Home News Maharashtra crime: ಎಣ್ಣೆ ಏಟಲ್ಲಿ ಗೆಳೆಯನ ಕತ್ತು ಕಚ್ಚಿ ರಕ್ತ ಹೀರಲು ಹೊರಟ, ರಕ್ತ ಹೀರಿದವ...

Maharashtra crime: ಎಣ್ಣೆ ಏಟಲ್ಲಿ ಗೆಳೆಯನ ಕತ್ತು ಕಚ್ಚಿ ರಕ್ತ ಹೀರಲು ಹೊರಟ, ರಕ್ತ ಹೀರಿದವ ಈಗ ರಕ್ತಕಾರಿ ಸತ್ತ!

Maharashtra crime
Image source: Suvarna news

Hindu neighbor gifts plot of land

Hindu neighbour gifts land to Muslim journalist

Maharashtra crime: ಅಂದು ಎಣ್ಣೆ ಪಾರ್ಟಿಯ ವೇಳೆ ಗೆಳೆಯರು ಕುತ್ತಿಗೆ ಕಚ್ಚಿ ರಕ್ತ ಹೀರಿದ ವಿಚಿತ್ರ ಘಟನೆಯ ಬಗ್ಗೆ ನೀವು ಓದಿದ್ದೀರಿ. ಇದೀಗ ಕಥೆ ಮುಂದುವರೆದಿದೆ. ಅವತ್ತು ರಕ್ತ ಹೀರಿದ ವ್ಯಕ್ತಿ ಇದೀಗ ರಕ್ತ ಚೆಲ್ಲಿಕೊಂಡು ಸತ್ತು ಬಿದ್ದಿದ್ದಾನೆ.

ಅವರಿಬ್ಬರೂ ಗೆಳೆಯರೇ. ಜತೆಗೆ ಎಣ್ಣೆ ಏರಿಸುವ ಹವ್ಯಾಸ ಬೇರೆ. ಇನ್ನ ಏನು ಬೇಕು ? ಬಾಸ್, ಗುರು ಬ್ರದರ್, ಬ್ರೋ – ಎನ್ನುತ್ತಾ ಗೆಳೆಯರಿಬ್ಬರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಅಂತಹ ಗೆಳೆತನವಿದ್ದ ಗೆಳೆಯನಿಗೆ ಕುಡಿಯುತ್ತಾ ಇರುವಾಗ ತನ್ನ ಗೆಳೆಯನ ರಕ್ತ ಕುಡಿಯಬೇಕು ಅನ್ನೋ ವಿಚಿತ್ರ ಬಯಕೆಯಾಗಿದೆ. ತಕ್ಷಣ ತನ್ನ ಎದುರಿಗಿದ್ದ ಗೆಳೆಯನ ಕತ್ತನ್ನು ಬಲವಾಗಿ ಕಚ್ಚಿದ್ದಾನೆ. ಬಳಿಕ ರಕ್ತ ಹೀರಲು ಮುಂದಾಗಿದ್ದಾನೆ. ಹೀಗೆ ರಕ್ತ ಹೀರಲು ಹೊರಟವನ ಹೆಸರು ಇಶ್ತಿಯಾಕ್ ಖಾನ್.

ಯಾವಾಗ ಖಾನ್ ನು ರಾಹುಲ್ ಲೊಹರ್ ನ ರಕ್ತ ಹೀರಲು ಕುತ್ತಿಗೆ ಕಚ್ಚಿದನೋ ಆಗ, ನೋವು ಹಾಗೂ ಆತಂಕಗೊಂಡು ರಾಹುಲ್ ತನ್ನ ಗೆಳೆಯನನ್ನು ದೂರಕ್ಕೆ ತಳ್ಳಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೆಲ ಹೊತ್ತಿನ ಉಳಿದ ಹೆಣ್ಣೇ, ಗೆಳೆಯರ ಜೊತೆ ಮಾತುಕತೆ ನಡೆದು ರಾಜಿಯಾಗಿ ವಾಗ್ವಾದ ಬಳಿಕ ಇಬ್ಬರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಆದರೆ ಮರಳಿ ಬಂದ ರಾಹುಲ್ ಕತ್ತು ಕಚ್ಚಿದ ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಷ್ಟ ಹೇಗಿತ್ತು ಅಂದರೆ ರಾಹುಲ್ ನನ್ನು ತಾಕತ್ತಿದ್ದರೆ ಬಾ ಎಂದು ಪ್ರಚೋದಿಸಿದ್ದ.

