Red Banana: ಕೆಂಬಾಳೆ ತಿನ್ನಿ, ಈ ಎಂಟು ಆರೋಗ್ಯ ಪ್ರಯೋಜನ ಪಡೆಯಿರಿ!!!

Health tips benefits of Red Banana tips to control kidney stone and other health problems

Red Banana: ಕೆಂಪು ಬಾಳೆಹಣ್ಣು ಇತರೆ ಬಾಳೆಹಣ್ಣಿಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಸಾಮಾನ್ಯ ಬಾಳೆ ಹಣ್ಣುಗಳಿಗಿಂತ ನೋಡಲು ಸ್ವಲ್ಪ ದೊಡ್ಡದಾಗಿದ್ದು, ಬೆಲೆ ಸ್ವಲ್ಪ ದುಬಾರಿ ಕೂಡ ಎನಿಸುತ್ತದೆ. ಕೆಂಪು ಬಾಳೆಹಣ್ಣು ಬೆಂಗಳೂರಿನಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ.

ಕೆಂಪು ಬಾಳೆಹಣ್ಣು (Red Banana) ಆರೋಗ್ಯ ತಜ್ಞರ ಪ್ರಕಾರ ಇದು ಮನುಷ್ಯನ ದೇಹಕ್ಕೆ ಒಳ್ಳೆಯ ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ಇದರಲ್ಲಿ ನಾರಿನ ಅಂಶ, ವಿಟಮಿನ್ ಸಿ ಅಂಶ ಹೇರಳವಾಗಿದೆ.

ಕೆಂಪು ಬಾಳೆ ಹಣ್ಣುಗಳಲ್ಲಿ ಪೊಟ್ಯಾಶಿಯಂ ಇರುವುದರಿಂದ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವ ಸಾಧ್ಯತೆಯನ್ನು ಇದು ತಡೆಯುತ್ತದೆ.
ಮನುಷ್ಯನಿಗೆ ಮೂಳೆಗಳು ಗಟ್ಟಿ ಬರುವಂತೆ ಸಹಕಾರಿಯಾಗುವ ಕ್ಯಾಲ್ಸಿಯಂ ಅಂಶವನ್ನು ನೀಡುತ್ತದೆ.

ಇನ್ನು ಆರೋಗ್ಯಕರವಾದ ರೋಗ ನಿರೋಧಕ ಶಕ್ತಿ ನಿಮಗೆ ಸಿಗಬೇಕು ಎಂದರೆ ಕೆಂಪು ಬಾಳೆಹಣ್ಣಿಣ್ಣು ಸೇವಿಸಿ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ತುಂಬಾ ಹೇರಳವಾಗಿದೆ.

ಅಲ್ಲದೇ ಕೆಂಪು ಬಾಳೆಹಣ್ಣು ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಕೆಂಪು ಬಾಳೆಹಣ್ಣನ್ನು ತಿನ್ನಬಹುದು ಅಥವಾ ಸ್ಕಿನ್ ಪ್ಯಾಕ್ ತರಹ ಚರ್ಮದ ಮೇಲೆ ಅನ್ವಯಿಸಬಹುದು. ಓಟ್ಸ್ ಜೊತೆಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದು ಉತ್ತಮ. ಸ್ವಲ್ಪ ಜೇನುತುಪ್ಪ ಬೆರೆಸಿ ಮುಖದ ಮೇಲೆ ಅನ್ವಯಿಸಿದರೆ ಮತ್ತು ಕೆಲವು ನಿಮಿಷಗಳು ಒಣಗಲು ಬಿಟ್ಟು ಆನಂತರ ಮುಖ ತೊಳೆದುಕೊಂಡರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ.

ಕೆಂಪು ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ, ಬೇಜಾರು, ಮೂಡ್ ಆಫ್ ಮುಂತಾದವೆಲ್ಲ ಕಡಿಮೆಯಾಗುತ್ತವೆ.

ಕೆಂಪು ಬಾಳೆ ಹಣ್ಣಿನಲ್ಲಿ ರಕ್ತ ಶುದ್ಧೀಕರಣಕ್ಕೆ ಅನುಕೂಲವಾಗುವಂತೆ ಇರುವಂತಹ ಕೆಲವು ಬಗೆಯ ಆಂಟಿಆಕ್ಸಿಡೆಂಟ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಇವೆ. ಇದರಿಂದ ರಕ್ತ ಶುದ್ಧೀಕರಣ ಜೊತೆಗೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕೂಡ ಹೆಚ್ಚಾಗುತ್ತದೆ.

