ಸುಳ್ಯ: ಕಳಂಜದ ಮಸೂದ್ ಹತ್ಯೆ ಪ್ರಕರಣ : 8 ನೇ ಆರೋಪಿಗೆ ಷರತ್ತುಬದ್ದ ಜಾಮೀನು

Latest news Sullia news Conditional bail for 8th accused in Masood murder case of Kalanja

Share the Article

ಸುಳ್ಯ : ಕಳಂಜದ ಮಸೂದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ಪೈಕಿ 8ನೇ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ. ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಂಡಿದೆ ಎಂದು ತಿಳಿದುಬಂದಿದೆ

2022 ಜು.19 ರಂದು ಕಳಂಜದಲ್ಲಿ 8 ಮಂದಿ ಯುವಕರ ತಂಡ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಮಸೂದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳನ್ನು ಬೆಳ್ಳಾರೆ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಪ್ರಕರಣದ 8ನೇ ಆರೋಪಿಯಾಗಿರುವ ಭಾಸ್ಕರ ಕೆ.ಎಂ. ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದು ಆ.3 ರಂದು ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿರುವುದಾಗಿ ತಿಳಿದುಬಂದಿದೆ.

 

ಇದನ್ನು ಓದಿ: PM Kisan Maan Dhan Yojana: ಇನ್ನೂ 3000 ಬರುತ್ತೆ ಅಕೌಂಟ್’ಗೆ, ರೈತರೇ ಏನ್ರೀ ನಿಮ್ಮಲಕ್ಕು?, ಬಂದು ಬೀಳ್ತಿದೆ ದುಡ್ಡಿನ ಮೇಲೆ ದುಡ್ಡು !

Comments are closed.