Mobile App: IRCTCಯಿಂದ ಮತ್ತೊಮ್ಮೆ ಅಲರ್ಟ್‌ ಸಂದೇಶ; ಈ ʼತಪ್ಪುʼ ಖಂಡಿತಾ ಮಾಡಬೇಡಿ!!!

Scam alert IRCTC warns users of fake Rail Connect app to trick Indians

Mobile App: ನೀವು ಮೊಬೈಲ್‌ (Mobile App) ಮೂಲಕ ರೈಲು ಟಿಕೆಟ್‌ ಬುಕ್‌ ಮಾಡುತ್ತಿದ್ದೀರಾ? ಹಾಗಾದರೆ ನಿಮಗೊಂದು ವಿಶೇಷ ಸಂದೇಶವೊಂದಿದೆ. ಜನರಿಂದ ದುಡ್ಡು ಪೀಕಿಸಲು ನಕಲಿ ಅಪ್ಲಿಕೇಶನ್‌ಗಳನ್ನು ವಂಚಕರು ಸಕ್ರಿಯಗೊಳಿಸಿದ್ದಾರೆ. ಇಂತಹ ನಕಲಿ ಅಪ್ಲಿಕೇಶನ್‌ಗಳ ಬಗ್ಗೆ ಭಾರತೀಯ ರೈಲ್ವೇ ಕೇಟರಿಂದ ಮತ್ತು ಟೂರಿಸಂ ಕಾರ್ಪೋರೇಷನ್‌ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ.

IRCTC X  ನಲ್ಲಿ ಪೋಸ್ಟ್ ಅನ್ನು ಬಿಡುಗಡೆ ಮಾಡಿದ್ದು, ದುರುದ್ದೇಶಪೂರಿತ ಮೊಬೈಲ್ ಅಪ್ಲಿಕೇಶನ್ ಮೂಲಕ ವಂಚಕರು ಫಿಶಿಂಗ್ ಲಿಂಕ್‌ಗಳನ್ನು ಕಳುಹಿಸುವ ಮೂಲಕ ನಕಲಿ IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕೆಂದು ಹೇಳಲಾಗುತ್ತಿದೆ. ಜನರನ್ನು ಮೋಸ ಮಾಡುವುದು ಈ ಅಪ್ಲಿಕೇಶನ್‌ಗಳ ಮೂಲ ಉದ್ದೇಶ. ಈ ಬಗ್ಗೆ ಜಾಗರೂಕರಾಗಿರಿ ಎಂದು IRCTC ಜನರಿಗೆ ಎಚ್ಚರಿಕೆ ನೀಡಿದೆ.

ಈ ಮೂಲಕ ತಿಳಿಸುವುದೇನೆಂದರೆ, ನಿಮಗೆ ಯಾರಾದರೂ ಲಿಂಕ್‌ ಕಳಿಸಿದರೆ, ಮತ್ತು ರೈಲ್‌ ಕನೆಕ್ಟ್‌ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಲು ಕೇಳಿದರೆ ನೀವು ಜಾಗರೂಕರಾಗಿರಬೇಕು ಎಂದು.

ಕೆಲವು ತಿಂಗಳ ಹಿಂದೆ IRCTC ನಕಲಿ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟನ್ನು ವಂಚಕರು ಸಿದ್ಧಪಡಿಸಿದ್ದರು ಎಂದು ಜನರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿತ್ತು. ಈ ನಕಲಿ ಆಪ್‌ ಮತ್ತು ಸೈಟ್‌ ಮೂಲಕ ಜನರ ವೈಯಕ್ತಿಕ ಮಾಹಿತಿ ಪಡೆಯಲಾಗುತ್ತಿದೆ.

ಇದನ್ನೂ ಓದಿ: Sunday Astro Tips: ರವಿವಾರದಂದು ತಪ್ಪಿಯೂ ಈ ಕೆಲಸ ಮಾಡಬೇಡಿ, ನಿಮಗೆ ಸೂರ್ಯ ದೇವರ ಕೃಪೆ ಸಿಗಲ್ಲ!

Comments are closed.