೋದು….!!!

Leave A Reply

Your email address will not be published.