Cloth cleaning tips: ಒಂದು ಬಟ್ಟೆಯ ಬಣ್ಣ ಇನ್ನೊಂದು ಬಟ್ಟೆಗೆ ಅಂಟಿದರೆ ಈ ರೀತಿ ಮಾಡಿ! ಕಲೆ ಮಂಗಮಾಯ!!!

Lifestyle Cloth cleaning tips how to remove colour from clothes here is simple tricks in kannada

Cloth cleaning tips: ನೀವೇನಾದರೂ ಬಟ್ಟೆ ಒಗೆಯುವ ಸಂದರ್ಭದಲ್ಲಿ ಒಂದು ಬಟ್ಟೆಗೆ ಇನ್ನೊಂದು ಬಟ್ಟೆಗೆ ಬಣ್ಣ ಅಂಟಿಕೊಳ್ಳುವ ಸಂದರ್ಭ ಎದುರಾಗಿರಬಹುದು (Cloth cleaning tips). ಈ ಕಾರಣದಿಂದ ಎಷ್ಟೋ ಬಟ್ಟೆಗಳು ಹಾಳಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಬಟ್ಟೆ ಒಗೆಯುವ ಸಂದರ್ಭದಲ್ಲಿ ಬಣ್ಣ ಬಿಡುವ ಬಟ್ಟೆಗಳನ್ನು ಎಲ್ಲಾ ಬಟ್ಟೆಗಳ ಜೊತೆ ಬೆರೆಸಬಾರದು.

ನೀವೇನಾದರೂ ಹೊಸ ಬಟ್ಟೆ ಖರೀದಿ ಮಾಡಿದರೆ, ಅವುಗಳನ್ನು ಉಪ್ಪು ನೀರಿನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿಟ್ಟರೆ ಅದರಲ್ಲಿ ಇರುವ ಕಚ್ಚಾ ಬಣ್ಣ ಹೊರಗೆ ಬರುತ್ತದೆ. ಹಾಗಾಗಿ ಈ ಬಟ್ಟೆಗಳೊಂದಿಗೆ ನೀವು ಇತರ ತಿಳಿ ಬಣ್ಣದ ಬಟ್ಟೆಗಳನ್ನು ನೆನೆಸಿಟ್ಟರೆ ಸಮಸ್ಯೆ ತಲೆದೋರುತ್ತದೆ.

ಏಕೆಂದರೆ ನಿಮ್ಮ ಒಂದೇ ಒಂದು ಅಜಾಗರೂಕತೆ ನಿಮ್ಮ ದುಬಾರಿ ಬಟ್ಟೆಯನ್ನು ಸ್ವಲ್ಪ ಯಾವುದೇ ಕೆಲಸಕ್ಕೆ ಬಾರದ ಯೋಗ್ಯವಲ್ಲದ ಬಟ್ಟೆಯಾಗಿ ಬಿಡುತ್ತದೆ. ಕಲೆ ಅಂಟಿದರೆ ಸಾಮಾನ್ಯ ತೊಳೆಯುವಿಕೆಯಿಂದ ಕೂಡಾ ಇಂತಹ ಕಲೆ ತೆಗೆಯುವುದು ನಿಜಕ್ಕೂ ಕಷ್ಟಸಾಧ್ಯ.

ಒಂದು ವೇಳೆ ನಿಮ್ಮ ಬಟ್ಟೆ ಕಲೆಯೇನಾದರೂ ಆಗಿದ್ದರೆ, ಅದನ್ನು ಆಲ್ಕೋಹಾಲ್‌ ಮೂಲಕ ತೆಗೆಯಬಹುದು. ಕಲೆಯ ಮೇಲೆ ಒಂದು ಅಥವಾ ಎರಡು ಟೀ ಚಮಚ ಆಲ್ಕೋಹಾಲ್‌ ಅನ್ನು ಹಾಕಿದರೆ ಹತ್ತು ನಿಮಿಷಗಳ ನಂತರ ತಿಕ್ಕಿದರೆ ಬ್ರಷ್‌ ಮೂಲಕ, ನಿಧಾನವಾಗಿ, ಕಲೆ ಹೊರಬರುತ್ತದೆ. ಅನಂತರ ನೀವು ಒಳ್ಳೆ ನೀರಿನಲ್ಲಿ ತೊಳೆದು ಒಣಗಿಸಬಹುದು.

ನಿಮ್ಮ ಬಟ್ಟೆಗಳನ್ನು ಸುಲಭವಾಗಿ ತೊಳೆದುಹಾಕುವಲ್ಲಿ ಹೈಡ್ರೋಜನ್‌ ಪೆರಾಕ್ಸೈಡ್‌ ಕೂಡಾ ಬಳಕೆ ಮಾಡಬಹುದು. ಇದರಿಂದ ಬಟ್ಟೆಯ ಗುಣಮಟ್ಟ ಹಾಳಾಗುವುದಿಲ್ಲ. ಇದಕ್ಕಾಗಿ ನೀವು ಒಂದು ಲೀಟರ್‌ ನೀರನ್ನು ಬಿಸಿ ಮಾಡಿ, ಅದಕ್ಕೆ ಒಂದರಿಂದ ಎರಡು ಚಮಚ ಹೈಡ್ರೋಜನ್‌ ಪೆರಾಕ್ಸೈಡ್‌ ಬೆರೆಸಿಡಿ. ಕಲೆಯಿರುವ ಬಟ್ಟೆಯ ಭಾಗವನ್ನು ಸ್ವಲ್ಪ ಸಮಯದವರೆಗೆ ನೆನೆಸಿಟ್ಟರೆ ನೀರು ತಣ್ಣಗಾದಾಗ ಬ್ರಷ್‌ನಿಂದ ಉಜ್ಜಿ, ಬಟ್ಟೆಯನ್ನು ಶುದ್ಧ ನೀರಿನಿಂದ ತೊಳೆಯಿರಿ.

ಅಡಿಗೆ ಸೋಡಾ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ. ನಮ್ಮ ಗೃಹಿಣಿಯರಿಗೆ ಇದೊಂದು ಒಳ್ಳೆಯ ಮಿತ್ರ ಎನ್ನಬಹುದು. ಹಾಗೆನೇ ಅಡುಗೆ ಸೋಡವನ್ನು ಕಲೆಗಳ ಶತ್ರು ಎಂದು ಹೇಳಲಾಗುತ್ತದೆ. ಬಟ್ಟೆಗಳಿಂದ ಬಣ್ಣದ ಕಲೆ ತೆಗೆಯುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಲೀಟರ್‌ ನೀರಿನಲ್ಲಿ ಎರಡು ಚಮಚ ನಿಂಬೆ ರಸ ಮತ್ತು ಅಡಿಗೆ ಸೋಡವನ್ನು ಮಿಶ್ರಣ ಮಾಡಿ. ಇದಾದ ನಂತರ ಬಟ್ಟೆಯನ್ನು ಇಪ್ಪತ್ತು ನಿಮಿಷಗಳ ನೆನೆಸಿಡಿ. ನಂತರ ಕೈಗಳಿಂದ ಉಜ್ಜಿ, ಕಲೆ ಸುಲಭಮಾತ್ರದಲ್ಲಿ ಹೋಗುವುದು ನಿಮಗೆ ಕಾಣುತ್ತದೆ.

ಇದನ್ನೂ ಓದಿ:ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ, ಲಕ್ಷ್ಮಿ ನಿಮಗೊಲಿಯುತ್ತಾಳೆ ಖಂಡಿತ!! 

Leave A Reply

Your email address will not be published.