PM Fasal Bima Yojana: ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ: ಗಡುವು ಮತ್ತೆಂದೂ ವಿಸ್ತರಣೆ ಇಲ್ಲ, ಅಷ್ಟರೊಳಗೆ ಧಾವಿಸಿ ಬೆಲೆ ವಿಮೆ ಮಾಡಿಸಿಕೊಳ್ಳಿ

Pradhan mantri fasal bima yojana latest updates central government extend PM crop insurance scheme registration deadline

PM Fasal Bima Yojana: ಕೆಲವು ರಾಜ್ಯಗಳು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಗಡುವನ್ನು ವಿಸ್ತರಿಸಲು ಒತ್ತಾಯಿಸಿದ ಕಾರಣ ಕೆಲ ರಾಜ್ಯಗಳ ಗಡುವು ವಿಸ್ತರಣೆಯಾಗಿದ್ದು, ಈ ಕುರಿತು ಕರ್ನಾಟಕದಲ್ಲೂ ನೋಂದಣಿಗೆ ಇನ್ನೂ ಕೆಲ ದಿನಗಳ ಕಾಲ ಅವಕಾಶ ನೀಡಿದೆ.

ಈಗಾಗಲೇ ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಣಿಗೆ ಜುಲೈ 31 ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ, ಹೆಚ್ಚಿನ ರೈತರು ಯೋಜನೆಗೆ ಸೇರಬಹುದು ಅನ್ನೋ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಗಡುವು ವಿಸ್ತರಣೆಯಾಗಿದೆ.

ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಣಿಗೆ ಜುಲೈ 31 ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ, ಇದೀಗ ಕರ್ನಾಟಕದಲ್ಲಿ ಆಗಸ್ಟ್‌ 16 ರವರೆಗೆ ನೋಂದಣಿಗೆ ಕಾಲಾವಕಾಶ ನೀಡಲಾಗಿದೆ.

ಕರ್ನಾಟಕ ರೈತ ಪ್ರಧಾನ್​ ಮಂತ್ರಿ ಫಸಲ್​ ಬಿಮಾ ಯೋಜನೆಯನ್ನು ಅಗ್ರಿಕಲ್ಚರ್ ಇನ್ಶೂರೆನ್ಸ್‌ ಕಂಪನಿ ಆಫ್​ ಇಂಡಿಯಾ ಲಿಮಿಟೆಡ್ ವತಿಯಿಂದ 2023-24 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರಾಜ್ಯದ 9 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಅಧಿಸೂಚನೆ ಹೊರಡಿಸಿದೆ.

“ಉತ್ತರ ಪ್ರದೇಶದಲ್ಲಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ನೋಂದಣಿಗೆ ಗಡುವನ್ನು ಆಗಸ್ಟ್ 10 ರವರೆಗೆ ವಿಸ್ತರಿಸಲಾಗಿದೆ” ಎಂದು ಯುಪಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ಇನ್ನು ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಯ ಪ್ರಕಾರ, PMFBY ಅಡಿಯಲ್ಲಿ ನೋಂದಣಿಯ ಕೊನೆಯ ದಿನಾಂಕವನ್ನು ಮಣಿಪುರ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಆಗಸ್ಟ್ 16, ಮಹಾರಾಷ್ಟ್ರದಲ್ಲಿ ಆಗಸ್ಟ್ 3, ಒಡಿಶಾ ಮತ್ತು ಅಸ್ಸಾಂನಲ್ಲಿ ಆಗಸ್ಟ್ 5, ಯುಪಿ ಮತ್ತು ರಾಜಸ್ಥಾನದಲ್ಲಿ ಆಗಸ್ಟ್ 10, ಗೋವಾದಲ್ಲಿ ಆಗಸ್ಟ್ 15, ರವರೆಗೆ ವಿಸ್ತರಿಸಲಾಗಿದೆ. ಹಾಗೆ, ಶುಂಠಿ ಬೆಳೆಗಾರರಿಗೆ ಮೇಘಾಲಯದಲ್ಲಿ ಆಗಸ್ಟ್ 7 ರವರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದಾಗ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ)(PM  Fasal Bima yojana) ” ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: New Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಯಾವಾಗ ? ಫ್ರೆಶ್ ಅಪ್ಡೇಟ್ ಗಮನಿಸಿ !

Comments are closed.