ಲಿಫ್ಟ್‌ ಹಾಳಾಗಿ ಮಹಡಿಗಳ ಮಧ್ಯೆ ಸಿಲುಕಿಕೊಂಡ ಮಹಿಳೆ ಸಾವು!

lifts falls at noida and women died

Share the Article

ಲಿಫ್ಟ್‌ನ ಕೇಬಲ್‌ ತುಂಡಾಗಿ ಮಹಿಳೆಯೊಬ್ಬರು ಹೃದಯಸ್ತಂಭನಗೊಳಗಾಗಿ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಲಿಫ್ಟ್‌ ನೆಲಕ್ಕೆ ತಾಗದೆ, ಕಟ್ಟಡಗಳ ಮಧ್ಯೆ ಸಿಲುಕಿಕೊಂಡಿತ್ತು, ಈ ಸಮಯದಲ್ಲಿ ಮಹಿಳೆ ಒಬ್ಬಳೇ ಲಿಫ್ಟ್‌ನಲ್ಲಿದ್ದರು. ಲಿಫ್ಟ್‌ನ ತಂತಿ ತುಂಡಾಗಿ ಈ ಘಟನೆ ನಡೆದಿದೆ. ಈ ಘಟನೆ ನೊಯ್ಡಾದ ವಸತಿ ಸಮುಚ್ಛಯದಲ್ಲಿ ನಡೆದಿದೆ.

ಲಿಫ್ಟ್‌ ತಂತಿ ತುಂಡಾಗಿದ್ದರಿಂದ ಈ ಘಟನೆ ನಡೆದಿದೆ. ಆದರೆ ಈ ಸಂದರ್ಭದಲ್ಲಿ ಲಿಫ್ಟ್‌ನೊಳಗಿದ್ದ ಮಹಿಳೆ ಪ್ರಜ್ಞೆ ತಪ್ಪಿದ್ದರು. ಆಸ್ಪತ್ರೆಗೆ ದಾಖಲಿಸುವ ಮೊದಲೇ ಮಹಿಳೆಯ ಸ್ಥಿತಿಚಿಂತಾಜನಕವಾಗಿತ್ತು ಎನ್ನಲಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಲಿಫ್ಟ್‌ನೊಳಗಿದ್ದ ಸಂದರ್ಭದಲ್ಲಿ ಮಹಿಳೆ ಹೃದಯಸ್ತಂಭನಗೊಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ.

ಲಿಫ್ಟ್‌ನಲ್ಲಿದ್ದ ಸಂದರ್ಭದಲ್ಲಿ ಮಹಿಳೆಯ ತಲೆಗೆ ಗಾಯವಾಗಿದ್ದು, ಮೊಣಕೈಗೆ ಪೆಟ್ಟಾಗಿತ್ತು ಎಂದು ವರದಿಯಾಗಿದೆ.

Comments are closed.