Gruha Jyothi Scheme: ಫ್ರೀ ಕರೆಂಟ್ ಸಿಗತ್ತೆ ಅಂತ ಬೇಕಾಬಿಟ್ಟಿ ಖರ್ಚು ಮಾಡಿದವರಿಗೆ ಶಾಕ್: ಬಿಲ್ ಶಾಕ್ ಗೆ ಗ್ರಾಹಕ ಕಂಗಾಲು
Gruha Jyothi scheme news shock from government to those who use current without free electricity
Gruhajyothi scheme: ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಗೆದ್ದು, ಹಲವಾರು ಯೋಜನೆಗಳನ್ನು (Govt Schemes) ಜಾರಿಗೆ ತರುವ ಮೂಲಕ ರಾಜ್ಯದ ಜನರಿಗೆ ನೆರವಾಗಿದೆ. ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ(GruhaJyothi Scheme) ಪ್ರತೀ ಫಲಾನುಭವಿ ಕುಟುಂಬಗಳಿಗೆ ತಲಾ 200 ಯೂನಿಟ್ (200 Units)ವಿದ್ಯುತ್ ಉಚಿತವಾಗಿ ಪಡೆಯುವ ಯೋಜನೆಯ ಪ್ರಯೋಜನ ಪಡೆಯುವ ಮಂದಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.
ಫ್ರೀ ಕರೆಂಟ್ ಅಂತ ಬೇಕಾಬಿಟ್ಟಿ ವಿದ್ಯುತ್ ಬಳಸಿದವರಿಗೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಫ್ರೀ ಫ್ರೀ ಎಂದುಕೊಂಡು ಬೇಕಾಬಿಟ್ಟಿ ವಿದ್ಯುತ್ ಬಳಕೆ ಮಾಡಿದರೆ ಬೀಳಲಿದೆ ನಿಮ್ಮ ಜೇಬಿಗೆ ಕತ್ತರಿ! ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ (Congress government) ‘ಗ್ಯಾರಂಟಿ’ ಯೋಜನೆಗಳನ್ನು ಜಾರಿ ಮಾಡಿದೆ.ಈ ನಡುವೆ ಉಚಿತ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಕೂಡ ಹೆಚ್ಚಿದ್ದು, ಹೀಗಾಗಿ, ಸರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಈಗಾಗಲೇ ಜುಲೈ ತಿಂಗಳ ಶೂನ್ಯ ಬಿಲ್ ಗಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದು, ಒಟ್ಟು ಎಲ್ಲಾ ಎಸ್ಕಾಂಗಳಿಗಾಗಿ 650 ಕೋಟಿ ಹಣ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಜುಲೈ ತಿಂಗಳ ಉಚಿತ ಕರೆಂಟ್ ಗಾಗಿ 1,40,31,320 ಮಂದಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಹಾಕಿದವರ ಪೈಕಿ 62% ಮಂದಿಗೆ ಶೂನ್ಯ ಬಿಲ್ ಬಂದಿದೆ ಎನ್ನಲಾಗಿದೆ. ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ಗೆ ಅರ್ಹರಾಗಿದ್ದಾರೆ. ಇದರ ಜೊತೆಗೆ 45,29,633 ಮಂದಿಗೆ ಸಾಮಾನ್ಯ ಕರೆಂಟ್ ಬಿಲ್ ಬಂದಿದ್ದು, ವಾರ್ಷಿಕ ಸರಾಸರಿ 200 ಯೂನಿಟ್ ಒಳಗಿದ್ದರೂ 45 ಲಕ್ಷಕ್ಕೂ ಅಧಿಕ ಮಂದಿಗೆ ಶೂನ್ಯ ಬಿಲ್ ಸಿಕ್ಕಿಲ್ಲ. ಇದಕ್ಕೆ ಮಿತಿ ಮೀರಿದ ವಿದ್ಯುತ್ ಬಳಕೆ ಕೂಡ ಕಾರಣವಂತೆ. ವಾರ್ಷಿಕ ಸರಾಸರಿ ನಿಗದಿತ ಯೂನಿಟ್ ಒಳಗಿದ್ದರೂ ಜುಲೈ ತಿಂಗಳಲ್ಲಿ ಮಾತ್ರ ಸರಾಸರಿ ಮೀರಿ ಬಳಕೆ ಮಾಡಿರುವ ಹಿನ್ನೆಲೆ 45,29,633 ಮಂದಿಯಿಂದ ಜುಲೈ ತಿಂಗಳ ಪೂರ್ಣ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಫ್ರೀ ಕರೆಂಟ್ ಅಂತ ಯಾರದ್ದೋ ಯಲ್ಲಮನ ಜಾತ್ರೆ ಅನ್ನುವ ಹಾಗೆ ವಿದ್ಯುತ್ ಬಳಸಿದವರಿಗೆ ಸರ್ಕಾರದಿಂದ ಶಾಕ್ ನೀಡಲಾಗಿದೆ. ಗೃಹಜ್ಯೋತಿಯ ಮೊದಲ ತಿಂಗಳಲ್ಲೇ 45ಲಕ್ಷಕ್ಕೂ ಅಧಿಕ ಮಂದಿಗೆ ಪೂರ್ಣ ಬಿಲ್ ಬಂದಿದ್ದು ,ಮಿತಿ ಮೀರಿ ಕರೆಂಟ್ ಬಳಕೆ ಮಾಡಿದ ಜನರಿಗೆ ಫುಲ್ ಬಿಲ್ ಬಂದಿದೆ. ಜುಲೈ ತಿಂಗಳ ಉಚಿತ ವಿದ್ಯುತ್ ಗಾಗಿ 1,40,31,320 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ನೀಡಿರುವ ಎಸ್ಕಾಂಗಳು ಇನ್ನುಳಿದ 45,29,633 ಬಳಕೆದಾರರಿಗೆ ಮಿತಿ ಮೀರಿ ವಿದ್ಯುತ್ ಬಳಕೆ ಮಾಡಿದ ಮಂದಿಗೆ ಸಂಪೂರ್ಣ ಬಿಲ್ ನೀಡಲಾಗಿದೆ.
ಇದನ್ನೂ ಓದಿ: SpiceJet Flight: ವಿಮಾನ ಪ್ರಯಾಣದಲ್ಲಿ ಕದ್ದು ಗಗನಸಖಿಯ ಫೋಟೋ ಕ್ಲಿಕ್ಕಿಸಿದ ಮುದುಕ! ಫೋನ್‌ನಲ್ಲಿತ್ತು ಫೋಟೋ ರಹಸ್ಯ!
Comments are closed.