Kitchen tips: ನೀವು ಮಾಡಿಟ್ಟ ಪದಾರ್ಥದಲ್ಲಿ ಉಪ್ಪು ಜಾಸ್ತಿಯಾಯಿತೇ? ಟೆನ್ಶನ್‌ ಬೇಡ, ಈ ಟೆಕ್ನಿಕ್‌ ಬಳಸಿ ನೋಡಿ!!!

Lifestyle kitchen tips how to neutralize Salt in food tips to remove excess salts in food

Kitchen tips: ಅಡುಗೆ ಮಾಡುವುದು ಎಷ್ಟು ಕಷ್ಟದ ಕೆಲಸ ಎಂದು ಕೆಲವರು ಹೇಳಿದರೆ, ಇದನ್ನು ಇಷ್ಟ ಪಟ್ಟು ಮಾಡುವವರ ಗುಂಪು ಕೂಡಾ ಇದೆ. ಆದರೆ ಅಡುಗೆ ಕೇವಲ ನಮಗೆ ರುಚಿ ಮಾತ್ರ ಕೊಡುವುದಲ್ಲ, ಇನ್ನೊಬ್ಬರಿಗೂ ಕೂಡಾ ಅದು ಫರ್ಫೆಕ್ಟ್‌ ಎಂದೆನಿಸಬೇಕು. ಆಗ ನಮಗೆ ಅಡುಗೆ ಮಾಡಲು ಚೆನ್ನಾಗಿ ಗೊತ್ತಿದೆ ಎಂದರ್ಥ. ಈ ಉಪ್ಪು, ಹುಳಿ, ಖಾರ ಎಲ್ಲವೂ ಸಮವಾಗಿದ್ದರೆ ಮಾತ್ರ ಅಡುಗೆ ಚೆನ್ನಾಗಿರುವುದು ಎಂದರ್ಥ. ಇದರಲ್ಲಿ ಯಾವುದೂ ಕೂಡಾ ಹೆಚ್ಚು ಕಮ್ಮಿಯಾದರೆ ಅಡುಗೆ ಮಾಡಿದ್ದನ್ನು ತಿನ್ನಲು ಅಸಾಧ್ಯ.

ಈ ಉಪ್ಪು ಎಂಬ ಅಂಶ ಈ ಅಡುಗೆ ಮಾಡುವಾಗ ಜಾಗೃತೆಯಾಗಿ ಹಾಕದಿದ್ದರೆ ಅದರ ನಂತರ ಆಗುವ ಫಜೀತಿ ಅಷ್ಟಿಷ್ಟಲ್ಲ. ಏಕೆಂದರೆ ಇಡೀ ಅಡುಗೆ ಒಂದು ಸ್ವಾದವನ್ನು ಒಂದೇ ಕ್ಷಣದಲ್ಲಿ ಕೆಡಿಸಿ ಬಿಡುವ ಶಕ್ತಿ ಈ ಉಪ್ಪಿಗಿದೆ. ಹಾಗೆನೇ ಹದವಾಗಿ ಹಾಕಿದರೆ ನಾಲಗೆಗೆ ಸಖತ್‌ ರುಚಿ ನೀಡುವಂತಹ ಕಲೆನೂ ಉಪ್ಪಿಗಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಅಡುಗೆ ಮಾಡುವಾಗ ಉಪ್ಪು ಜಾಸ್ತಿ ಹಾಕಿದರೆ ಏನು ಮಾಡುವುದು? ಈ ಉಪ್ಪಿನ ಅಂಶ ತೆಗೆಯುವುದು ಹೇಗೆ?( kitchen tips) ಬನ್ನಿ ಅದೇಗೆ ಅಂತ ತಿಳಿಯೋಣ.

ಇದನ್ನೂ ಓದಿ: ವಾಟ್ಸಪ್ ಮೂಲಕ ಈಗ ಗೃಹಲಕ್ಷ್ಮೀ ದುಡ್ಡು ಪಡೆಯೋ ಅವಕಾಶ ! ಹೇಗೆ ಗೊತ್ತಾ? ಈ ಲೇಖನ ಓದಿ !

