Belagavi: ಅತ್ತಿಗೆ ಮೇಲೆ ಕಣ್ಣು ಹಾಕಿದ ಸ್ನೇಹಿತ! ಅನಂತರ ನಡೆದದ್ದೇ ಅನಾಹುತ!

Man murder the life partner in Belagavi

Share the Article

Belagavi: ಜೀವಕ್ಕೆ ಜೀವ ಕೊಡುವ ಸ್ನೇಹಿತನನ್ನೇ ಓರ್ವ ಸ್ನೇಹಿತ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ (Belagavi). ಅತ್ತ ಕೊಲೆ ಮಾಡಿದ ಗೆಳೆಯನನ್ನು ಪೊಲಿಸರು ಜೈಲಿಗಟ್ಟಿದ್ದಾರೆ. ಅಂದ ಹಾಗೆ ಈ ಕೊಲೆ ಯಾಕಾಯಿತು? ಬನ್ನಿ ತಿಳಿಯೋಣ.

ಈ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಅಭಿಷೇಕ್‌ ಬುಡ್ರಿ. ಟೀ ಕುಡಿದು ಮನೆಯಲ್ಲಿದ್ದ ಅಭಿಷೇಕ್‌ನನ್ನು ಬರ್ತ್‌ಡೆ ಪಾರ್ಟಿ ಇದೆ ಎಂದು ಕರೆದುಕೊಂಡು ಹೋದ ಜೀವದ ಗೆಳೆಯ ಆತನಿಗೆ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ತೀವ್ರ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅ.14ರಂದು ಸಾವನ್ನಪ್ಪಿದ್ದಾನೆ.

ಅಭಿಷೇಕ್‌ ಕುಟುಂಬಸ್ಥರು ಪೊಲೀಸ್‌ ಠಾಣೆಯಲ್ಲಿ ಕೊಲೆ ಕೇಸ್‌ ದಾಖಲಿಸಿದ್ದು, ಹುಲ್ಲೆಪ್ಪನನ್ನು ಬಂಧಿಸಿ ವಿಚಾರಿಸಿದಾಗ, ಆರೋಪಿ ಹುಲ್ಲೆಪ್ಪ, ಅಭಿಷೇಕ್ ಅಣ್ಣನ ಹೆಂಡತಿ ಜೊತೆ‌ ಫೋನ್‌ನಲ್ಲಿ ಮಾತನಾಡುತ್ತಿದ್ದು, ಹಲವು ಬಾರಿ ಮಾತನಾಡಬೇಡ ಎಂದು ಹೇಳಿದರೂ ಅಭಿಷೇಕ್‌ ಮಾತನಾಡುವುದು ಬಿಟ್ಟಿಲ್ಲವಂತೆ. ಈ ಕಾರಣದಿಂದ ಮನೆಯ ಮರ್ಯಾದೆ ಹೋಗುತ್ತದೆಯೆಂದು ಸ್ನೇಹಿತನೋರ್ವ, ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ.

Comments are closed.