Home ದಕ್ಷಿಣ ಕನ್ನಡ Savanur: ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುಂದರಿ ಬಿ.ಎಸ್ ,ಉಪಾಧ್ಯಕ್ಷರಾಗಿ ಜಯಶ್ರೀ ವಿಜಯ

Savanur: ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸುಂದರಿ ಬಿ.ಎಸ್ ,ಉಪಾಧ್ಯಕ್ಷರಾಗಿ ಜಯಶ್ರೀ ವಿಜಯ

Savanur

Hindu neighbor gifts plot of land

Hindu neighbour gifts land to Muslim journalist

Savanur : ಸವಣೂರು(Savanur) ಗ್ರಾ.ಪಂ.ನ ಮುಂದಿನ 2.5 ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸವಣೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಾಲ್ತಾಡಿ 1 ನೇ ವಾರ್ಡ್‌ನ ಸದಸ್ಯೆ ಸುಂದರಿ ಬಿ.ಎಸ್ ಹಾಗೂ ಉಪಾಧ್ಯಕ್ಷರಾಗಿ ಪುಣ್ಚಪ್ಪಾಡಿ ವಾರ್ಡ್‌ನ ಜಯಶ್ರೀ ವಿಜಯ ಆಯ್ಕೆಯಾದರು.

ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಸದಸ್ಯೆ ಸುಂದರಿ ಬಿ.ಎಸ್ ಹಾಗೂ ಎಸ್‌ಡಿಪಿಐ ಬೆಂಬಲಿತ ಸದಸ್ಯ ಬಾಬು ಎನ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಜಯಶ್ರೀ ವಿಜಯ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷರಾಗಿ ಜಯಶ್ರೀ ವಿಜಯ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷತೆಗೆ ಚುನಾವಣೆ ನಡೆಯಿತು. ಸುಂದರಿ ಬಿ.ಎಸ್ ಅವರು 16 ಮತ ಪಡೆದುಕೊಂಡು ಗೆಲುವು ಸಾಧಿಸಿದರು. ಬಾಬು ಎನ್.ಅವರು 5 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಣಾಧಿಕಾರಿಯಾಗಿ ಕಾಣಿಯೂರು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಹನುಮಂತ ಆಯ್ಕೆ ಪ್ರಕ್ರಿಯೆ ನಡೆಸಿದರು.ಅಭಿವೃದ್ಧಿ ಅಧಿಕಾರಿ ಕಮಲ್‌ರಾಜ್ ,ಲೆಕ್ಕ ಸಹಾಯಕ ಎ.ಮನ್ಮಥ ಸಹಕರಿಸಿದರು.

ಇದನ್ನೂ ಓದಿ: Death News:ಸಮುದ್ರಕ್ಕೆ ಹಾರಿ ಪ್ರಾಣ ಕೊಟ್ಟ ಮಗ: ಮಗನ ದಾರಿಯಲ್ಲೇ ಕಡಲ ಮಾರ್ಗ ಹಿಡಿದು ಸಾಗಿದ ಅಪ್ಪ! ಶೋಕ ‘ ಸಾಗರ’ ದಲ್ಲಿ ಕುಟುಂಬ !