ಮಂಗಳೂರು:ಆಸ್ಪತ್ರೆಯಲ್ಲೇ ಸಂಭೋಗ; ವೀಕ್ಷಿಸಿದ ಬಾಲಕಿ ಮೇಲೆ ಅತ್ಯಾಚಾರ !! ಮಹಿಳೆ ಸಹಿತ ಆರೋಪಿ ಬಂಧನ

Share the Article

ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳು ಸಂಭೋಗ ನಡೆಸಿದ್ದನ್ನು ಕಂಡ ವಿಶೇಷ ಸಾಮರ್ಥ್ಯ ಹೊಂದಿದ ಬಾಲಕಿ ಮೇಲೇಯೂ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿಯಲ್ಲಿ ಮಹಿಳೆ ಸಹಿತ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಅಬ್ದುಲ್ ಹಲೀಂ (37) ಹಾಗೂ ಶಮೀನಾ ಬಾನು (22) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಬೈಕ್ ಅಪಘಾತವೊಂದರಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಲೀಂ ಹಾಗೂ ಆತನ ಸ್ನೇಹಿತನನ್ನು ಕಾಣಲು ಸಂಬಂಧಿ ಮಹಿಳೆಯೊಬ್ಬರು ತನ್ನ ಅಪ್ರಾಪ್ತ ಮಗಳೊಂದಿಗೆ ಬಂದಿದ್ದರು.ಬಳಿಕ ಮಗಳನ್ನು ಆರೋಪಿ ಶಮೀನಾ ಜೊತೆ ಬಿಟ್ಟು ಹೊರಕ್ಕೆ ತೆರಳಿದ್ದು,ಈ ವೇಳೆ ಹಲೀಂ ಹಾಗೂ ಶಮೀನಾ ದೈಹಿಕ ಸಂಪರ್ಕ ನಡೆಸಿದ್ದರು ಎನ್ನಲಾಗಿದೆ.

ಈ ದೃಶ್ಯವನ್ನು ಬಾಲಕಿ ನೋಡಿದಾಗ,ಆಕೆಯನ್ನೂ ಬಲವಂತ ಮಾಡಿದ್ದು, ಆಕೆ ಪ್ರತಿರೋಧವೊಡ್ಡಿದಾಗ ಶಮೀನಾ ಬಾಲಕಿಯ ಕೈಯ್ಯನ್ನು ಹಿಡಿದು ಆರೋಪಿಗೆ ಕೃತ್ಯ ಎಸಗಲು ಸಹಕರಿಸಿದ್ದಳು ಎನ್ನಲಾಗಿದೆ. ಬಾಲಕಿಯ ತಾಯಿ ಆಸ್ಪತ್ರೆಗೆ ಮರಳಿದ ಬಳಿಕ ವಿಚಾರ ತಿಳಿದುಬಂದಿದ್ದು, ಕೂಡಲೇ ಠಾಣೆಗೆ ತೆರಳಿ ದೂರು ನೀಡಿದ್ದ ಪರಿಣಾಮ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Comments are closed.