Home News ಅವನ ಜತೆ ಅಮ್ಮನ ಆ ಆಟ ನೋಡಿದ ಪುಟ್ಟ ಮಗ: ಮಗನನ್ನೇ ನೀರಲ್ಲಿ ಅದ್ದಿ ಮುಳುಗಿಸಿದವಳಿಗೆ...

ಅವನ ಜತೆ ಅಮ್ಮನ ಆ ಆಟ ನೋಡಿದ ಪುಟ್ಟ ಮಗ: ಮಗನನ್ನೇ ನೀರಲ್ಲಿ ಅದ್ದಿ ಮುಳುಗಿಸಿದವಳಿಗೆ ಕೋರ್ಟ್ ನೀಡಿದ ಶಿಕ್ಷೆ ಏನು ಗೊತ್ತಾ ?

Hukkeri
Image source : The Indian law

Hindu neighbor gifts plot of land

Hindu neighbour gifts land to Muslim journalist

Hukkeri: ಅನೈತಿಕ ಸಂಬಂಧವನ್ನು ಆಕಸ್ಮಿಕವಾಗಿ ಕಂಡ ಹೆತ್ತ ಮಗನನ್ನೇ ಬಾವಿಯಲ್ಲಿ ಅದ್ದಿ ಹಾಕಿ ಕೊಲೆ ಮಾಡಿದ ಆರೋಪದಲ್ಲಿ ಹುಕ್ಕೇರಿ (Hukkeri) ಮಹಿಳೆಗೆ ಜೀವಾವಧಿ ಶಿಕ್ಷೆ ಮತ್ತು 7,000 ದಂಡ ವಿಧಿಸಿ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಸುರೇಶ ಕರಿಗಾರಳಿಗೆ ಎಂಬ 31 ವರ್ಷದ ಮಹಿಳೆಗೆ ಕೋರ್ಟು ಈ ಶಿಕ್ಷೆ ಜಾರಿ ಮಾಡಿದೆ.

ಅನೈತಿಕ ಸಂಬಂಧಕ್ಕಾಗಿ ನಡೆದಿತ್ತು ಸಂತ ಮಗನ ಕೊಲೆ:

ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ವರ್ಷದ ಹಿಂದೆ, 2019 ರ ಅ. 22 ರಂದು ನಡೆದ ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಸುರೇಶ ಕರಿಗಾರ (31) ರಾಮಪ್ಪ ಕೆಂಚಪ್ಪ ಬಸ್ತವಾಡನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಅದೊಂದು ದಿನ ಅಮ್ಮನ ಅನೈತಿಕ ವ್ಯವಹಾರವನ್ನು ಆಕೆಯ ಹಿರಿಯ ಮಗ 10 ವರ್ಷದ ಪ್ರವೀಣ್ ಕಣ್ಣಾರೆ ಕಂಡಿದ್ದ. ಮಗ ಪ್ರವೀಣನು ಈ ವಿಷಯವನ್ನು ತಂದೆಗೆ ಹೇಳುತ್ತೇನೆಂದು ಬೆದರಿಸಿದ್ದಾನೆ. ಅಲ್ಲದೆ, ಅಮ್ಮನ ಕೈಗೆ ಸಿಗದೆ ಓಡಿ ಹೋಗಿದ್ದಾನೆ. ಆಗ ಅಮ್ಮ ಸುಧಾ ಮಗನನ್ನು ಕರೆದು 50 ರೂಪಾಯಿ ಕೊಟ್ಟು ಅಂಗಡಿಯಲ್ಲಿ ತಿಂಡಿ ತಿನಿಸು ತರಲು ಕಳಿಸಿದ್ದಳು. ತಕ್ಷಣ ಮಗನ ಕೈಯಿಂದ ತಪ್ಪಿಸಿಕೊಳ್ಳೋದು ಆಕೆಯ ಉದ್ದೇಶ.

ಹಾಗೆ ಮಗನನ್ನು ತಿಂಡಿ ತರಲು ಕಳಿಸಿದಾಗ ಅವನ ಜತೆ ಚಿಕ್ಕ ಮಗ 8 ವರ್ಷದ ಪ್ರಜ್ವಲ್ ಕೂಡಾ ಹೊರಟಿದ್ದಾನೆ. ಆಗ ಅಮ್ಮ ಸುಧಾ ಕೂಡಾ ಅವರಿಬ್ಬರನ್ನು ಹಿಂಬಾಲಿಸಿದ್ದಾಳೆ. ಆಕೆ ಹಿಂದಿನಿಂದ ಹೋಗಿ ಬೆಲ್ಲದ ಬಾಗೇವಾಡಿ ಉದಯಕುಮಾರ ಮಲ್ಲಿನಾಥ ಪಾಟೀಲ ಎಂಬುವವರ ಜಮೀನಿನಲ್ಲಿರುವ ಬಾವಿಯಲ್ಲಿ ಸ್ವಂತ ಮಗ ಪ್ರವೀಣ್ ನ ಅದ್ದಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಅದು ಚಿಕ್ಕ ಮಗನ ಗಮನಕ್ಕೆ ಬಂದಿದೆ. ಆಗ ಇನ್ನೊಬ್ಬ ಮಗ ಪ್ರಜ್ವಲನಿಗೆ ನೀನು ಯಾರ ಮುಂದೆಯಾದರೂ ಹೇಳಿದರೆ ನಿನಗೂ ಸಹ ಹೀಗೆ ಮಾಡಿ ಸಾಯಿಸಿ ಬಿಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿದ್ದಾಳೆ ಅಮ್ಮ. ನಂತರ ತನಿಖೆ ನಡೆದು ಅಮ್ಮನಿಂದ ಮಗನ ಕೊಲೆ ಆರೋಪ ಸಾಬೀತಾಗಿತ್ತು. ಚಿಕ್ಕ ಮಗನೇ ಮುಂದೆ ಬಾಯಿ ಬಿಟ್ಟಿದ್ದ.

ಈ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 3 ವರ್ಷ ತನಿಖೆ ನಡೆದಿತ್ತು. ಈ ಪ್ರಕಣದ ತನಿಖೆಯನ್ನು ನಡೆಸಿದ ಆಗಿನ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದರು. ನಂತರ ಕೋರ್ಟು ಇದೀಗ ತೀರ್ಪು ನೀಡಿದೆ. ಅನೈತಿಕ ಸಂಬಂಧಕ್ಕೆ ಮಗನನ್ನು ಬಲಿ ಕೊಟ್ಟ ಕಾರಣಕ್ಕೆ ರಾಕ್ಷಸಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಸಾನ್ಯ ಇನ್ನು ಮುಂದೆ ದೊಡ್ಡ ಪರದೆ ಮೇಲೆ!