ಉಪೇಂದ್ರಗೆ ಕನ್ನಡ ಸಿನಿಮಾಗಳಿಂದ 5 ವರ್ಷ ಬ್ಯಾನ್ ?! ಚಂದನವನದಲ್ಲಿ ಮತ್ತೊಂದು ಅಚ್ಚರಿಯ ಬೆಳವಣಿಗೆ !!!

Share the Article

Upendra :ದಲಿತ ವರ್ಗಗಳ ಮೇಲೆ ಜಾತಿ ನಿಂದನೆ (Atrocity) ಆರೋಪ ಎದುರಿಸುತ್ತಿರುವ ನಟ ಉಪೇಂದ್ರರನ್ನು (Upendra) ಸಿನಿಮಾ ರಂಗದಿಂದ 5 ವರ್ಷ ಬ್ಯಾನ್ ಮಾಡಬೇಕು ಎಂದು ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ (film chamber) ಮಂಡಳಿಗೆ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ಗೆ ಆಗಮಿಸಿದ್ದ ಭೈರಪ್ಪ ಹರೀಶ್ ಕುಮಾರ್ ನೇತೃತ್ವದ ಕಾರ್ಯಕರ್ತರು ಉಪೇಂದ್ರ ಅವರನ್ನು ಚಿತ್ರರಂಗದಿಂದ ಬ್ಯಾನ್ (Ban) ಮಾಡುವಂತೆ ಮನವಿ ಮಾಡಿದ್ದಾರೆ.

 

ಕರ್ನಾಟಕ ಫಿಲ್ಮ್ ಚೇಂಬರ್ ಗೆ ದೂರು ನೀಡುವ ಸಂದರ್ಭ ಭೈರಪ್ಪ ಹರೀಶ್ ಕುಮಾರ್ ರು ಮಾತನಾಡಿ, ‘ದಲಿತ ಕೇರಿ, ಊರಲ್ಲಿ ಯಾರು ಯಾರು ಇರಬೇಕು ಅಂತಾ ಹೇಳಬೇಕು. ಇವರೆಲ್ಲ ಸಿನಿಮಾಗಳಲ್ಲಿ ಮಾತ್ರ ನಾಯಕರು. ನಿಜವಾದ ನಾಯಕರಲ್ಲ. ನಿಜವಾದ ನಾಯಕ ಓಡಿ ಹೋಗೊಲ್ಲ, ಸ್ಟೇ ತರೋದು, ಓಡಿ ಹೋಗೋದಲ್ಲ. ಜಾತಿ, ಕೇರಿಗಳ ಬಗ್ಗೆ ಮಾತನಾಡುವವರನ್ನು ಬ್ಯಾನ್ ಮಾಡಬೇಕು’ ಎಂದು ಅವರು ಹೇಳಿದರು.

 

ಫಿಲ್ಮ್ ಚೇಂಬರ್ ಗೆ ಕೊಟ್ಟ ದೂರು ಸ್ವೀಕರಿಸಿದ ಹಿರಿಯ ನಟ ಹಾಗೂ ಕರ್ನಾಟಕ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಮತ್ತು ನಟ ಸುಂದರ್ ರಾಜ್ ಮಾತಾಡಿದ್ದಾರೆ. ‘ನಟ ಉಪೇಂದ್ರ ಅವರು ಬೇಕು ಬೇಕೂಂತ ಮಾತನಾಡಿದ್ದು ಅಂತಾ ಅನಿಸುತ್ತಿಲ್ಲ. ನಾವು ಸಮಾಜಮುಖಿಯಾಗಿ ಯೋಚನೆ ಮಾಡಬೇಕು. ಫಿಲ್ಮ್ ಚೇಂಬರ್ ಗೆ ಬ್ಯಾನ್ ಮಾಡೋ ಹಕ್ಕಿಲ್ಲ: ನಾವು ಸಂಧಾನ ಮಾಡ್ತೇವೆ- ಸಂಹಾರ ಮಾಡಲ್ಲ. ಬ್ಯಾನ್ ಮಾಡಬೇಕೆಂಬ ಮನವಿ ಬಂದಾಗ ಸ್ವೀಕರಿಸಿದ್ದೇನೆ. ಯಾರನ್ನೇ ಬ್ಯಾನ್ ಮಾಡಲು ಕೋರ್ಟ್ ಅನುಮತಿ ಕೊಡಲ್ಲ. ಉಪೇಂದ್ರ ಅವರನ್ನು ಕರೆಸಿ ಮಾತನಾಡುತ್ತೇವೆ’ ಎಂದಿದ್ದಾರೆ. ಒಟ್ಟಾರೆ ಉಪೇಂದ್ರ ಮಾತಿನ ಮಧ್ಯೆ ಹೇಳಿದ ಆ ಒಂದು ಹೇಳಿಕೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ : ನಟ ವಿಜಯ್ ಬಾಳಲ್ಲಿ ಇನ್ನೊಬ್ಬ ನಟಿಯ ಎಂಟ್ರಿ?

Comments are closed.