National Co-operative Bank: ಏಕಾಏಕಿ ಈ ಬ್ಯಾಂಕಿಗೆ ನಿರ್ಬಂಧ ಹೇರಿದ RBI !! ಠೇವಣಿದಾರರಿಗೆ ಶುರುವಾದ ಆತಂಕ – ಹಣ ಪಡೆಯಲು ಮುಗಿಬಿದ್ದ ಜನ

Latest news RBI has imposed restrictions on National Co-operative Bank Ltd

National Co-operative Bank: ಬೆಂಗಳೂರು(Bangalore)ಮೂಲದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್(National Co-operative Bank) ಲಿಮಿಟೆಡ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 24 ರಂದು ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ಠೇವಣಿದಾರರಿಗೆ ಆತಂಕ ಮನೆಮಾಡಿದೆ.

ಹೌದು, ಜುಲೈ 24ರಂದು ಬೆಂಗಳೂರು ಮೂಲದ ನ್ಯಾಷನಲ್‌ ಕೋ-ಆಪಪೇಟಿವ್‌ ಬ್ಯಾಂಕ್‌ ಲಿಮಿಟೆಡ್‌ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು(RBI) ವಹಿವಾಟು ನಿರ್ಬಂಧಗಳನ್ನು ವಿಧಿಸಿದೆ. ಠೇವಣಿದಾರರು ಗರಿಷ್ಠ 50 ಸಾವಿರ ರೂಪಾಯಿವರೆಗೆ ಮಾತ್ರ ವಿತ್‌ಡ್ರಾ ಮಾಡಿಕೊಳ್ಳುವ ಮಿತಿಯನ್ನು ಆರ್‌ಬಿಐ ವಿಧಿಸಿದೆ ಮನಿಕಂಟ್ರೋಲ್‌ ವರದಿ ಮಾಡಿದೆ. ಬ್ಯಾಂಕಿನ ದುರ್ಬಲ ಆರ್ಥಿಕ ಪರಿಸ್ಥಿತಿಯು ಈ ಕ್ರಮಕ್ಕೆ ಕಾರಣವಾಗಿದೆ ಎಂದು ಆರ್‌ಬಿಐ ಹೇಳಿದೆ. ಇದು ಸುಮಾರು 13 ಶಾಖೆಗಳಲ್ಲಿ ಹಣವಿಟ್ಟಿರುವ ಠೇವಣಿದಾರರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೆ ಈ ನಿರ್ಬಂಧಗಳೊಂದಿಗೆ ತನ್ನ ವ್ಯವಹಾರವನ್ನು ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಕೈಗೊಳ್ಳಲಿದೆ ಎಂದು ಆರ್‌ಬಿಐ ಹೇಳಿದೆ. ಆದರೆ, ವ್ಯಾಪಾರ, ವಹಿವಾಟು ನಿರ್ಬಂಧ ಮಾತ್ರ ಹೇರಲಾಗಿದ್ದು, ಬ್ಯಾಂಕಿಂಗ್‌ ಪರವಾನಗಿಯನ್ನು ರದ್ದುಗೊಳಿಸುವುದಿಲ್ಲ ಎಂದು ಆರ್‌ಬಿಐ ಉಲ್ಲೇಖಿಸಿದೆ.

