Home latest Delhi:ನಿರ್ಮಾಣ ಹಂತದ ರೈಲ್ವೇ ಸೇತುವೆ ಕುಸಿತ!! 17 ಮಂದಿ ಸಾವು-ಹಲವರು ಕಣ್ಮರೆ

Delhi:ನಿರ್ಮಾಣ ಹಂತದ ರೈಲ್ವೇ ಸೇತುವೆ ಕುಸಿತ!! 17 ಮಂದಿ ಸಾವು-ಹಲವರು ಕಣ್ಮರೆ

Delhi

Hindu neighbor gifts plot of land

Hindu neighbour gifts land to Muslim journalist

 

Delhi: ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ 17 ಮಂದಿ ಸಾವನ್ನಪ್ಪಿದ ಘಟನೆಯು ರಾಜಧಾನಿ ದೆಹಲಿಯ (Delhi) ಮಿರೋರಾಂ ಸಾಯಿರಾಂಗ್ ಪ್ರದೇಶದಿಂದ ವರದಿಯಾಗಿದೆ.

ಘಟನೆಯಲ್ಲಿ ಸುಮಾರು 17 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಹಲವರು ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಪ್ರಕಾರ ಘಟನೆ ನಡೆದ ಸಂದರ್ಭ ಸುಮಾರು 35-40 ಮಂದಿ ಕಾರ್ಮಿಕರು ಸ್ಥಳದಲ್ಲಿದ್ದು, ಕಣ್ಮರೆಯಾದವರಿಗಾಗಿ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಇನ್ನೇನು ಕೆಲ ಸಮಯಗಳಲ್ಲಿ ಪೂರ್ಣಗೊಳ್ಳುವುದರಲ್ಲಿತ್ತು ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದ್ದು, ಘಟನೆಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ.