Post Office Scheme: ಗೃಹಿಣಿಯರಿಗೆ ಅದೃಷ್ಟದ ಯೋಜನೆ! ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಲಕ್ಷಗಳಲ್ಲಿ ಹಣ ಎಣಿಸಿ!!!
Latest news important informatin about Post Office saving schemes
post office scheme: ಸರ್ಕಾರದ ಹಲವು ಯೋಜನೆಗಳಲ್ಲಿ ಅಂಚೆ ಕಚೇರಿಯ ಯೋಜನೆಯು (post office scheme) ಒಂದು. ಈ ಯೋಜನೆ ಜನರ ಹಿತದೃಷ್ಟಿಗಾಗಿ ಸರ್ಕಾರ (government) ನಡೆಸುವ ದೊಡ್ಡಮಟ್ಟದ ಉಳಿತಾಯ ಯೋಜನೆ (Post Office saving schemes) ಎಂದೇ ಹೇಳಬಹುದು. ಇದು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ (Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ (Savings) ನೆರವಾಗುತ್ತದೆ.
ಅಂಚೆ ಕಚೇರಿಯು ಇತರ ಸಂಸ್ಥೆಗಳಂತೆ ಹಲವಾರು ಯೋಜನೆಗಳನ್ನು ಹೊಂದಿದೆ. ಅಂಚೆ ಕಚೇರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು. ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುವ ಬಡ್ಡಿಯ (intrest) ಪ್ರಮಾಣವು ಜನರು ಅವುಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತದೆ. ಹಾಗೇ ಇದರಲ್ಲಿ ನಿಮ್ಮ ಹೂಡಿಕೆಯೂ ಸುರಕ್ಷಿತವಾಗಿರುತ್ತದೆ. ಈ ಗೃಹಿಣಿಯರಿಗೆ ಅದೃಷ್ಟದ ಯೋಜನೆ ಇಲ್ಲಿದೆ. ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಲಕ್ಷ ಗಳಿಸಿ!.
ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರ ಹೆಣ್ಣು ಮಕ್ಕಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅವುಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಕೂಡ ಒಂದಾಗಿದೆ. ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸ, ಮದುವೆ ಖರ್ಚಿಗೆ ಇದು ಅತ್ಯುತ್ತಮ ಹಣ ಉಳಿತಾಯ (girl child saving Scheme) ಮಾಡಲು ಪ್ರೇರೇಪಿಸುತ್ತದೆ. ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆದಾರರು ರಾಷ್ಟ್ರೀಯ ಉಳಿತಾಯ ಯೋಜನೆಯ ಆಕರ್ಷಕ ಬಡ್ಡಿ ದರ 7.7% ಲಾಭವನ್ನು ಪಡೆಯಬಹುದು. ಈ ಯೋಜನೆಯು ಕನಿಷ್ಠ ರೂ 100 ಠೇವಣಿಗಳನ್ನು ಮತ್ತು ಗರಿಷ್ಠ ರೂ 1.5 ಲಕ್ಷ ಹೂಡಿಕೆಗಳನ್ನು ಅನುಮತಿಸುತ್ತದೆ.
Senior Citizen Savings Scheme (SCSS): SCSS ಹಿರಿಯ ನಾಗರಿಕರಿಗಾಗಿ ಸರ್ಕಾರ ಖಾತರಿಪಡಿಸಿರುವ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಡಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಪಡೆಯಬಹುದಾಗಿದೆ.
ಈ ಯೋಜನೆಯಡಿ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಿ 5 ವರ್ಷಗಳ ವರೆಗೆ ಪಿಂಚಣಿ ಪಡೆಯಲು ಅವಕಾಶವಿದೆ.
