ಚಂದ್ರ ಮತ್ತು ಚಂದ್ರಯಾನದ ಕುರಿತ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಗುಟ್ಟುಗಳು !

Interesting facts about the Moon and Chandrayaan that you don't know

Chandrayaan and Moon:

(Today, 23rd August 2023, Chandrayana 3 lander lands on Moon. Process starts at 5.20 PM and ends at 6.04 PM)
ಇದು ಚಂದ್ರಯಾನ 3 ಸ್ಪೆಷಲ್. ಇಲ್ಲಿ ನಾವು ಭೂಮಿಯ ಉಪಗ್ರಹ ಚಂದ್ರನ ಬಗ್ಗೆ ಇನ್ನಷ್ಟು ಆಸಕ್ತಿಕರವಾದ ವಿಷಯಗಳನ್ನು(intresting news about Chandrayaan and Moon ) ಹಂಚಿ ಕೊಳ್ಳುತ್ತಿದ್ದೇವೆ.
ಚಂದ್ರನು ಭೂಮಿಯನ್ನು ಸರಾಸರಿ 384,400 ಕಿಲೋಮೀಟರ್ಗಳಷ್ಟು ದೂರದಲ್ಲಿ ಸುತ್ತುತ್ತಿದ್ದಾನೆ. ಅಂದರೆ ವಾಣಿಜ್ಯ ವಿಮಾನದಲ್ಲಿ ತಡೆರಹಿತವಾಗಿ ಅಲ್ಲಿಗೆ ಹಾರಲು 17 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನೆನಪಿಡಿ, ವಿಮಾನದಲ್ಲಿ ಚಂದ್ರನಲ್ಲಿಗೆ ಸಾಗಲು ಆಗುವುದಿಲ್ಲ.

ಚಂದ್ರನ ಭೌಗೋಳಿಕ ವಿಶೇಷ:

  • ಚಂದ್ರನ ತ್ರಿಜ್ಯ: 1,737 ಕಿಲೋ ಮೀಟರ್ ಗಳು. ಆದ್ರೆ ಭೂಮಿಯ ತ್ರಿಜ್ಯ 6378 ಕಿಲೋ ಮೀಟರ್ ಗಳು
  • ಭೂಮಿಯಿಂದ ಚಂದ್ರ ಇರುವ ಸರಾಸರಿ ದೂರ: 384,400 ಕಿಲೋಮೀಟರ್
  • ಚಂದ್ರನು ಭೂಮಿಗಿಂತ ಸರಾಸರಿ 80 ಭಾಗ ಕಮ್ಮಿ ತೂಕ ಹೊಂದಿದ್ದಾನೆ.
  • ಚಂದ್ರನು ಭೂಮಿಗಿಂತ ಸರಾಸರಿ 27 % ಅಷ್ಟೇ ಇರೋದು ಗಾತ್ರದಲ್ಲಿ. ಅಂದರೆ ಹೆಚ್ಚು ಕಮ್ಮಿ ಗಾತ್ರದಲ್ಲಿ ಭೂಮಿಯ ಕಾಲು ಭಾಗ ಮಾತ್ರ !
  • ಚಂದ್ರನ ತಾಪಮಾನ: -173°C ರಿಂದ 127°C
  • ಸರಾಸರಿ ಕಕ್ಷೆಯ ವೇಗ: ಗಂಟೆಗೆ 3,683 km ( ಸೆಕುಂಡ್ ಗೆ 1.02 km)
  • ದಿನದ ಉದ್ದ: 27 ದಿನಗಳು. ಚಂದ್ರನ ವರ್ಷದ ಅವಧಿ ಕೂಡಾ 27 ದಿನಗಳು !
  • ಚಂದ್ರನ ಮೇಲ್ಮೈ: ಕಲ್ಲಿನ ಮಾದರಿಯದ್ದು
  • ಪೂರ್ಣ ಸೂರ್ಯನ ಬೆಳಕಿನಲ್ಲಿ, ಚಂದ್ರನ ತಾಪಮಾನವು 127° C ತಲುಪುತ್ತದೆ.
  • ಅಲ್ಲಿ 13.5 ದಿನಗಳ ಕಾಲ ಅಧಿಕ ಉಷ್ಣತೆ ಇರುತ್ತದೆ ಮತ್ತು ನಂತರ 13.5 ದಿನಗಳ ಕತ್ತಲು ಇದ್ದು ಇರುತ್ತದೆ.
  • ಒಮ್ಮೆ ಸೂರ್ಯನು ಕೆಳಗಿಳಿದ ನಂತರ ಕುಳಿಗಳ ಕೆಳಭಾಗದಲ್ಲಿ ತಾಪಮಾನವು -173 °C ಗೆ ಕುಸಿಯಬಹುದು.
  • ಚಂದ್ರನ ಕಕ್ಷೆಯು ಸಂಪೂರ್ಣವಾಗಿ ವೃತ್ತಾಕಾರವಾಗಿಲ್ಲ, ಆದರೆ 2,52,000 ಮತ್ತು 2,]25,600 ಕಿಲೋಮೀಟರ್ಗಳ ನಡುವೆ ಕಕ್ಷೆಯು ಬದಲಾಗುತ್ತದೆ. ಇದು ಆಕಾಶದಲ್ಲಿರುವ ಅತಿ ದೂರದಲ್ಲಿರುವ ಕಾರಣ ಅದು ನಿಜವಾಗಿರುವುದಕ್ಕಿಂತ ಹತ್ತಿರದಲ್ಲಿದೆ ಎಂದು ನಮಗೆ ಕಾಣಿಸುತ್ತದೆ.
  • ಚಂದ್ರನ ಮೇಲೆ ಅನಿಲಗಳು ಇಲ್ಲ ಅಂತಾನೆ ಹೇಳಬಹುದು. ಹಾಗಾಗಿ ಅಲ್ಲಿ ವಾತಾವರಣ ಇಲ್ಲ ಎನ್ನಬಹುದು. ಆದರೆ, ಇತ್ತೀಚಿನ ಸಂಶೋಧನೆಗಳ ಪ್ರಕಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅನಿಲಗಳು ಇವೆ.
  • ಚಂದ್ರ ಬಳಿ ಸಾಗುವಾಗ -140 ಸೆಂಟಿಗ್ರೇಡ್ ಕನಿಷ್ಠ ಉಷ್ಣತೆಯನ್ನುಹಾದು ಹೋಗಬೇಕಾಗುತ್ತದೆ. ಗರಿಷ್ಟ ತಾಪಮಾನ + 550 ರಿಂದ 2000 ಸೆಂಟಿಗ್ರೇಡ್ ತನಕ ಕೂಡಾ ಹೊರಗಿನ ಉಷ್ಣಾಂಶ ಏರಬಹುದು
    ಸ್ಪೇಸ್ ವಾಹನದ ಒಳಗೆ ಮಾತ್ರ ಏರ್ ಕಂಡೀಷನ್ ಇದ್ದು, ತಣ್ಣಗಿನ ವಾತಾವರಣ ಇರುತ್ತದೆ