ಏನೆಲ್ಲ ನಿರ್ಬಂಧ?
• ಠೇವಣಿದಾರರು ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಿಂದ 50 ಸಾವಿರ ರೂ.ಗಿಂತ ಹೆಚ್ಚು ಹಣ ವಿತ್‌ಡ್ರಾ ಮಾಡುವಂತೆ ಇಲ್ಲ.
• ಪೂರ್ವಾನುಮತಿಯಿಲ್ಲದೆ ಹೊಸ ಸಾಲಗಳನ್ನು ಬ್ಯಾಂಕ್‌ ಯಾರಿಗೂ ನೀಡಬಾರದು.
• ಹೊಸ ಠೇವಣಿಗಳನ್ನು ಸ್ವೀಕರಿಸಲು ಕೂಡ ಬ್ಯಾಂಕ್‌ಗೆ ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
• ನ್ಯಾಷನಲ್‌ ಕೋ-ಆಪರೇಟಿವ್‌ ಬ್ಯಾಂಕ್‌ನ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂದು ಆರ್‌ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಶಾಖೆಗಳಿವೆ?
ಬೆಂಗಳೂರು ಮತ್ತು ಮೈಸೂರಿನಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನ 13 ಶಾಖೆಗಳಿವೆ. ಬೆಂಗಳೂರಿನ ಗಾಂಧಿ ಬಜಾರ್, ಜಯನಗರ 5ನೇ ಬ್ಲಾಕ್, ಬನಶಂಕರಿ 2ನೇ ಹಂತ, ಕೋರಮಂಗಲ, ಸದಾಶಿವನಗರ, ಅಗ್ರಹಾರ ದಾಸರಹಳ್ಳಿ, ಬನಶಂಕರಿ 3ನೇ ಹಂತ (ಶ್ರೀ ವಿದ್ಯಾ ನಗರ), ಇಂದಿರಾನಗರ, ಯಶವಂತಪುರ, ರಾಜರಾಜೇಶ್ವರಿನಗರ, ಬಾಣಸವಾಡಿ ಪ್ರದೇಶಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್‌ ಬ್ಯಾಂಕ್ ಶಾಖೆ ಹೊಂದಿದೆ. ಮೈಸೂರಿನ ಕುವೆಂಪು ನಗರದಲ್ಲಿ ಬ್ಯಾಂಕ್ ಶಾಖೆ ಇದೆ. ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ನಲ್ಲಿ ಕರ್ನಾಟಕದ ಸಾಕಷ್ಟು ಜನರು ವಹಿವಾಟು ನಡೆಸುತ್ತಿದ್ದಾರೆ. ಇದೀಗ ರಿಸರ್ವ್ ಬ್ಯಾಂಕ್ ವಿಧಿಸಿರುವ ನಿರ್ಬಂಧದಿಂದ ಇವರಲ್ಲಿ ಆತಂಕ ಮೂಡಿದೆ.

 

ಅಂದಹಾಗೆ ಮೇ ತಿಂಗಳಲ್ಲಿ, ಆರ್‌ಬಿಐ ಕೆಲವು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ಗೆ ವಿತ್ತೀಯ ದಂಡವನ್ನು ವಿಧಿಸಿತ್ತು. ಲಭ್ಯವಿರುವ ಕೊನೆಯ ವಾರ್ಷಿಕ ವರದಿಯ ಪ್ರಕಾರ, ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ( ಮಾರ್ಚ್ 31, 2021 ರಂತೆ ) ಒಟ್ಟು ರೂ 1,679 ಕೋಟಿ ಠೇವಣಿ ಮತ್ತು ರೂ 1,128 ಕೋಟಿ ಸಾಲಗಳನ್ನು ಹೊಂದಿದೆ. ಆ ದಿನಾಂಕದ ನಂತರ ಡೇಟಾ ಲಭ್ಯವಿಲ್ಲ. ಬೆಂಗಳೂರಿ ಹಾಗೂ ಮೈಸೂರಿನ ವಿವಿಧ ಭಾಗಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಸುಮಾರು 13 ಶಾಖೆಗಳನ್ನು ಹೊಂದಿದೆ.

 

ಇದನ್ನು ಓದಿ: Rajasthan Anju Case: ಪಾಕ್ ಗೆಳೆಯನನ್ನು ಹುಡುಕಿ ಹೋಗಿದ್ದ ವಿವಾಹಿತೆ, ಅಲ್ಲಿ ಯಾರ ಜತೆ ಮಲಗಿದ್ದಳು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

Leave A Reply

Your email address will not be published.