Sim Number Portability: ನಿಮ್ಮಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಿಕೊಳ್ಳಬಹುದು, ಟ್ರಾಯ್ ತಂದಿದೆ ಹೊಸ ನಿಯಮ !

tech news Sim number portability how many times one sim can be ported to other network

Sim Number Portability: ಇದು ಡಿಜಿಟಲ್‌ ಯುಗ (Digital) ಇಲ್ಲಿ ದಿನದಿಂದ ದಿನಕ್ಕೆ ತಂತ್ರಜ್ಞಾನಗಳು (Technology) ಬದಲಾಗುತ್ತಿರುತ್ತವೆ. ಈಗಿನ ದಿನಗಳಲ್ಲಿ ಮೊಬೈಲ್‌ (Mobile) ಬಳಸದೇ ಇರುವ ಜನರೇ ಇಲ್ಲ. ಮೊಬೈಲ್‌ನಲ್ಲೇ ಬಹುತೇಕ ಕೆಲಸಗಳು ಆಗುವುದರಿಂದ ಮೊಬೈಲ್‌ನಲ್ಲಿ ಸಿಮ್‌ (Sim), ನೆಟ್‌ವರ್ಕ್‌, ಡೇಟಾ (Data) ಎಲ್ಲವೂ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ಕೆಲವು ಸಿಮ್‌ಗಳ ನೆಟ್‌ವರ್ಕ್‌ ನಿಧಾನವಾಗಿರುತ್ತದೆ ಅಥವಾ ಕೆಲವೊಮ್ಮೆ ನೆಟ್‌ವರ್ಕ್‌ಗಳೇ ಇರುವುದಿಲ್ಲ. ಈ ಕಾರಣಕ್ಕಾಗಿ ತಮ್ಮ ನಂಬರ್‌ (Number) ಅನ್ನು ಪೋರ್ಟ್‌ (Port) ಮಾಡಲು ಗ್ರಾಹಕರು ಮುಂದಾಗುತ್ತಾರೆ.

ಒಂದು ನೆಟ್‌ವರ್ಕ್‌ನಿಂದ ಮತ್ತೊಂದು ನೆಟ್‌ವರ್ಕ್‌ಗೆ ಮೊಬೈಲ್ ನಂಬರ್ ಅನ್ನು ನೀವು ಪೋರ್ಟ್ (Sim Number Portability) ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ನೆಟ್ ವರ್ಕ್‌ನಿಂದ ಮತ್ತೊಂದು ನೆಟ್ವರ್ಕ್‌ಗೆ ಸೇವೆಯನ್ನು ಬದಲಾಯಿಸುವ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಸೌಲಭ್ಯಾದ ಮೂಲಕ ಜನರು ತಮಗೆ ಬೇಕಾದ ಟೆಲಿಕಾಮ್ ಕಂಪನಿಗಳ ಸೇವೆಗಳ ಸದುಪಯೋಗ ಪಡಿಸಿಕೊಳ್ಳಬಹುದು. ಅನೇಕರಿಗೆ ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು? ಟ್ರಾಯ್ ನಿಯಮಗಳು ಹೇಗಿದೆ ಎಂಬ ಬಗ್ಗೆ ತಿಳಿದಿಲ್ಲ. ಇಲ್ಲಿದೆ ನೋಡಿ ಮಾಹಿತಿ!.

ದೇಶದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹೊಸ ಎಂಎನ್‌ಪಿಯನ್ನು ಜಾರಿಗೆ ತರಲಾಗಿತ್ತು. ಈ ಎಂಎನ್‌ಪಿ ಅಂದರೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡಲಿರುವಂತಹ ನಿಯಮಗಳು. ಹೀಗಾಗಿ, ಗ್ರಾಹಕರು ಯಾವುದೇ ಸಮಸ್ಯೆಯಿಲ್ಲದೆ ಸುಲಭದಲ್ಲಿ ಮೊಬೈಲ್ ನಂಬರ್ ಪೋರ್ಟ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಒಂದು ಮೊಬೈಲ್ ಸಂಖ್ಯೆಯನ್ನು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಟ ಮಿತಿಯಿಲ್ಲ.

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಈ ಎಮ್‌ಎನ್‌ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಬೇಕಾಗಿತ್ತು. ಆದರೆ, ಟ್ರಾಯ್‌ನ ಹೊಸ ಎಮ್‌ಎನ್‌ಪಿ ನಿಯಮ ಜಾರಿಯಿಂದ ಈಗ ಆದಷ್ಟು ಬೇಗ ಸಿಮ್‌ ಫೋರ್ಟ್ ಆಗುತ್ತದೆ.

ಆದರೆ, ನಿಮ್ಮ ಮೊಬೈಲ್ ನಂಬರ್ ಪೋರ್ಟ್ ಮಾಡಬೇಕಾದರೆ, ಮೊಬೈಲ್ ನಂಬರ್ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಕೊಳ್ಳಲು ಬಯಸಿದ್ದರೆ, ಅದಕ್ಕೂ ಮುಂಚೆ ಹಳೆಯ ಕಂಪನಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಮೊತ್ತವನ್ನು ಪಾವತಿಸಿರಬೇಕಾಗುತ್ತದೆ.

ಪೋಸ್ಟ್ ಪೋಯ್ಡ್ ಗ್ರಾಹಕರು, ತಿಂಗಳ ಬಿಲ್ ಮೊತ್ತ ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಟೆಲಿಕಾಂ ಸೇವಾದಾರ ಕಂಪನಿಗೆ ಪಾಲಿಸುವುದು ಕಡ್ಡಾಯವಾಗಿದೆ. ಯಾವುದಾದರೂ ಪಾವತಿ ಮಾಡಲು ಬಾಕಿ ಉಳಿಸಿಕೊಂಡಿದ್ದರೆ, ಪೋರ್ಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ.

ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಮಾಡಬೇಕಾದರೆ ಸದ್ಯ ಇರುವ ನೆಟ್‌ವರ್ಕ್‌ನಲ್ಲಿ ಕನಿಷ್ಟ 90 ದಿನ ಪೂರೈಸಬೇಕಾಗುತ್ತದೆ. ಇದಕ್ಕಿಂತ ಮುಂಚೆ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೇ, ಸಿಮ್ ಕಾರ್ಡ್ ಹೊಂದಿರುವ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ಮಾಡಿದ್ದರೆ, ಅಂತಹ ಸಂದರ್ಭದಲ್ಲಿ ಎಂಎನ್‌ಪಿ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಮದುವೆಗೆ ಗರಿಷ್ಠ 100 ಜನಕ್ಕೆ ಮಾತ್ರ ಪರ್ಮಿಷನ್, 10 ಬಗೆಯ ಖಾದ್ಯಕ್ಕೆ ಮಾತ್ರ ಅವಕಾಶ: ಲೋಕಸಭೆಯಲ್ಲಿ ಹೊಸ ಮಸೂದೆ ಮಂಡನೆ !

Comments are closed.