Home News Tamilnadu: ಬೆಳ್ಳಿಗೆ ಸಿಕ್ಕಿದೆ ಚಿನ್ನದಂಥಾ ಕೆಲ್ಸ: ದಿ ಎಲಿಫೆಂಟ್ ವಿಸ್ಪರ್ಸ್ ಕಾವಾಡಿಗೆ ಒಲಿದ ಸರ್ಕಾರಿ ಕೆಲಸ

Tamilnadu: ಬೆಳ್ಳಿಗೆ ಸಿಕ್ಕಿದೆ ಚಿನ್ನದಂಥಾ ಕೆಲ್ಸ: ದಿ ಎಲಿಫೆಂಟ್ ವಿಸ್ಪರ್ಸ್ ಕಾವಾಡಿಗೆ ಒಲಿದ ಸರ್ಕಾರಿ ಕೆಲಸ

Tamilnadu
image source: India Times

Hindu neighbor gifts plot of land

Hindu neighbour gifts land to Muslim journalist

Tamilnadu: ಆಸ್ಕರ್‌ ಪ್ರಶಸ್ತಿ ಪುರಸ್ಕೃತ ದಿ ಎಲಿಫ್ಯಾಂಟ್‌ ವಿಸ್ಪ​ರ್ಸ್‌ ಸಾಕ್ಷ್ಯಚಿತ್ರಕ್ಕೆ ಪ್ರೇರಣೆಯಾಗಿದ್ದ ಬೆಳ್ಳಿ ಅವರನ್ನು ಮೊದಲ ಸರ್ಕಾರಿ ಮಹಿಳಾ ಕಾವಡಿಯಾಗಿ ತಮಿಳುನಾಡು (Tamilnadu) ಸರ್ಕಾರ ನೇಮಕ ಮಾಡಿದೆ.

ಬೊಮ್ಮನ್ ಮತ್ತು ಬೆಳ್ಳಿ ದಂಪತಿಗಳು ತಾಯಿಯಿಂದ ಬೇರ್ಪಟ್ಟ ಎರಡು ಪುಟ್ಟ ಆನೆ ಮರಿಗಳನ್ನು ತಮ್ಮ ಮಕ್ಕಳಂತೆ ಮುದ್ದಾಗಿ ಬೆಳೆಸಿದರು. ಇವರ ಸ್ಫೂರ್ತಿದಾಯಕ ಜೀವನವನ್ನು ಸೆರೆ ಹಿಡಿದು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಅವರು ಆಸ್ಕರ್ ಗೆ ತಲುಪಿಸಿದ್ದು , ಆಸ್ಕರ್ ಮುಡಿಗೇರಿಸಿಕೊಂಡ ಬಳಿಕ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಎಲಿಫೆಂಟ್ ವಿಸ್ಪರರ್ಸ್ ನ ರಿಯಲ್ ಹೀರೋಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೈಗೆ ಪ್ರಶಸ್ತಿ ಇಟ್ಟು ಸಂಭ್ರಮಿಸಿದ್ದರು.

ಇದೀಗ ಬೆಳ್ಳಿ ಅವರು ಆನೆ ಮರಿಗಳನ್ನು ಸಾಕಿ-ಸಲಹಿದ ರೀತಿಗೆ ಅವರನ್ನು ರಾಜ್ಯದ ಮೊದಲ ಮಹಿಳಾ ಕಾವಡಿಯಾಗಿ ನೇಮಕ ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ತಾತ್ಕಾಲಿಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಿ, ಈಗ ತಮಿಳುನಾಡಿನ ಮೊದಲ ಸರ್ಕಾರಿ ಮಹಿಳಾ ಕಾವಡಿಯಾಗಿ ನೇಮಕಗೊಂಡಿದ್ದಾರೆ.

ನೀಲಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಹುಲಿ ಅಭಯಾರಣ್ಯದಲ್ಲಿರುವ ತೆಪ್ಪಕಾಡು ಆನೆ ಬಿಡಾರದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಇವರಿಗೆ ಮುಖ್ಯಮಂತ್ರಿ ಸ್ಟಾಲಿನ್‌ ನೇಮಕ ಪತ್ರ ವಿತರಣೆ ಮಾಡಿದ್ದಾರೆ.

 

ಇದನ್ನು ಓದಿ: Uttar Pradesh: RSS ಕಚೇರಿ ಮೇಲೆ ಕಲ್ಲು ತೂರಾಟ, ದಾಂಧಲೆ; ಕಾರ್ಯಕರ್ತರಿಗೆ ಥಳಿತ !