ಅಡುಗೆಯಲ್ಲಿ ಉಪ್ಪಿನ ಅಂಶ ಹೆಚ್ಚಾದರೆ ಬಾಯಿಗೆ ಇಡೋಕೂ ಆಗುವುದಿಲ್ಲ. ತಿಂದರಂತೂ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ. ಇಂತಹ ಸಂದರ್ಭದಲ್ಲಿ ನೀವು ಆಲೂಗಡ್ಡೆಯನ್ನು ಕಟ್‌ ಮಾಡಿ ತಯಾರು ಮಾಡಿದ ಅಡುಗೆಗೆ ಹಾಕಲು ಹೋಗುತ್ತೀರ. ಆದರೆ ಇದು ಸರಿಯಲ್ಲ. ಸಂಶೋದನೆಯ ಪ್ರಕಾರ ಆಲೂಗಡ್ಡೆ ಹೆಚ್ಚುವರಿ ಉಪ್ಪಿನ ಅಂಶ ಹೀರಲ್ಲ. ಏಕೆಂದರೆ ಉಪ್ಪಿನ ನೀರಿನಲ್ಲಿ ಆಲೂಗಡ್ಡೆ ಚೆನ್ನಾಗಿ ಬೇಯುತ್ತದೆ. ಆದರೆ ನೀರಿನಲ್ಲಿರುವ ಹೆಚ್ಚಿನ ಉಪ್ಪನ್ನು ಹೀರಿಕೊಳ್ಳುವುದಿಲ್ಲ. ಒಂದು ವೇಳೆ ನೀವು ಹಾಕಿದರೂ ಕೂಡಾ ಆಲೂಗಡ್ಡೆ ಉಪ್ಪು ನೀರಲ್ಲಿ ಚೆನ್ನಾಗಿ ಬೇಯುತ್ತೆ ಹೊರತು ಉಪ್ಪಿನ ಅಂಶ ಅಲ್ಲೇ ಇರುತ್ತೆ.

ಇದನ್ನೂ ಓದಿ: ಭಾರತದ ಕೊನೆಯ ಗ್ರಾಮ ಯಾವುದು ಗೊತ್ತಾ ? ಅರೆ, ಇದೇನು ಫಸ್ಟ್ – ಲಾಸ್ಟ್ ವಿಲೇಜ್ ?!

​ಕ್ರೀಮ್‌ ನಂತಹ ಉತ್ಪನ್ನಗಳು ಪದಾರ್ಥದಲ್ಲಿರುವ ಉಪ್ಪಿನ ಅಂಶವನ್ನು ಕಡಿಮೆಗೊಳಿಸುತ್ತದೆ. ಒಂದು ವೇಳೆ ನೀವು ಟೊಮೆಟೋ, ಮೆಣಸಿನಕಾಯಿ ಹಾಕಿ ಮಾಡಿದಂತಹ ಯಾವುದೇ ಅಡುಗೆಗೆ ಹುಳಿ ಮೊಸರು ಅಥವಾ ಕ್ರೀಂ ಸೇರಿಸಿ ಹೆಚ್ಚಿನ ಉಪ್ಪಿನ ಅಂಶ ತೆಗೆಯಬಹುದು. ಒಬ್ಬರೇ ಇರುವವರು ಅಡುಗೆ ಮಾಡುವಾಗ ಉಪ್ಪಿನಂಶ ಹೆಚ್ಚಾರೆ ತಕ್ಷಣ ಅದಕ್ಕೆ ತರಕಾರಿಗಳನ್ನು ಸೇರಿಸಿ. ಬೀನ್ಸ್‌, ಆಲೂಗಡ್ಡೆ, ಉಪ್ಪು ಹಾಕದ ಅನ್ನ, ನೂಡಲ್ಸ್‌ ಇವೆಲ್ಲ ಉಪ್ಪಿನ ಅಂಶವನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವಲ್ಲಿ ಸಹಕಾರಿ.

