IAS Interesting Question: ಮನುಷ್ಯನ ಶಕ್ತಿ ಎಷ್ಟು HP ಮೋಟಾರಿಗೆ ಸಮ ? IAS ಹುಡುಗಿ ಹೇಳಿದ ಉತ್ತರ ಕೇಳಿದ್ರೆ ಬೆಚ್ಚಿ ಬೀಳ್ತೀರಾ !

Interesting Facts: Is Horse Power in a motor equal to one horse power So how much human power is equal to HP motor

Interesting Facts: HP ಅಂದ್ರೆ ಹಾರ್ಸ್ ಪವರ್ ಎಂದು ಎಲ್ಲರಿಗೂ ಗೊತ್ತು. ಕನ್ನಡದಲ್ಲಿ ಅದರ ಬಗ್ಗೆ ಹೇಳಬೇಕೆಂದರೆ, ಇಂತಿಷ್ಟು ಅಶ್ವ ಶಕ್ತಿಯ ಮೋಟರ್ ಅಥವಾ ಇಷ್ಟು ಅಶ್ವ ಶಕ್ತಿಯ ಇಂಜಿನ್ ಎಂದು ಕರೆಯಲಾಗುತ್ತದೆ. ನಿಜಕ್ಕೂ ಒಂದು ಅಶ್ವಶಕ್ತಿಯ ಪವರ್ ಅಂದರೆ ಏನು ? ಅದು ಒಂದು ಕುದುರೆ ಎಳೆಯಬಲ್ಲ ಶಕ್ತಿ ಇರಬಹುದು ಎನ್ನುವುದು ಜನ ಸಾಮಾನ್ಯರ ನಂಬಿಕೆ. ಆದ್ರೆ ಇವತ್ತು ಈ ಮಿಸ್ ಕಾನ್ಸೆಪ್ಟ್ ಅನ್ನು ನಾವು ಬಗೆಹರಿಸಲಿದ್ದೇವೆ (Interesting Facts).

1 HP ಅಂದ್ರೆ 1 ಅಶ್ವಶಕ್ತಿಯ ಮೋಟಾರು ಅಥವಾ ಇಂಜಿನ್ uಒಂದು ಕುದುರೆಯ ಶಕ್ತಿಗೆ ಸಮವಲ್ಲ. ಕುದುರೆಯು ತುಂಬಾ ಬಲಶಾಲಿಯಾದ ಪ್ರಾಣಿ. 15 HP ಮೋಟರಿನ ಅಥವಾ ಎಂಜಿನಿನ ಶಕ್ತಿಯು ಹೆಚ್ಚು ಕಮ್ಮಿ ಒಂದು ಕುದುರೆಯ ಶಕ್ತಿಗೆ ಸಮವಾಗುತ್ತದೆ. ಒಂದು ರಾಟೆಯ ಮೂಲಕ ಆಳವಾದ ಬಾವಿಯಿಂದ ಒಂದು ನಿಗದಿತ ಭಾರವನ್ನು ಕುದುರೆಯ ಭುಜಕ್ಕೆ ಹಗ್ಗ ಕಟ್ಟಿ ಕುದುರೆ ಓಡಿಸಿ ಅಥವಾ ನಡೆಸಿ ಎಳೆಸಿದರೆ, ಅಷ್ಟೇ ಗರಿಷ್ಠ ಭಾರದ ಕೆಲಸವನ್ನು 15 HP ಯ ಮೋಟಾರು ಮಾಡುತ್ತದೆ. ಅಂದರೆ ಅದು ಒಂದು ಕುದುರೆಯ ಗರಿಷ್ಠ ಶಕ್ತಿಗೆ ಸಮ. ನೆನಪಿಡಿ, ಇದು ಕುದುರೆಯ ಗರಿಷ್ಟ ಶಕ್ತಿ ಎನ್ನಬಹುದು.

