Home latest Love jihad: ಲವ್ ಜಿಹಾದ್ ತಡೆಗೆ ಬಂತು ಬಲಿಷ್ಠ ಕಾನೂನು! ಏನಿದೆ ಗೊತ್ತಾ ಕೇಂದ್ರದ ಹೊಸ...

Love jihad: ಲವ್ ಜಿಹಾದ್ ತಡೆಗೆ ಬಂತು ಬಲಿಷ್ಠ ಕಾನೂನು! ಏನಿದೆ ಗೊತ್ತಾ ಕೇಂದ್ರದ ಹೊಸ ಕಾನೂನಿನಲ್ಲಿ ?

Love jihad
Image source: Garuda books

Hindu neighbor gifts plot of land

Hindu neighbour gifts land to Muslim journalist

Love jihad : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಮೂಲಕ ಯುವತಿಯರನ್ನು ನಂಬಿಸಿ, ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು, ಅವರನ್ನು ಮದುವೆಯಾಗುವುದಲ್ಲದೆ ಮತಾಂತರ ಮಾಡುವಂತಹ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮ ತೆಗೆದುಕೊಳ್ಳುತ್ತಿದೆ.

ಇನ್ನು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಜೀವಾವಧಿ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಸೇರಿ ಕಾನೂನಿನಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಹಾಗೆಯೇ, ಲವ್‌ ಜಿಹಾದ್‌ (Love Jihad) ನಿಯಂತ್ರಣಕ್ಕೂ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುತ್ತಿದೆ.

ಸದ್ಯ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ದೇಶದಲ್ಲಿ ಬ್ರಿಟಿಷ್ ಕಾಲದ ಕ್ರಿಮಿನಲ್‌ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಮೂರು ವಿಧೇಯಕಗಳನ್ನು ಹೊರಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಿ, ಹೊಸ ಹೆಸರುಗಳೊಂದಿಗೆ ಕಾಯ್ದೆಯಾಗಿ ಜಾರಿಗೆ ತರುವ ದಿಸೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೂರು ವಿಧೇಯಕಗಳನ್ನು ಸಂಸತ್‌ನಲ್ಲಿ ಮಂಡಿಸಿದ್ದಾರೆ.

ಹೌದು, ನೂತನ ಕಾನೂನಿನಲ್ಲಿ ಲವ್‌ ಜಿಹಾದ್‌ ತಡೆಗೆ ಹಲವು ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ವ್ಯಕ್ತಿಯು ತನ್ನ ಗುರುತು, (Identity) ಮುಚ್ಚಿಟ್ಟು, ನಕಲಿ ದಾಖಲೆ ತೋರಿಸಿ, ಸುಳ್ಳು ಭರವಸೆಗಳನ್ನು ನೀಡಿ ಲೈಂಗಿಕ ಸಂಬಂಧ ಹೊಂದಿದರೆ ಅಥವಾ ಮದುವೆಯಾದರೆ ಅದನ್ನು ಅಪರಾಧ ಎಂದು ಘೋಷಿಸಲಾಗುತ್ತದೆ. ಅಲ್ಲದೆ, ಹಾಗೆ ಮಾಡುವವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗುತ್ತದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ಈಗಿನ ಭಾರತೀಯ ದಂಡ ಸಂಹಿತೆಯಲ್ಲಿ (IPC) ಈ ರೀತಿಯ ನಿಬಂಧನೆಗಳು ಇಲ್ಲ. ಹಾಗಾಗಿ, ನೂತನ ವಿಧೇಯಕದಲ್ಲಿ ನಕಲಿ ದಾಖಲೆ, ಸುಳ್ಳು ಮಾಹಿತಿ ನೀಡಿ ಲೈಂಗಿಕ ಸಂಪರ್ಕ ಹೊಂದುವುದು ಹಾಗೂ ಮದುವೆಯಾಗುವುದನ್ನು ಅಪರಾಧ ಎಂದು ಘೋಷಿಸಲಾಗುತ್ತದೆ.

ಮೂರು ವಿಧೇಯಕ ಇಂತಿವೆ:
ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗುತ್ತಿದ್ದು, ಇವುಗಳನ್ನು ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ ಎಂದು ಅಮಿತ್‌ ಶಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗ್ರಾಹಕರೇ ಇನ್ನು ಮುಂದೆ ಕಾಂಚಾಣ ನಿಮ್ಮ ಕೈಯಲ್ಲಿ! ಎಫ್‌ಡಿ ಬಡ್ಡಿ ದರ ಹೆಚ್ಚಳ!!