Cooking oil price: ಗ್ರಾಹಕರಿಗೆ ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ! ಅಡುಗೆ ಎಣ್ಣೆ ಬೆಲೆ ಇಳಿಕೆ!!!!

Latest news oil price Cooking oil price reduced

Cooking oil price: ಕಾಂಗ್ರೆಸ್ ಪಂಚಗ್ಯಾರೆಂಟಿಗಳ ಯೋಜನೆಯ ಲಾಭದ ಖುಷಿಯಲ್ಲಿದ್ದ ಜನರು, ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಇದೀಗ ದೇಶದ ಜನರಿಗೆ ಕೇಂದ್ರ ಸರ್ಕಾರ, ಗುಡ್ ನ್ಯೂಸ್ ಕೊಟ್ಟಿದೆ. ಶೀಘ್ರವೇ ಅಡುಗೆ ಎಣ್ಣೆ ಬೆಲೆ (Cooking oil price) ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರದಿಂದ ಸುದ್ದಿ ಬಂದಿದೆ. ಹೌದು, ಎಲ್‌ಪಿಜಿ ಅಡುಗೆ ಅನಿಲದ (LPG Gas) ಬೆಲೆ ಏರಿಕೆ ಮಾಡಿ ಶಾಕ್ (Shock) ಕೊಟ್ಟಿದ್ದ ಕೇಂದ್ರ ಸರ್ಕಾರ (Central Government), ಇದೀಗ ಅಡುಗೆ ಎಣ್ಣೆಯ ಬೆಲೆ ಕಡಿಮೆ ಮಾಡಿ ಗುಡ್ ನ್ಯೂಸ್ ಕೊಟ್ಟಿದೆ.

ಕಳೆದ ಒಂದು ವರ್ಷದಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಪಾಮೊಲಿನ್ ತೈಲ ಬೆಲೆಗಳು ಗಣನೀಯವಾಗಿ ಇಳಿಕೆ ಕಂಡಿದೆ ಎಂದು ಸರ್ಕಾರ ಹೇಳಿದೆ. ಇದರ ಅಡಿಯಲ್ಲಿ, ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯು ಶೇಕಡಾ 29 ರಷ್ಟು, ಸಂಸ್ಕರಿಸಿದ ಸೋಯಾಬೀನ್ ಎಣ್ಣೆಯು ಶೇಕಡಾ 19 ರಷ್ಟು ಮತ್ತು ಪಾಮೋಲಿನ್ ಎಣ್ಣೆಯು ಶೇಕಡಾ 25 ರಷ್ಟು ಅಗ್ಗವಾಗಿದೆ.

ಈ ಬಗ್ಗೆ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ(Sadhvi Niranjan jyoti) ಲೋಕಸಭೆಯಲ್ಲಿ ಮಾತನಾಡಿದ್ದು, ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಜಾಗತಿಕ ಬೆಲೆಯಲ್ಲಿ ನಿರಂತರ ಕುಸಿತದಿಂದಾಗಿ ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಸರಕಾರದ ಪರವಾಗಿ ಮಾತನಾಡಿದ್ದಾರೆ.

ಕೇಂದ್ರ ಸರ್ಕಾರವು(central government) ಖಾದ್ಯ ತೈಲದ ದೇಶೀಯ ಬೆಲೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚಿಲ್ಲರೆ ಬೆಲೆಯಲ್ಲಿನ ಉಳಿತಾಯದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಇದರ ಹೊರತಾಗಿ, ಅಂತರರಾಷ್ಟ್ರೀಯ ಬೆಲೆ ಕಡಿತದೊಂದಿಗೆ ದೇಶೀಯ ಬೆಲೆಗಳನ್ನು ನಿಗದಿಪಡಿಸಲು ಸರ್ಕಾರವು ಉದ್ಯಮದ ಪ್ರಮುಖರು ಮತ್ತು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ, ದೇಶೀಯ ಬೆಲೆಗಳನ್ನು ಕಡಿಮೆ ಮಾಡಲು ಸರ್ಕಾರವು ಇವುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.