ಇದನ್ನೂ ಓದಿ: ಸೆಪ್ಟೆಂಬರ್ ನಲ್ಲಿ ಬ್ಯಾಂಕ್ ಕೆಲಸ ಇದ್ರೆ, ಈಗ್ಲೇ ಬ್ಯಾಂಕ್ ಗೆ ಹೊರಡಿ, ಬರುವ ತಿಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ತಿಂಗಳು ಬ್ಯಾಂಕ್ ಬಂದ್ !

ಸಾಂಬಾರಿನಲ್ಲಿ ಉಪ್ಪು ಹೆಚ್ಚಾದರೆ ಅದಕ್ಕೆ ಸ್ವಲ್ಪ ನೀರನ್ನು ಹಾಕಿ. ಬೇರೆ ಪದಾರ್ಥಗಳನ್ನು ಸೇರಿಸಬೇಕು ಎಂದರೆ ಅದು ಉಪ್ಪು ರಹಿತವಾಗಿರಬೇಕು. ನೀವು ನೀರು ಬರೆಸಿದರೆ ನೀವು ಮಾಡಿದ ಪದಾರ್ಥ ಸ್ವಲ್ಪ ತೆಳ್ಳಗಾಗಬಹುದು. ಅದನ್ನು ಅನಂತರ ಸರಿಪಡಿಸಿಕೊಳ್ಳಬಹುದು. ಅಂದರೆ ಸ್ವಲ್ಪ ಜೋಳದ ಹಿಟ್ಟು, ಕಡಲೆ ಹಿಟ್ಟು ತೆಗೆದುಕೊಂಡು ನೀರಲ್ಲಿ ಮಿಕ್ಸ್‌ ಮಾಡಿ ಸಾಂಬಾರಿಗೆ ಸೇರಿಸಿದರೆ ಸರಿಯಾಗುತ್ತದೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಮದುವೆಯಾಗಲು ಕೊನೆಗೂ ಸಿಕ್ಲು ಬ್ಯೂಟಿ ಫುಲ್ ಹುಡುಗಿ ! ಆದ್ರೆ ಒಂದು ಕಂಡೀಷನ್ ನಡೆಸಿ ಕೊಟ್ರೆ ಮಾತ್ರ !

ಇನ್ನೊಂದು ಏನೆಂದರೆ ಅಡುಗೆಯಲ್ಲಿ ಹೆಚ್ಚಾದ ಉಪ್ಪನ್ನು ಈ ಜೇನುತುಪ್ಪ ಅಥವಾ ಸಕ್ಕರೆ ನಿಯಂತ್ರಣಕ್ಕೆ ತರುತ್ತದೆ. ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಉಪ್ಪು ಜಾಸ್ತಿಯಾದರೆ ಒಂದು ಟೇಬಲ್‌ ಚಮಚ ಸಕ್ಕರೆ ಸೇರಿಸಿ ನೋಡಿ. ಹಾಗೆನೇ ವೈಟ್‌ ವಿನೆಗರ್‌, ನಿಂಬೆ ಹಣ್ಣಿನ ರಸ, ಆಪಲ್‌ ಸೈಡರ್‌ ವಿನೆಗರ್‌ ಇವುಗಳನ್ನು ಯಾವುದಾರೂ ಒಂದನ್ನು ಹಾಕಿ ಉಪ್ಪಿನ ಸಮತೋಲನವನ್ನು ಕಾಪಾಡಬಹುದು.

ಇದನ್ನೂ ಓದಿ:ಯುವಕ ಯುವತಿಯರಿಗೆ ಬಂಪರ್ ಸುದ್ದಿ: ಇನ್ನು PUC ಮುಗಿಯೋ ವಯಸ್ಸಲ್ಲಿ MLA – MP ಆಗ್ಬೋದು ! 

Comments are closed.