Central Govt Employees: ಸರ್ಕಾರಿ ನೌಕರರಿಗೆ ಬೊಂಬಾಟ್ ಗಿಫ್ಟ್: DA 45 ಶೇ. ಗೆ ಏರಿಕೆ ಆಗುವ ಎಲ್ಲಾ ಸಾಧ್ಯತೆ !

Central Government employees may get 45 percentage hike in dearness allowance and dearness relief

Central Govt Employees : ಕೇಂದ್ರ ಸರ್ಕಾರವು (Central Govt Employees) ತನ್ನ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಹೌದು, ಕೆಂದ್ರವು ಶೀಘ್ರವೇ ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಾದರೆ ಇದರಿಂದ ನೌಕರರ ಸಂಬಳವೂ ಹೆಚ್ಚಾಗುತ್ತದೆ. ಒಂದು ಕೋಟಿಗೂ ಅಧಿಕ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನ ದೊರೆಯಲಿದೆ.

ತುಟ್ಟಿಭತ್ಯೆ ಹೆಚ್ಚಳದ (DA hike) ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಬೊಂಬಾಟ್ ಗಿಫ್ಟ್ ಇದಾಗಿದೆ. ನೌಕರರ DA 45 % ಗೆ ಏರಿಕೆ ಆಗುವ ಎಲ್ಲಾ ಸಾಧ್ಯತೆಗಳು ಇದೆ. ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ (DA and DR) ಅನ್ನು 3 ಪ್ರತಿಶತ ಅಂಕಗಳಷ್ಟು (Percentage Points) ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಶೇ. 42ರಷ್ಟಿರುವ ಡಿಎ ಹಾಗೂ ಡಿಆರ್ ಶೇ. 45ಕ್ಕೆ ಹೆಚ್ಚಾಗಬಹುದು ಎಂದು ವರದಿ ತಿಳಿಸಿದೆ. ಅಂದಹಾಗೆ ಹಣದುಬ್ಬರದ ಆಧಾರದ ಮೇಲೆ ಡಿಎ ಮತ್ತು ಡಿಆರ್ ಹೆಚ್ಚಳವನ್ನು ನಿರ್ಧರಿಸಲಾಗಿರುವುದು.
ಕಾರ್ಮಿಕ ಸಚಿವಾಲಯದ ಅಡಿಯ ಕಾರ್ಮಿಕ ದಳ ಅಥವಾ ಲೇಬರ್ ಬ್ಯೂರೋ (Labour Bureau) ಪ್ರತೀ ತಿಂಗಳು ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ (CPI-IW) ದರಗಳನ್ನು ಬಿಡುಗಡೆ ಮಾಡುತ್ತದೆ. ಇದರ ಆಧಾರದ ಮೇಲೆ ಈ ಬಾರಿಯ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರದ ಪ್ರಮಾಣವನ್ನು ನಿರ್ಧರಿಸಲಾಗಿದೆ.

ಸರ್ಕಾರ ವರ್ಷಕ್ಕೆ ಎರಡು ಬಾರಿ, ಜನವರಿ ಮತ್ತು ಜುಲೈಗೆ ಅನ್ವಯ ಆಗುವಂತೆ ಡಿಎ ಮತ್ತು ಡಿಆರ್ ಅನ್ನು ಪರಿಷ್ಕರಿಸುತ್ತದೆ. ಇತ್ತೀಚೆಗೆ ಸಾಮಾನ್ಯವಾಗಿ 4 ಪ್ರತಿಶತದಷ್ಟು ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತಾ ಬರಲಾಗಿದೆ. ಈ ಬಾರಿಯೂ 4 ಪರ್ಸಂಟೇಜ್ ಡಿಎ ಹೆಚ್ಚಳ ನಿರೀಕ್ಷಿಸಲಾಗಿತ್ತು. ಆದರೆ, 3 ಪ್ರತಿಶತದಷ್ಟು ಮಾತ್ರ ಡಿಎ ಮತ್ತು ಡಿಆರ್ ಏರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ತಿಂಗಳೇ ಡಿಎ ಮತ್ತು ಡಿಆರ್ ಏರಿಕೆಯನ್ನು ಸರ್ಕಾರ ಘೋಷಿಸುವ ನಿರೀಕ್ಷೆ ಇದೆ. ದರ ಜುಲೈ ತಿಂಗಳಿಂದ ಅನ್ವಯ ಆಗುತ್ತವೆ.

ಇದನ್ನೂ ಓದಿ: iPhone Offer: ಅಮೆಜಾನ್ ಗ್ರೇಟ್ ಫ್ರೀಡಮ್ ಸೇಲ್ ; ಐಫೋನ್ 14 ಬೆಲೆ ಕೇಳಿದ್ರೆ ಓಡಿ ಹೋಗಿ ಈಗ್ಲೇ ಖರೀದಿಸ್ತೀರಿ !

Comments are closed.