Crime News: ಆಗಷ್ಟೇ ಭೂಮಿಗೆ ಬಂದ ಕಂದಮ್ಮಗಳನ್ನು ಭಯಾನಕವಾಗಿ ಕೊಲ್ಲುತ್ತಿದ್ದ ನರ್ಸ್! ಭಾರತೀಯ ವೈದ್ಯನಿಂದ ಹತ್ಯೆ ಸುಳಿವು!
World news Indian origin doctor helps to catch British nurse who kills 7 babies
Crime News: ಮಕ್ಕಳೆಂದರೆ ದೇವರ ಸಮಾನ ಎಂದು ಭಾವಿಸುವವರೆ ಹೆಚ್ಚು.ಆದ್ರೆ, ಇಲ್ಲೊಬ್ಬಳು ಏನು ಅರಿಯದ ಮುಗ್ಧ ಕಂದಮ್ಮಗಳ ಹತ್ಯೆಗೆ ನಾನಾ ಪ್ರಯತ್ನ ನಡೆಸಿದ ವಿಚಿತ್ರ ಘಟನೆಯೊಂದು (Crime News) ವರದಿಯಾಗಿದೆ.
ಬ್ರಿಟನ್‌ನ ಚೆಸ್ಟರ್ ಹಾಸ್ಪಿಟಲ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಲೂಸಿ ಲೆಟ್ಬಿ ಎಂಬಾಕೆ ಒಂದೇ ವರ್ಷದಲ್ಲಿ ಏಳು ನವಜಾತ ಶಿಶುಗಳನ್ನು ಕ್ರೂರವಾಗಿ ಕೊಂದಿರುವ (British Nurse Kills 7 Babies)ಜೊತೆಗೆ ಇನ್ನು ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ ಘೋರ ಘಟನೆ ನಡೆದಿದೆ. 2015- 2016ರ ಅವಧಿಯಲ್ಲಿ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ನವಜಾತ ಶಿಶು ವಾರ್ಡ್‌ನಲ್ಲಿ ಒಟ್ಟು 13 ಶಿಶುಗಳನ್ನು(Child )ಬರ್ಬರವಾಗಿ ಕೊಲ್ಲಲು ಲೂಸಿ ಅನೇಕ ವಿಧಾನಗಳನ್ನು ಅನುಸರಿಸಿದ್ದಳು ಎಂದು ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್, ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
33 ವರ್ಷದ ನರ್ಸ್ ಲೂಸಿ ಎಂಬಾಕೆ ಶಿಶುಗಳ ರಕ್ತ ನಾಳಗಳಲ್ಲಿ ಗಾಳಿ ಹಾಗೂ ಇನ್ಸುಲಿನ್‌ಗಳನ್ನು ಚುಚ್ಚುವ ಜೊತೆಗೆ ಜಠರ ಕರುಳಿನ ಭಾಗಕ್ಕೆ ಗಾಳಿ ಸೇರಿಸಿ ಹಾಲು ಅಥವಾ ದ್ರವವನ್ನು ಅಳತೆಗೂ ಮೀರಿ ಮಗುವಿಗೆ ಕುಡಿಸಿ ಬರ್ಬರವಾಗಿ ಶಿಶುಗಳನ್ನು ಹತ್ಯೆ ಮಾಡುತ್ತಿದ್ದಳು.ಚೆಸ್ಟರ್ ಆಸ್ಪತ್ರೆಯ ನವಜಾತ ಶಿಶು ಘಟಕದಲ್ಲಿ 2015ರ ಜೂನ್‌ನಿಂದ 2016ರ ಜೂನ್‌ವರೆಗೂ ನಡೆದ ಶಿಶುಗಳ ಹತ್ಯೆಗಳಿಗೆ ಸಂಬಂಧಿಸಿದಂತೆ ಲೂಸಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು.
ಮಕ್ಕಳನ್ನು ಹತ್ಯೆಗೈದ ಲೂಸಿ, ತನ್ನ ಕೊಲೆಗಳ ಬಗ್ಗೆ ಟಿಪ್ಪಣಿಗಳನ್ನು ಕೂಡ ಬರೆದಿಡುತ್ತಿದ್ದಳು. ಅವುಗಳನ್ನು ಸಾಕ್ಷ್ಯವನ್ನಾಗಿ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಬ್ರಿಟನ್‌ನ ನ್ಯಾಯಾಲಯ ಶಿಶುಗಳನ್ನು ಭಯಾನಕವಾಗಿ ಕೊಂದ ಪ್ರಕರಣಗಳಲ್ಲಿ ತಪ್ಪಿತಸ್ಥೆ ಎಂದು ಶುಕ್ರವಾರ ಘೋಷಿಸಿದೆ. 2020ರಲ್ಲಿ ಆಕೆಯನ್ನ ಬಂಧಿಸಿ ಆರೋಪ ಪಟ್ಟಿ ದಾಖಲಿಸಿ, ವಶಕ್ಕೆ ಪಡೆಯಲಾಗಿದೆ. ಶಿಶುಗಳ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿ ನರ್ಸ್‌ಗೆ ಶಿಕ್ಷೆ ಸಿಗುವಲ್ಲಿ ಭಾರತ ಮೂಲದ, ಬ್ರಿಟನ್‌ನಲ್ಲಿ ಜನಿಸಿದ ಶಿಶು ವೈದ್ಯ ಡಾ. ರವಿ ಜಯರಾಮ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಗುತ್ತಿಗೆ ಆಧಾರದಲ್ಲಿ KSRTC ಬಸ್ ಚಾಲಕರ ನೇಮಕ!
Comments are closed.