ಕೆಂಪು ಬಾಳೆಹಣ್ಣಿನಲ್ಲಿ ನಾರಿನ ಅಂಶ ಹೆಚ್ಚಾಗಿರುವ ಕಾರಣ ಇದು ನಿಮ್ಮ ಹೊಟ್ಟೆ ತುಂಬುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ನಿಮಗೆ ಒಂದು ಬಾಳೆಹಣ್ಣು ತಿಂದರೆ 90 ರಿಂದ 100 ಕ್ಯಾಲೋರಿಗಳು ಸಿಗುತ್ತವೆ ಜೊತೆಗೆ ನಿಮ್ಮ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಇದರಿಂದ ಸುಲಭವಾಗಿ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಗ್ಲುಕೋಸ್, ಸುಕ್ರೋಸ್, ಫ್ರಕ್ಟೋಸ್ ತುಂಬಿರುವ ಕೆಂಪು ಬಾಳೆಹಣ್ಣು, ದೇಹ ಸೇರಿದ ನಂತರದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ.
ಇದರಿಂದ ನಿಮಗೆ ಶಕ್ತಿ ಮತ್ತು ಚೈತನ್ಯ ನಿಧಾನವಾಗಿ ಸಿಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ.

ಕೆಂಪು ಬಾಳೆ ಹಣ್ಣಿನಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವಿದೆ.
ಇದು ನಿಮ್ಮ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಸೇರಿಕೊಂಡು ಹಿಮೋಗ್ಲೋಬಿನ್ ಉತ್ಪತ್ತಿ ಮಾಡುವುದರಿಂದ, ನಿಮ್ಮಲ್ಲಿ ಅನಿಮಿಯ ಸಮಸ್ಯೆ ಕಂಡುಬರುವುದಿಲ್ಲ.

ಮುಖ್ಯವಾಗಿ ಕೆಂಪು ಬಾಳೆ ಹಣ್ಣು ಹಸಿಯಾಗಿ ತಿನ್ನಲು ಸಾಕಷ್ಟು ರುಚಿ ಇರುತ್ತದೆ. ಆದರೆ ಇದನ್ನು ಬೇಯಿಸಿ ತಿಂದರೆ ಮತ್ತಷ್ಟು ರುಚಿ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಬೇರೆಬೇರೆ ಹಣ್ಣುಗಳ ಜೊತೆ ಇದನ್ನು ಕಾಂಬಿನೇಶನ್ ಮಾಡಿ ಜೊತೆಗೆ ಮೊಸರು ಸೇರಿಸಿ ರುಚಿಕರ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಇದು ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹಿರಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚಾಗಿ ಮಲಬದ್ಧತೆ ತೊಂದರೆ ಇರುತ್ತದೆ. ಕೆಂಪು ಬಾಳೆಹಣ್ಣಿನಲ್ಲಿ ನಾರಿನ ಅಂಶ ಇರುವ ಕಾರಣ ಮಲಬದ್ಧತೆ ತೊಂದರೆ ಇರುವವರು ಕೆಂಪು ಬಾಳೆಹಣ್ಣು ಸೇವಿಸುವುದು ಉತ್ತಮ.

ಕೆಂಪು ಬಾಳೆಹಣ್ಣು, ಹೆಣ್ಣು ಮಕ್ಕಳಲ್ಲಿ ಪ್ರೌಢವಸ್ಥೆಯ ಬೆಳವಣಿಗೆ ಹೆಚ್ಚಿಸುವ ಕೆಲಸ ಮಾಡುತ್ತದೆ. ಅದಲ್ಲದೆ ಎದೆಯುರಿ ಮುಂತಾದ ಸಮಸ್ಯೆಗಳಿದ್ದವರು ಕೆಂಪು ಬಾಳೆಹಣ್ಣಿನ ಸೇವನೆ ಮಾಡುವುದು ಉತ್ತಮ.

ಇದನ್ನೂ ಓದಿ: ಶಾರೀರಿಕ ಸಂಬಂಧ ಯಾವಾಗ ಮಾಡುವುದು ಉತ್ತಮ? ದಿನದ ಈ ಹೊತ್ತು ಒಳ್ಳೆಯದಲ್ಲ, ಇಲ್ಲಿದೆ ಸಂಪೂರ್ಣ ಮಾಹಿತಿ!!!

Leave A Reply

Your email address will not be published.