ಬಡ್ಡಿಯ ಮೊತ್ತ ಪಿಂಚಣಿಯಾಗಿ ಸಿಗಲಿದ್ದು, ಅವಧಿ ಮುಗಿದ ಬಳಿಕ ಹೂಡಿಕೆ ಮಾಡಿದ ಮೊತ್ತ ವಾಪಸ್ ಸಿಗಲಿದೆ. ಪೋಸ್ಟ್ ಆಫೀಸ್ 7.5 ಪ್ರತಿಶತ ಬಡ್ಡಿದರದೊಂದಿಗೆ 5 ವರ್ಷಗಳ ಸಮಯದ ಠೇವಣಿ ನೀಡುತ್ತದೆ. 5-ವರ್ಷದ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆ (RD): ವೈಯಕ್ತಿಕ ಮತ್ತು ಜಂಟಿ ಖಾತೆಗಳಿಗೆ ಪ್ರಸ್ತುತ 5-ವರ್ಷದ ಪ್ರೋಗ್ರಾಂ ಬಡ್ಡಿ ದರವು ವಾರ್ಷಿಕವಾಗಿ 6.20% ಆಗಿದೆ.
Kisan Vikas Patra (KVP): ಈ ಯೋಜನೆಯು ಹೂಡಿಕೆದಾರರ ಹಣವನ್ನು 10 ವರ್ಷ ಮತ್ತು ಮೂರು ತಿಂಗಳಲ್ಲಿ ವಾರ್ಷಿಕ ಶೇಕಡ 7.5ರಷ್ಟು ಬಡ್ಡಿದರದೊಂದಿಗೆ ದ್ವಿಗುಣಗೊಳಿಸುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಕನಿಷ್ಠ ಹೂಡಿಕೆಯು 10 ಸಾವಿರ ರೂಪಾಯಿ ಆಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ (NSC): ಅಂಚೆ ಕಚೇರಿಯ (post office) ಪ್ರಮುಖ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (national savings certificate) ಅಥವಾ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಒಂದಾಗಿದ್ದು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ. ನಿಮ್ಮ ಮಗಳ ಮದುವೆ (marriage) ಮತ್ತು ಅವಳ ಭವಿಷ್ಯವನ್ನು (future) ಭದ್ರಪಡಿಸಲು ಬಯಸಿದರೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಪೋಸ್ಟ್ ಆಫೀಸ್ ಟೈಮ್ ಠೇವಣಿ: ಈ ಯೋಜನೆಯ (Post Office Time Deposit Scheme) ಮೂಲಕ, ಹೂಡಿಕೆದಾರರಿಗೆ ವಿವಿಧ ವರ್ಷಗಳ ಪ್ರಕಾರ ವಿಭಿನ್ನ ಬಡ್ಡಿದರಗಳನ್ನು ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಟೈಮ್ ಠೇವಣಿ ಖಾತೆಯಲ್ಲಿ ಹಣವನ್ನು 1 ವರ್ಷ, 2 ವರ್ಷ, ಮೂರು ವರ್ಷ ಮತ್ತು ಐದು ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಈ ಖಾತೆಯಲ್ಲಿ ಹಣ ಹೂಡಲು ಯಾವುದೇ ಗರಿಷ್ಠ ಮಿತಿ ಇಲ್ಲ. ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದರೆ, 1 ವರ್ಷಕ್ಕೆ 5.5 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತದೆ. 2 ವರ್ಷಗಳವರೆಗೆ 5.7 ಶೇಕಡಾ ಬಡ್ಡಿ, 3 ವರ್ಷಗಳವರೆಗೆ ಶೇಕಡಾ 5.8 ಬಡ್ಡಿ, ಐದು ವರ್ಷಗಳವರೆಗೆ 6.7 ಶೇಕಡಾ ಬಡ್ಡಿಯನ್ನು ನೀಡಲಾಗುತ್ತದೆ. ಗಮನಾರ್ಹವಾಗಿ, ಪೋಸ್ಟ್ ಆಫೀಸ್ ಗಮನಾರ್ಹವಾದ 7.5 ಪ್ರತಿಶತ ಬಡ್ಡಿದರದೊಂದಿಗೆ 5 ವರ್ಷಗಳ ಸಮಯದ ಠೇವಣಿ ನೀಡುತ್ತದೆ.