DA Hike: ಕೇಂದ್ರ ಸರಕಾರದಿಂದ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸಂಬಳದಲ್ಲೂ ಏರಿಕೆ!

Latest news Salary hike for government employees along with DA increase

DA Hike: ಕೇಂದ್ರ ಸರ್ಕಾರವು (Central Govt Employees) ತನ್ನ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. ಹೌದು, ಕೆಂದ್ರವು ಶೀಘ್ರವೇ ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಾದರೆ ಇದರಿಂದ ನೌಕರರ ಸಂಬಳವೂ ಹೆಚ್ಚಾಗುತ್ತದೆ. ಒಂದು ಕೋಟಿಗೂ ಅಧಿಕ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನ ದೊರೆಯಲಿದೆ.

ಡಿಎ ಜೊತೆಗೆ, ತುಟ್ಟಿಭತ್ಯೆ ಪರಿಹಾರ (ಡಿಆರ್) ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಸ್ತುತ ಡಿಎ ಶೇಕಡಾ 42 ರಷ್ಟಿದೆ. ಈ ಡಿಎ 2023 ರ ಜನವರಿಯಿಂದ ಜೂನ್ ಅವಧಿಗೆ ಅನ್ವಯಿಸುತ್ತದೆ.

ಕೇಂದ್ರ ಸರ್ಕಾರವು ಈ ಬಾರಿ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎಂಬ ನಿರೀಕ್ಷೆಗಳಿವೆ. ಈ ನಿರೀಕ್ಷೆ ಕಾರ್ಯರೂಪಕ್ಕೆ ಬಂದರೆ ತುಟ್ಟಿಭತ್ಯೆ ಶೇಕಡಾ 46 ಕ್ಕೆ ಏರುತ್ತದೆ ಹಾಗೂ ಅದಕ್ಕೆ ಅನುಗುಣವಾಗಿ ನೌಕರರ ವೇತನವೂ ಹೆಚ್ಚಾಗುತ್ತದೆ. ಇದು ಸಂಭವಿಸಿದಲ್ಲಿ ಜುಲೈನಿಂದ ಡಿಸೆಂಬರ್ ಅವಧಿಗೆ ಶೇಕಡಾ 46 ರಷ್ಟು ಡಿಎ ಅನ್ವಯವಾಗುತ್ತದೆ.

ಸದ್ಯ ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಡಿಎ ನೀಡುತ್ತದೆ. ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳನ್ನು ಇಂದು ಇನ್ನೂ ಬಿಡುಗಡೆ ಮಾಡಿಲ್ಲ. ಇದರ ಆಧಾರದ ಮೇಲೆ, ಡಿಎ ಎಷ್ಟು ಹೆಚ್ಚಾಗಬಹುದು ಎಂಬ ಅಂದಾಜಿಸಲಾಗುವುದು. ಆದರೆ, ಮೋದಿ ಸರ್ಕಾರವು ಡಿಎ ಹೆಚ್ಚಳವನ್ನು ಯಾವಾಗ ಘೋಷಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಲಾಗಿದೆ.

 

ಇದನ್ನು ಓದಿ: Gruha Jyoti: ಶೂನ್ಯ ಬಿಲ್ ದರ ಈ ರೀತಿ ಇರಲಿದೆ! ಜೊತೆಗೊಂದು ವಿಶೇಷ ಬರಹ!!! 

Leave A Reply

Your email address will not be published.