Gruha Jyoti: ಶೂನ್ಯ ಬಿಲ್ ದರ ಈ ರೀತಿ ಇರಲಿದೆ! ಜೊತೆಗೊಂದು ವಿಶೇಷ ಬರಹ!!!

Latest news Gruha Jyothi Electricity bill zero bill rate will be like this

Gruha Jyothi Electricity bill: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆ (Gruha Jyothi Scheme) ಜುಲೈ ತಿಂಗಳಿನಿಂದ ಆರಂಭವಾಗಲಿದ್ದು, ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯಲು ಗ್ರಾಹಕರು ಕಾತರರಾಗಿದ್ದಾರೆ. ನಾಳೆಯಿಂದಲೇ ಮೀಟರ್ ರೀಡಿಂಗ್ ಕಾರ್ಯ ಆರಂಭವಾಗಲಿದ್ದು, ಜೂನ್ 25 ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್​ನ ಲಾಭ ದೊರೆಯಲಿದೆ. ಇದೀಗ ಗೃಹಜ್ಯೋತಿಯ ಕರೆಂಟ್ ಬಿಲ್ (Gruha Jyothi Electricity bill) ಮಾದರಿಯು ಲಭ್ಯವಾಗಿದ್ದು, ಈ ಹೊಸ ಬಿಲ್’ನಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

ಗೃಹ ಜ್ಯೋತಿಯ ಶೂನ್ಯದರದ ವಿದ್ಯುತ್​ ಬಿಲ್​ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar), ಇಂಧನ ಸಚಿವರ ಕೆಜೆ ಜಾರ್ಜ್ (KJ George) ಅವರ ಭಾವಚಿತ್ರ ಹಾಗೂ ಗೃಹಜ್ಯೋತಿ ಲಾಂಛನ ಮುದ್ರಣವನ್ನು ಮುದ್ರಿಸಲಾಗಿದೆ. ಜೊತೆಗೆ ವಿದ್ಯುತ್ ಬಿಲ್ ಸೂಚನೆಗಳು ಹಾಗೂ ‌ಬಿಲ್ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿಯನ್ನು ಹಿಂಬದಿಯ ವಿದ್ಯುತ್ ರಶೀದಿಯಲ್ಲಿ‌‌ ನೀಡಿದ್ದಾರೆ.

ಮುಂಬದಿಯ ಕರೆಂಟ್ ಬಿಲ್ ನಲ್ಲಿ‌ ಗೃಹ ಜ್ಯೋತಿ ಅನುದಾನ ಎಂಬ ಹೊಸ ಕಾಲಂ ಅನ್ನು ಸೇರ್ಪಡೆ ಮಾಡಲಾಗಿದೆ. ಗೃಹಜ್ಯೋತಿ ಯೂನಿಟ್ ಮಾಹಿತಿ, ಪ್ರತಿ ಕಾಲಂ ಸ್ಪಷ್ಟವಾಗಿರಲಿದೆ. ಹೆಚ್ಚುವರಿ ಸರಾಸರಿ ವಿದ್ಯುತ್ ಬಳಕೆ ಮತ್ತು ಗೃಹಜ್ಯೋತಿ ಪರಿಗಣಿಸಿದ ಯೂನಿಟ್ ಅಂಶ ಕಾಲಂ ಸೇರ್ಪಡೆ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಿಲ್​ಗಳಲ್ಲಿಯೂ ವ್ಯತ್ಯಾಸ ಇರಲಿದೆ.

ಗೃಹಜ್ಯೋತಿ ಯೋಜನೆ (Gruha jyoti Scheme) ಫಲಾನುಭವಿ ಆಗಲು ಹಳೆ ಕರೆಂಟ್ ಬಿಲ್ ಬಾಕಿ ಇರಬಾರದಿತ್ತು. ಜೂನ್ ತಿಂಗಳವರೆಗೆ ವಿದ್ಯುತ್ ಬಿಲ್ ಪಾವತಿಸಬೇಕಿತ್ತು. ಆದರೆ, ಇದೀಗ ಇಂಧನ ಇಲಾಖೆ ಗೃಹಜ್ಯೋತಿ ಯೋಜನೆ ಫಲಾನುಭವಿಗೆ ಒಂದಲ್ಲ ಕಳೆದ ಮೂರು ತಿಂಗಳು ಬಿಲ್ ಬಾಕಿ ಇದ್ರೂ ಅದನ್ನ ಮನ್ನಾ ಮಾಡಲು ನಿರ್ಧರಿಸಿದೆ. ಮೂರು ತಿಂಗಳು ಬಿಲ್(current bill) ಬಾಕಿ ಇದ್ರೂ ಉಚಿತ ವಿದ್ಯುತ್ ನೀಡುವದಾಗಿ ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

 

Image source: news 18 kannada

ಇದನ್ನು ಓದಿ: Indian Navy SSC 2023: ಭಾರತೀಯ ನೌಕಾಪಡೆಯಲ್ಲಿ ಎಸ್‌ಎಸ್‌ಸಿ ಎಕ್ಸಿಕ್ಯೂಟಿವ್‌ಗಳ ನೇಮಕ: ಅರ್ಜಿ ಆಹ್ವಾನ

 

Leave A Reply

Your email address will not be published.