Actor Kishore: ಧರ್ಮಸ್ಥಳ ಸೌಜನ್ಯ ಹತ್ಯೆ: ಕಾಂತಾರ ನಟನಿಂದ ಸ್ಫೋಟಕ ಹೇಳಿಕೆ – ‘ನಮಗ್ಯಾಕೆ ಅನ್ನೋದನ್ನು ಬಿಡಿ, ದನಿ ಎತ್ತಿ ‘ ಎಂದ ನಟ
Latest national news kantara film actor Kishore reacts to Manipur incident and Dharmasthala Sowjanya murder case
Actor Kishore: ಬಹುಭಾಷಾ ನಟ ಕಿಶೋರ್ (Actor Kishore) ಸಿನಿಮಾಗಳ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಆದರ್ಶ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಮಣಿಪುರ ಘಟನೆ (Manipur Incident) ಹಾಗೂ ಸೌಜನ್ಯ ಪ್ರಕರಣದ (Sowjanya Case) ಬಗ್ಗೆ ಬೇಸರ ಹೊರಹಾಕಿದ್ದಾರೆ.
ನಟ ಕಿಶೋರ್ ಸಮಾಜದಲ್ಲಿ ಸಂಭವಿಸುವ ಘಟನೆಗಳಿಂದ ಅನ್ಯಾಯ ಎನಿಸಿದಾಗ ನ್ಯಾಯಕ್ಕಾಗಿ ಧ್ವನಿ ಎತ್ತಲು ಹಿಂದೆ ಮುಂದೆ ನೋಡುವುದಿಲ್ಲ. ಯಾವುದೇ ಘಟನೆ ಇರಲಿ ಅನ್ಯಾಯದ ವಿರುದ್ದ ಮಾತಾನಾಡುತ್ತಾರೆ.
ಮಣಿಪುರ ಘಟನೆ ಬಗ್ಗೆ, ರಾಜಕೀಯದ ದಾಳಗಳಾಗಿ ಈ ರೀತಿ ಸಾಯೋದು ತುಂಬಾ ಅನ್ಯಾಯ. ಒಂದು ಜೀವ ಇನ್ನೊಂದು ಜೀವವನ್ನು ಕೊಲ್ಲೋದು ಮನುಷ್ಯತ್ವವೇ ಅಲ್ಲ ಎಂದು ನಟ ಕಿಶೋರ್ ಹೇಳಿದ್ದಾರೆ.
ಇದೀಗ ಸೌಜನ್ಯ ಕೇಸ್ ಪ್ರಕರ ಸಂಬಂಧ ಪಟ್ಟಂತೆ ಮಾತನಾಡಿದ್ದು, ಸೌಜನ್ಯ ಪ್ರಕರಣದಲ್ಲೂ ತುಂಬಾ ಅನ್ಯಾಯವಾಗಿದೆ. ಏನ್ ಮಾತಾಡಬೇಕು ಗೊತ್ತಾಗಲ್ಲ. ನನ್ನ ಪ್ರಕಾರ ಇದಕ್ಕೆಲ್ಲ ಪರಿಹಾರ ಅಂದ್ರೆ ವಿದ್ಯೆ ಅನ್ಸುತ್ತೆ. ಸೌಜನ್ಯ ಕೇಸ್,ಮಣಿಪುರ ಘಟನೆ ಈ ಎರಡು ವಿಷಯಗಳು ನೋವಿನ ಸಂಗತಿ. ರಾಜಕೀಯದ ದಾಳಗಳಾಗಿ ಅಪರಾಧ ಪ್ರಕರಣಗಳನ್ನು ತಿರುವುದು ತಪ್ಪುಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನಾವು ರಾಜರು ಎಂದ ಮೇಲೆ ಅವರ ಕೈಯಿಂದ ನ್ಯಾಯ ನಿರೀಕ್ಷಿಸಬಾರದು. ಈ ಘಟನೆ ಸಂಬಂಧಿಸಿದಂತೆ ಯಾರಿಗೊ ಅನ್ಯಾಯ ಆಗಿದೆ. ನಮಗ್ಯಾಕೆ ಎಂದು ಕೂರುವ ಮನಸ್ಥಿತಿ ಮೊದಲು ಬಿಡಬೇಕು. ಅವರಿಗಾದ ಸ್ಥಿತಿ ನಾಳೆ ನಮಗೂ ಆಗಬಹುದು ಹೀಗಾಗಿ ಯಾವುದೇ ಅನ್ಯಾಯ ಎನಿಸಿದರೂ ಧ್ವನಿ ಎತ್ತುವರಾಗಬೇಕು.
ಮಣಿಪುರದಂತಹ ಘಟನೆಗಳು ಎಲ್ಲೂ ಆಗಬಾರದು. ಸೌಜನ್ಯ ಕೇಸ್ ರೀತಿ ಕೂಡ ಎಲ್ಲೂ ಆಗಬಾರದು. ಇಂತ ವಿಚಾರಗಳನ್ನು ಮುನ್ನೆಲೆಗೆ ತರಬೇಕು. ಇನ್ನು ಸೌಜನ್ಯ ಪ್ರಕರಣದ ವಿಚಾರವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಇದು ಒಳ್ಳೆಯ ಬೆಳವಣಿಗೆ ಎಂದು ಕಿಶೋರ್ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ
ಇನ್ನು ಇನ್ಸ್ಟಾಗ್ರಾಮ್ನಲ್ಲಿ ವಿಶೇಷವಾಗಿ ಪೋಸ್ಟ್ ಶೇರ್ ಮಾಡಿದ್ದು, ಈ ಮೂಲಕ ಆಡಳಿತ ವ್ಯವಸ್ಥೆಯನ್ನು ಟೀಕಿಸಿದ್ದರು. ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನೀವು ಈಗಲಾದರೂ ನಿಮ್ಮ ಬಾಯಿ ತೆರೆದು ಈ ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ ಎಂದು ಬರೆದಿದ್ದಾರೆ.
ಇದನ್ನೂ ಓದಿ: Gruha Jyothi: ಶೂನ್ಯ ಮೀಟರ್ ಸ್ಟಾರ್ಟ್ ಆಗಿದೆ, ನೀವೂ ಅರ್ಹರಾ – ಈ ಚೆಕ್ ಲಿಸ್ಟ್ ನೋಡಿ !
Comments are closed.