Woman rejected for fair skin: ನೀವು ಬೆಳ್ಳಗಿದ್ದೀರಾ…ಎಂದು ಹೇಳಿ ಕೆಲಸ ಕೊಡದೆ ವಾಪಾಸ್ ಕಳಿಸಿದ ಕಂಪನಿ!!!
Woman rejected for fair skin young woman was rejected from a job because she was white
Woman rejected for fair skin: ಕಂಪನಿಯು ಕೆಲವೊಂದು ಕಾರಣಗಳಿಗೆ ಅಭ್ಯರ್ಥಿಗಳನ್ನು ರಿಜೆಕ್ಟ್ ಮಾಡುತ್ತಾರೆ. ಅಭ್ಯರ್ಥಿಗಳ ಮಾತಿನ ಕೌಶಲ್ಯ ಅಥವಾ ಅವರ ವಿದ್ಯಾಭ್ಯಾಸ ಅಥವಾ ಅವರ ಜ್ಞಾನ ಈ ಎಲ್ಲಾ ಅಂಶಗಳನ್ನು ನೋಡಿ ಅಭ್ಯರ್ಥಿಯನ್ನು ನೇಮಕಾತಿ ಮಾಡುತ್ತಾರೆ. ಆದರೆ ಇಲ್ಲೊಂದೆಡೆ ವಿಚಿತ್ರ ಪ್ರಕರಣ ಒಂದು ವರದಿಯಾಗಿದ್ದು, ಕಂಪನಿಯು ಯುವತಿಯೊಬ್ಬಳು ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ರಿಜೆಕ್ಟ್( Woman rejected for fair skin) ಮಾಡಿದ ಘಟನೆ ನಡೆದಿದೆ. ಇದೀಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ (Social media) ಭಾರಿ ವೈರಲ್ ಆಗಿದೆ.
ಬೆಂಗಳೂರು ಮೂಲದ ಪ್ರತೀಕ್ಷಾ ಜಿಚ್ಕರ್ ಎಂಬ ಯುವತಿ ತಮ್ಮ ಮೂರು ಸುತ್ತಿನ ಸಂದರ್ಶನಗಳು ಮತ್ತು ಒಂದು ಅಸೈನ್‌ಮೆಂಟ್ ನಂತರ, ತಮ್ಮ ಸ್ಕಿನ್ ಟೋನ್(skin tone) ತುಂಬಾ ಫೇರ್ ಆಗಿರುವುದರಿಂದ ತನ್ನ ಅರ್ಜಿಯನ್ನು ತಿರಸ್ಕರಿಸಿದ ಸಂಸ್ಥೆಯಿಂದ ತಾನು ಸ್ವೀಕರಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವಿಟ್ಟರ್(Twitter) ನಲ್ಲಿ ಹಂಚಿಕೊಂಡಿದ್ದಾರೆ.
