ಮೊಬೈಲ್ ಚಾರ್ಜರ್ ಕೊಡದ ಮುನಿಸು : ನೇಣಿಗೆ ಶರಣಾದ ಯುವಕ

Share the Article

ಪಾವಗಡ:- ಮೊಬೈಲ್ ಚಾರ್ಜರ್ ಕೇಳಿದ್ದಕ್ಕೆ ಕೊಡಲಿಲ್ಲವೆಂದು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಸಿಂಗರೆಡ್ಡಿ ಹಳ್ಳಿ ಗ್ರಾಮದಲ್ಲಿ ಭಾನುವಾರ ಮದ್ಯಾಹ್ನ ನಡೆದಿದೆ, ಗ್ರಾಮದ ಆಶಾ ಕಾರ್ಯಕರ್ತೆ ವರಲಕ್ಷ್ಮಮ್ಮ ಎನ್ನುವ ಪುತ್ರ ನಿಖಿಲ್ ಗೌಡ (18) ಪಾವಗಡ ಪಟ್ಟಣದ ಶಾಂತಿ ಎಸ್ ಎಸ್ ಕೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಭಾನುವಾರದ ರಜೆ ಕಾರಣ ಮನೆಯಲ್ಲಿಯೇ ಇದ್ದ ನಿಖಿಲ್ ತಾಯಿಯೊಂದಿಗೆ ನನಗೆ ಅದು ಕೊಡಿಸಿಲ್ಲ ಇದು ಕೊಡಿಸಿಲ್ಲ ಎಂದು ಗಲಾಟೆ ಮಾಡುತ್ತಿದ್ದ, ನನಗೆ ಮೊಬೈಲ್ ಚಾರ್ಜರ್ ಕೊಡು ಎಂದು ತಮ್ಮ ತಾಯಿ ವರಲಕ್ಷ್ಮಿ ಅವರ ಬಳಿ ಸುಮಾರು 1:45 ರ ಸಮಯದಲ್ಲಿ ಗಲಾಟೆ ಮಾಡಿದಾಗ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ಹೇಳಿದ ನಂತರ ಅವರು ಹತ್ತಿರದವರ ಮನೆ ಬಳಿ ಹೂ ಹೂ ಕಟ್ಟಲು ಹೋಗಿ ಸುಮಾರು 2 ಗಂಟೆಗೆ ಸಮಯಕ್ಕೆ ಹಿಂತಿರುಗಿ ಮನೆ ಬಳಿ ಬಂದು ಬಾಗಿಲು ಬಡಿದಾಗ ಒಳಗಿದ್ದ ನಿಖಿಲ್ ಗೌಡ ಬಾಗಿಲು ತೆಗೆದಿಲ್ಲ ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಕಬ್ಬಿಣದ ತೇರಿಗೆ ಅವರ ತಾಯಿಯ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆಂದು ನಿಖಿಲ್ ಗೌಡ ತಾಯಿ ವರಲಕ್ಷ್ಮಿ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ,

ಇನ್ನು ಮೃತ ನಿಖಿಲ್ ಗೌಡ ತಂದೆ ಕಳೆದ ಎಂಟು ವರ್ಷಗಳ ಹಿಂದೆ ಸಾವನ್ನಪ್ಪಿದ್ದು ಸದ್ಯ ತಾಯಿ ವರಲಕ್ಷ್ಮಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,ಸಹೋದರಿ ಭಾಗ್ಯಮ್ಮ ಅವರು ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಸ್ಥಳಕ್ಕೆ ವೈ ಎನ್ ಹೊಸಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಾಳಪ್ಪ ನಾಯ್ಕೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.

Leave A Reply