ವಿವಿಧ ದೇಶಗಳ ಚಂದ್ರಯಾನದ ಬಗ್ಗೆ:

  • ಚಂದ್ರನಲ್ಲಿ ಮೊದಲ ಬಾರಿಗೆ ಕಾಲಿಟ್ಟ ದೇಶ ಅಮೆರಿಕ
  • ಚಂದ್ರನಲ್ಲಿಗೆ ಮೊದಲು ಕಾಲಿಟ್ಟ ವ್ಯಕ್ತಿ ಅಮೇರಿಕಾದ ನೀಲ್ ಆರ್ಮ್ ಸ್ಟ್ರಾಂಗ್, ಇಸವಿ 1969 ರಲ್ಲಿ
  • ಮೊದಲ ಮಾನವ ಸಹಿತ ಚಂದ್ರಯಾನ ನಡೆಸಿದ ಗಗನ ನೌಕೆಯ ಹೆಸರು ಅಪೋಲೋ 11
  • ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ತಕ್ಷಣ ಉದ್ಘರಿಸಿದ್ದು ಏನು ಗೊತ್ತೇ ? ” ಇದು ಮನುಷ್ಯನ ಸಣ್ಣ ಹೆಜ್ಜೆ, ಆದರೆ ಮನುಕುಲದ ಬಿಗ್ ಲೀಪ್ (ದೊಡ್ಡ ಹೆಜ್ಜೆ) (One small step for a man and a big leap for man kind)
  • ಇಲ್ಲಿಯ ತನಕ ಒಟ್ಟು 14 ಮಂದಿ ಚಂದ್ರನ ಮೇಲೆ ಕಾಲಿಟ್ಟಿದ್ದಾರೆ. ಅವರೆಲ್ಲರನ್ನೂ ಅಮೇರಿಕಾದ ಅಂತರಿಕ್ಷ ಸಂಶೋಧನಾ ಸಂಸ್ಥೆ ನಾಸಾ ಕಳಿಸಿದೆ.
  • ಯುಜೀನ್ ಸೆರ್ಮನ್ ( Eugene A. Cernan) ಚಂದ್ರನಲ್ಲಿ ಕಾಲಿಟ್ಟ ಕೊನೆಯ ಮನುಷ್ಯ – ಅಪೋಲೋ 17 ಗಗನ ನೌಕೆಯ ಮೂಲಕ ಪ್ರಯಾಣ ನಡೆದಿತ್ತು. ಅದು ನಡೆದದ್ದು 1972 ನೇ ಇಸವಿಯಲ್ಲಿ.
  • 1972 ರಿಂದ ಇವತ್ತಿನ ತನಕ, ಈ 50 ವರ್ಷಗಳಲ್ಲಿ ಯಾರೂ ಚಂದ್ರನ ಮೇಲೆ ಇಳಿದಿಲ್ಲ. ಇದಕ್ಕೆ ಕಾರಣ ಕೂಡ ಇದೆ. ಅಪೋಲೊ 17 ಲಾಂಚ್ ಆದ ನಂತರ ಅಮೆರಿಕಾದ ಆಡಳಿತ ನಾಸಾಗೆ ಹೆಚ್ಚಿನ ಹಣಕಾಸಿನ ನೆರವು ನೀಡಲಿಲ್ಲ. ಆದುದರಿಂದ ಮ್ಯಾನ್ಡ್ ಮಿಷನ್ ಸ್ಥಗಿತಗೊಂಡಿತು.
  • ಮುಂದಿನ ಮಾನವ ಸಹಿತ ಚಂದ್ರಯಾನ 2024 ರಲ್ಲಿ ಅಂದರೆ ಬರುವ ವರ್ಷ ನಡೆಯಲಿದೆ. ಅದನ್ನು ಅಮೇರಿಕಾದ ನಾಸಾ ಪ್ರಾಯೋಜಿಸಲಿದೆ.
  • ಚಂದ್ರಯಾನ ಹೊರಟಿದ್ದ ಅಪೊಲೊ 14 ರಲ್ಲಿ ಪ್ರಯಾಣಿಸಿದ್ದ ಅಲೆನ್ ಶೆಫರ್ಡ್ (Alan Shepard) ಎಂಬಾತ ಚಂದ್ರನ ಮೇಲೆ ಗಾಲ್ಫ್ ಆಡಿದ್ದ.
  • ಚಂದ್ರನಲ್ಲಿ ಸಣ್ಣ ಕಾರು ಮಾದರಿಯ ಗಾಡಿಯಲ್ಲಿ ಓಡಾಡಿದವನ ಹೆಸರು ಡೇವ್ ಸ್ಕಾಟ್ (Dave Scott)- ಅದು 1971 ರಲ್ಲಿ.
  • ಕೇವಲ 615 ಕೋಟಿ ರೂಪಾಯಿಗಳಲ್ಲಿ ತಯಾರಾಗಿದೆ ಇಸ್ರೋ ನಡೆಸಿದ ಚಂದ್ರಯಾನ 3