ಈ ಘಟನೆ ಮಹಾರಾಷ್ಟ್ರದ (Maharashtra crime) ಪಿಂಪಿರಿ ಚಿಂಚಿವಾಡ್ ಜಿಲ್ಲೆಯಲ್ಲಿ ನಡೆದಿದೆ.ಇತರ ಗೆಳೆಯರು ರಾಹುಲ್ ಹಾಗೂ ಇಶ್ತಿಯಾಕ್ ಸಮಾಧಾನ ಮಾಡಿದ್ದಾರೆ. ಬಳಿಕ ಪಾರ್ಟಿ ಅಂತ್ಯವಾಗಿದೆ. ಜಗಳದ ಕಾರಣ ಬಾರ್‌ನಲ್ಲಿದ್ದ ಇತರರು ಗರಂಗೊಂಡಿದ್ದಾರೆ. ತಕ್ಷಣವೇ ಎದ್ದು ಹೋಗುವಂತೆ ಸೂಚಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪಾರ್ಟಿ ಅಂತ್ಯಗೊಳಿಸಿ ಎಲ್ಲರೂ ಮನೆಗೆ ತೆರಳಿದ್ದಾರೆ. ಇತ್ತ ರಾಹುಲ್ ಹಾಗೂ ಖಾನ್ ಇಬ್ಬರೂ ಮನೆಗೆ ತೆರಳಿದ್ದಾರೆ. ಏರಿಸಿದ್ದ ಎಣ್ಣೆ ಗುಂಗು ಒಂದಷ್ಟು ಇಳಿದಿದೆ. ಆದರೆ ಮನಸ್ಸಿನಲ್ಲಿ ದ್ವೇಷ ಹಾಗೆಯೇ ಇತ್ತಲ್ಲ, ಹಾಗಾಗಿ ರಾಹುಲ್ ಇಶ್ತಿಯಾಕ್ ಖಾನ್ ಗೆ ಮತ್ತೆ ಕರೆ ಮಾಡಿದ್ದಾನೆ. ಸಣ್ಣಗೆ ಧಮಕಿ ಬೇರೆ ಹಾಕಿದ್ದಾನೆ. ಆಗ ಕೋಪಗೊಂಡ ಇಸ್ತಿಯಾ ಖಾನ್ ನಿನಗೆ ತಾಕತ್ತಿದ್ದರೆ ನನ್ನ ಏರಿಯಾಗೆ ಬಂದು ಮುಖ ತೋರಿಸು ಎಂದು ಚಾಲೆಂಜ್ ಹಾಕಿದ್ದಾನೆ.

ಇನ್ನು ಇಳಿಯದ ಇನ್ನೂ ಪೂರ್ತಿಯಾಗಿ ಇಳಿಯದ ಗುಂಡಿನ ಗುಂಗು ಮತ್ತು ಬಂಡ ಧೈರ್ಯದಿಂದ ರಾಹುಲ್ ಬೈಕ್ ಹತ್ತಿ ಇಶ್ತಿಯಾಕ್ ಏರಿಯಾ ಪ್ರವೇಶಿಸಿದ್ದಾರೆ. ಇಶ್ತಿಯಾಕ್ ಭೇಟಿಯಾದ ಕೂಡಲೇ ನಿನ್ಗೆ ನನ್ನ ರಕ್ತ ಬೇಕಾ?ಯಾವ ಧೈರ್ಯದಲ್ಲಿ ನನಗೆ ಕಚ್ಚಿದೆ. ನಾಯಿ ರೀತಿ ರಕ್ತ ಕುಡಿಯಲು ನನ್ನ ಮೇಲೆ ಸ್ಕೆಚ್ ಹಾಕುತ್ತಿಯಾ ಎಂದು ಗದರಿಸಿದ್ದಾನೆ. ಇತ್ತ ಇಶ್ತಿಯಾಕ್ ಕೂಡ ಮರು ಸವಾಲು ಹಾಕಿದ್ದಾನೆ. ನಿನ್ನನ್ನು ಜೀವಂತ ಉಳಿಸಲ್ಲ ಎಂದ ರಾಹುಲ್ ಲೋಹರ್ ಅಕ್ಕ ಪಕ್ಕ ನೋಡಿ ಪಕ್ಕದಲ್ಲೇ ಇದ್ದ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ.
ರಾಹುಲ್ ಒಂದೇ ಕಲ್ಲ ಏಟಿಗೆ ಇಶ್ತಿಯಾಕ್ ಖಾನ್ ನೆಲಕ್ಕುರಳಿದ್ದಾನೆ. ಮತ್ತೊಂದೆರಡು ಏಟು ಬೀಸಿದ ರಾಹುಲ ಲೋಹರ್ ಸ್ಥಳದಿಂದ ಹಾಕಿತ್ತಿದ್ದಾನೆ ತಲೆಯ ಮೇಲೆ ಕಲ್ಲೆಟು ತಿಂದ ನೆಲಕ್ಕೆ ಬಿದ್ದ ಇಶ್ತಿಯಾಕ್ ಖಾನ್ ಮತ್ತೆ ಏಳಲೇ ಇಲ್ಲ. ಇದೀಗ ಆರೋಪಿ ರಾಹುಲ್ ಲೋಹರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಕ್ತ ಕುಡಿಯಲು ಹೋದವನು ರಕ್ತ ಚೆಲ್ಲಿ ಜೀವ ಬಿಟ್ಟಿದ್ದಾನೆ.

ಇದನ್ನೂ ಓದಿ: Snake and Ladder Board Game: ಹಾವು ಏಣಿ ಆಟದ ಹಿನ್ನೆಲೆ ನಿಮಗೆ ತಿಳಿದಿದೆಯೇ?