ಹಾಗಾದ್ರೆ HP, ಅಂದರೆ ಹಾರ್ಸ್ ಪವರ್ ಅಂತ ಹೆಸರಿಟ್ಟ ಕಾರಣ ಏನು ಎನ್ನುವ ಸಾಮಾನ್ಯ ಪ್ರಶ್ನೆ ಉತ್ಪತ್ತಿಯಾಗುತ್ತದೆ. ಅದಕ್ಕೆ ಉತ್ತರವನ್ನು ಸ್ಕಾಟಿಷ್ ವಿಜ್ಞಾನಿ, ಎಂಜಿನಿಯರ್ ಜೇಮ್ಸ್ ವ್ಯಾಟ್ ಕೊಡ್ತಾರೆ. ಹೌದು, ಅವರು ಒಂದು ಅಶ್ವಶಕ್ತಿ ಎಂದು ಸರಿಯಾಗಿಯೇ ಲೆಕ್ಕ ಹಾಕಿದ್ದಾರೆ. ಕುದುರೆಯ ಗರಿಷ್ಠ ಶಕ್ತಿ 14.9 HP. ಆದರೆ ಎಲ್ಲಾ ಸಮಯಗಳಲ್ಲೂ ಕುದುರೆ ಅಷ್ಟು ಶಕ್ತಿಯನ್ನು ನಿರಂತರವಾಗಿ ಬಳಸಲಾರದು. ಆದುದರಿಂದ ಸಾಮಾನ್ಯ ಪರಿಸ್ಥಿತಿಯಲ್ಲಿ ಆರೋಗ್ಯವಂತ ಕುದುರೆಯು 1 HP ಯಷ್ಟು ಎಳೆತವನ್ನು ಅಂದರೆ ಕೆಲಸವನ್ನು ನಿರಂತರ ಮಾಡಬಲ್ಲದು. ಅದನ್ನು ಗಮನಿಸಿ, ಅಷ್ಟು ಪ್ರಮಾಣದ ಶಕ್ತಿಯನ್ನು 1 HP ಎಂದು ಅವರು ಕರೆದರು. ಅಂದರೆ ಕುದುರೆಯ ದೀರ್ಘಕಾಲಿನ ಶಕ್ತಿ ಕೇವಲ ಒಂದು HP ಮೋಟಾರಿನಷ್ಟು ಎಂದು ನಾವು ಕರೆಯಬಹುದು. ಆಗ ಹೆಚ್ಚಿನ ದೈಹಿಕ ಕೆಲಸಗಳನ್ನು ಕುದುರೆಗೆ ಕಟ್ಟಿ, ಕುದುರೆಯ ಮೂಲಕ ಎಳೆಸಿ ಮಾಡಲಾಗುತ್ತಿತ್ತು. ಆದುದರಿಂದ ಹೊಸ ಯಂತ್ರಗಳ, ಮೋಟಾರುಗಳ, ಇಂಜಿನಗಳ ಆವಿಷ್ಕಾರದ ಸಂದರ್ಭದಲ್ಲಿ ಅದನ್ನು ಕುದುರೆ ಮಾಡಬಹುದಾದ ಧಾರಣ ಶಕ್ತಿಯನ್ನು ಹೋಲಿಸಿ ನೋಡಬೇಕಾಗುತ್ತಿತ್ತು. ಆಗ ಉತ್ಪತ್ತಿಯಾದ ಅಳತೆಯ ಪ್ರಮಾಣವೇ ಈ HP – ಹಾರ್ಸ್ ಪವರ್ !
ಹಾಗಾದ್ರೆ ಮನುಷ್ಯ ಎಷ್ಟು HP ಮೋಟಾರ್ ಗೆ ಸಮ ?
ಸಹಜವಾಗಿ ಹಾಗಾದರೆ ಮಾನವರು ಎಷ್ಟು ಶಕ್ತಿಯ ಮನುಷ್ಯ ಎನ್ನುವ ಪ್ರಶ್ನೆಯ ಸಹಜವಾಗಿ ಕುತೂಹಲ ಮೂಡಿಸುತ್ತದೆ. ಮನುಷ್ಯನು ತನ್ನ ಗರಿಷ್ಠ ಶಕ್ತಿಯಿಂದ 5 HP ಮೋಟಾರು ಶಕ್ತಿಗೆ ಸಮನಾಗಬಲ್ಲ. ಆದರೆ ಎಲ್ಲ ಕಾಲಗಳಲ್ಲೂ ಅಷ್ಟು ಶಕ್ತಿಯನ್ನು ಮನುಷ್ಯ ನೀಡಲಾರ. ಎಲ್ಲಾ ಸಂದರ್ಭಗಳಲ್ಲಿ ಮನುಷ್ಯನ ದೇಹದ ಶಕ್ತಿಯು ಕೇವಲ 0.4 HP ಯಷ್ಟು ಕಮ್ಮಿ ಅಂದರೆ ನೀವು ನಂಬಲೇ ಬೇಕು !

ಅಂದ್ರೆ ಮನುಷ್ಯನು ಕುದುರೆಗಿಂತ ಮೂರು ಪಟ್ಟು ಕಮ್ಮಿ ಬಲಶಾಲಿ. ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಕುದುರೆಯು ಮನುಷ್ಯನಿಗಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿ ಪ್ರಾಣಿಯಾಗಿದೆ. ದೈಹಿಕ ಶಕ್ತಿ ಗಳ ವಿಷಯಕ್ಕೆ ಬಂದಾಗ ಮನುಷ್ಯನಿಗೆ ಎಲ್ಲಾ ಕಡೆಗಳಲ್ಲೂ ಸೋಲುವುದೇ ಆಗಿದೆ. ದೈಹಿಕ ಬಲ ಮತ್ತು ಚಾತುರ್ಯತೆಯ ವಿಷಯದಲ್ಲಿ ನಾವು ನೀವೆಲ್ಲ ಅತ್ಯಂತ ಬಲಹೀನ ವ್ಯಕ್ತಿಗಳು ಎಂಬುದನ್ನು ಒಪ್ಪಿಕೊಂಡು, ಇವತ್ತಿನ ಈ ಇಂಟರೆಸ್ಟಿಂಗ್ ಸೈನ್ಸ್ ವಿಷಯದ ಬಗೆಗಿನ ಈ ಲೇಖನವನ್ನು ಕೊನೆ ಮಾಡೋಣ.

ಇದನ್ನೂ ಓದಿ: ಈ 3 ವಿಷಯಗಳನ್ನು ಹೆಂಡತಿ ಪತಿಗೆ ಹೇಳುವುದಿಲ್ಲವಂತೆ! ಏನದು ಗೊತ್ತೇ?

Comments are closed.