ಚಂದ್ರಯಾನ 2 ಫೇಲ್ ಆಯ್ತಾ ?

ಕಳೆದ ಸಲದ ಚಂದ್ರಯಾನ 2 ಯಾಕೆ ಫೇಲ್ ಆಯ್ತು? ಚಂದ್ರಯಾನ 2 ಪೂರ್ತಿ ಫೇಲ್ ಆಗಿಲ್ಲ. ಅದು ಕೊನೆಯ ಕ್ಷಣಗಳಲ್ಲಿ ಆಕಾಶದಿಂದ ಚಂದ್ರನ ನೆಲಕ್ಕೆ ಇಳಿಯುವ ಹಂತದಲ್ಲಿ ಕ್ರಾಶ್ ಲ್ಯಾಂಡಿಂಗ್ ಆಗಿತ್ತು. ನಿಧಾನಕ್ಕೆ ಚಂದ್ರನ ನೆಲದ ಮೇಲೆ ತಳ ಊರುವ ಬದಲು ಒಮ್ಮೆಲೆ ಬಿದ್ದು ಬಿಟ್ಟು ಲ್ಯಾಂಡರ್ ಮತ್ತು ರೋವರ್ ಗೆ ಡ್ಯಾಮೇಜ್ ಆಗಿತ್ತು. ಕ್ರಾಶ್ ಆಗಿ ನೆಲದ ಮೇಲೆ ಬೀಳುವ ತನಕ ವಿಕ್ರಂ ರೋವರ್ ನಿರಂತರವಾಗಿ ತನ್ನ ಸಂಶೋಧನೆಗಳನ್ನು ಭೂಮಿಗೆ ಕಳಿಸುತ್ತಲೇ ಇತ್ತು.

ಇದನ್ನೂ ಓದಿ: IAS Interesting Questions: ಭೂಮಿಯಲ್ಲಿ ತೂಗುವ 1 ಕೆಜಿ ವಸ್ತುವಿನ ತೂಕ ಚಂದ್ರನಲ್ಲಿ ಎಷ್ಟು ಕಿಲೋ ಇರುತ್ತದೆ ?

5 Comments
  1. MichaelLiemo says

    ventolin 4mg: Buy Albuterol for nebulizer online – ventolin price uk
    buy cheap ventolin online

  2. MichaelLiemo says

    ventolin pills: Ventolin inhaler best price – buy ventolin online
    buy ventolin tablets online

  3. Josephquees says

    lasix 40mg: lasix dosage – furosemida

  4. Timothydub says

    pharmacy website india: indian pharmacy – best india pharmacy

  5. Timothydub says

    Online medicine home delivery: Online medication home delivery – indian pharmacy online

Leave A Reply

Your email address will not be published.