ಪ್ರತೀಕ್ಷಾ ಜಿಚ್ಕರ್ ಅವರು ಬೆಂಗಳೂರಿನ ನಿವಾಸಿ ಎಂದು ಅವರ ಲಿಂಕ್ಡ್‌ಇನ್ ಪ್ರೊಫೈಲ್ ಹೇಳುತ್ತದೆ. ನಿನ್ನೆ ಅವರು ತಮ್ಮನ್ನು ಕೆಲಸದಿಂದ ರಿಜೆಕ್ಟ್ ಮಾಡಿದ್ದರ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ನನ್ನ ಚರ್ಮದ ಕಾಂತಿ ಬೆಳ್ಳಗಿರುವುದರಿಂದ ತಂಡಕ್ಕೆ ಸ್ವಲ್ಪ ಹಿಡಿಸಲಿಲ್ಲ, ಹಾಗಾಗಿ ಅಂತಿಮ ಸುತ್ತಿನ ಸಂದರ್ಶನದಲ್ಲಿ ನನ್ನನ್ನು ತಿರಸ್ಕರಿಸಲಾಯಿತು. ಅವರು ಅಗತ್ಯವಿರುವ ಎಲ್ಲಾ ಅರ್ಹತೆಗಳು ಮತ್ತು ಕೌಶಲ್ಯಗಳನ್ನು ಪೂರೈಸಿದ್ದರೂ ಸಹ ತನ್ನ ಉದ್ಯೋಗದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಪ್ರತಿಕ್ಷ ಹಂಚಿಕೊಂಡಿರುವ ಇಮೇಲ್‌ನ ಸ್ಕ್ರೀನ್‌ಶಾಟ್ (Screen shot) ನಲ್ಲಿ, ಹಾಯ್ ಪ್ರತೀಕ್ಷಾ, ನಮ್ಮೊಂದಿಗೆ ಸಂದರ್ಶನ ಮಾಡಿದ್ದಕ್ಕಾಗಿ ಮತ್ತು ಸಂದರ್ಶನದ ಸಂದರ್ಭದಲ್ಲಿ ತಾಳ್ಮೆಯಿಂದಿದ್ದಕ್ಕಾಗಿ ಧನ್ಯವಾದಗಳು. ದುರದೃಷ್ಟವಶಾತ್, ಈ ಉದ್ಯೋಗಕ್ಕಾಗಿ ನಾವು ನಿಮನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ. ನಿಮ್ಮ ಪ್ರೊಫೈಲ್ ಸಮಂಜಸವಾಗಿದೆ. ಎಲ್ಲಾ ಕೌಶಲ್ಯಗಳು ಮತ್ತು ಅರ್ಹತೆಗಳು ನಾವು ಹುಡುಕುತ್ತಿರುವ ವ್ಯಕ್ತಿಯ ಅರ್ಹತೆ ಇದರಲ್ಲಿದೆ.
ಆದರೆ ನಾವು ಒಂದು ಅಂತರ್ಗತ ಸಂಸ್ಥೆಯಾಗಿದ್ದೇವೆ ಮತ್ತು ಎಲ್ಲರಿಗೂ ಸಮಾನ ಅವಕಾಶವನ್ನು ನೀಡಲು ಮುಂದಾಗುತ್ತೇವೆ. ನಿಮ್ಮ ತ್ವಚೆಯು ಪ್ರಸ್ತುತ ಇರುವ ತಂಡದವರ ಜೊತೆಗಿಂತಲೂ ಸುಂದರವಾಗಿದೆ ಹಾಗಾಗಿ ನಿಮ್ಮನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿರುವುದಾಗಿ ಬರೆಯಲಾಗಿದೆ. ಕಂಪನಿಯ ಹೆಸರನ್ನು ಮಸುಕುಗೊಳಿಸಿ ನಂತರ ಈ ಪೋಸ್ಟನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಈಕೆಯ ಮಾತು ಮತ್ತು ಸ್ಕ್ರೀನ್ಶಾಟ್ ನ ಬಗ್ಗೆ ಅನುಮಾನ ಹುಟ್ಟು ಹಾಕಿದೆ. ಯಾವುದೇ ಕಂಪನಿ ಮತ್ತು ಯಾವುದೇ ಎಚ್‌ಆರ್ ಮ್ಯಾನೇಜರ್ ಈ ರೀತಿ ರಿಜೆಕ್ಟ್ ಇ-ಮೇಲ್ ಅನ್ನು ಕಳಿಸುವುದಿಲ್ಲ ಎಂದು ಹಲವಾರು ನೆಟ್ಟಿಗರು ಹೇಳಿಕೊಂಡಿದ್ದಾರೆ. ಇದು ಕೇವಲ ಪ್ರಚಾರದ ಸ್ಟಂಟ್ ಆಗಿದ್ದು, ಇದು ನಿಜವಲ್ಲ ಎಂದು ಕಾಮೆಂಟರ್ ಒಬ್ಬರು ಹೇಳಿದ್ದಾರೆ.
ಇದನ್ನು ಓದಿ: Bengaluru: ಪ್ರಿಯಕರನ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೂಪದರ್ಶಿ ,ಪ್ರಿಯಕರನ ಬಂಧನ