Mukesh Ambani Car: ಮುಕೇಶ್ ಅಂಬಾನಿಯ ಇದು ಕಾರಾ, ಉಕ್ಕಿನ ಕೋಟೆಯಾ? ಸೇನೆ ಕೂಡ ಮುಟ್ಟಲಾಗದ ಕಾರು !

Latest news intresting news Do you know the car of Mukesh Ambani

Mukesh Ambani Car: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಮುಖೇಶ್ ಅಂಬಾನಿ (Mukesh Ambani) ಅವರ ಆಂಟಿಲಿಯಾ ಮನೆ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಎಲ್ಲಾ ರೀತಿಯಲ್ಲೂ ದುಬಾರಿ ವಸ್ತುಗಳನ್ನೇ ಹೊಂದಿರುವ ಇವರ ಬಳಿ ಇರುವ ಕಾರುಗಳ (Mukesh Ambani Car) ಬಗ್ಗೆ ನಿಮಗೆ ಗೊತ್ತಾ? ಆದರೆ, ಈ ಕಾರಿನಲ್ಲಿ ಮಾತ್ರ ಪ್ರಧಾನಿ ಕಾರಿನಷ್ಟೆ ಭದ್ರತೆ ಇದೆ. ಸೇನೆ ಕೂಡ ಮುಟ್ಟಲಾಗದ ಕಾರು ಇದು. ಯಾವುದಾ ಕಾರು ?!

ಮುಕೇಶ್ ಅಂಬಾನಿ ಮತ್ತು ಪತ್ನಿ ಮಕ್ಕಳು ವಿಪರೀತ ಕಾರ್ ಕ್ರೇಜ್ ಉಳ್ಳವರು. ಅವರ ಬಳಿ ಹತ್ತಾರು ಐಷಾರಾಮಿ ಕಾರುಗಳಿವೆ. ವಿವಿಧ ದುಬಾರಿಗಳು ಕಾರುಗಳು ಅವರು ಬಳಿ ಇದೆ. ಮುಖೇಶ್‌ ಅಂಬಾನಿರೋಲ್ಸ್‌ ರಾಯ್ಸ್‌, ಬೆಂಟ್ಲಿ, ಲ್ಯಾಂಡ್ ರೋವರ್, ಲ್ಯಾಂಬೋರ್ಘಿನಿ ಮತ್ತು ಇತರ ಹಲವು ಕಾರು
ಗಳನ್ನು ಒಳಗೊಂಡಿರುವ ಅತಿ ದುಬಾರಿ ಮತ್ತು ಅಪರೂಪದ ಕಾರುಗಳ ಕಲೆಕ್ಷನ್ ಹೊಂದಿದ್ದಾರೆ. ಮುಖೇಶ್ ಅಂಬಾನಿ ಭಾರತದಲ್ಲಿನ ಅತ್ಯಂತ ದುಬಾರಿ ಎಸ್‌ಯುವಿಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಲ್ಲಿನಾನ್‌ನ ಮಾಲೀಕರೂ ಆಗಿದ್ದಾರೆ.

ಮುಖೇಶ್ ಅಂಬಾನಿ ದೇಶದ ಅತಿದೊಡ್ಡ ಉದ್ಯಮಿಯಾಗಿರುವ ಕಾರಣ ಬುಲೆಟ್ ಗ್ರೂಫ್ ವಾಹನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದೀಗ ಅಂಬಾನಿ ಮುಂಬೈನಲ್ಲಿ ಬುಲ್ಲೆಟ್ ಗ್ರೂಫ್ Mercedes-Benz S680 ಗಾರ್ಡ್ ಸೆಡಾನ್‌ಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ವಿಶ್ವದ ಅತ್ಯಂತ ದುಬಾರಿ ಕಾರು ಮಾದರಿಗಳಲ್ಲಿ ಒಂದಾದ Mercedes-Benz S680 Guard ಸೆಡಾನ್ ಕಾರನ್ನು ಅವರು ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಈ ಕಾರಿನ ಬೆಲೆ ಬರೋಬ್ಬರಿ 10 ಕೋಟಿ ರೂ.ಗೂ ಹೆಚ್ಚಿದೆ ಎಂದು ಹೇಳಲಾಗಿದೆ.

ಅಂಬಾನಿಯವರ ಈ ಹೊಸ ಬೆಂಝ್ ಸಾಮಾನ್ಯ Mercedes- Benz S680 ಗಿಂತ ಹೆಚ್ಚು ತೂಕವಿದೆ. ಇದು 4 ಟನ್‌ಗಳಷ್ಟು ತೂಕವನ್ನು ಹೊಂದಿದೆ. ಇದರ ದೇಹದ ಫಲಕಗಳನ್ನು ಹೆಚ್ಚು ಗಟ್ಟಿಮುಟ್ಟಾಗಿ ಮತ್ತು ಬಲವಾಗಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ಎಸ್ ಕ್ಲಾಸ್ ನೀಡುವ ಎಲ್ಲಾ ಐಷಾರಾಮಿ ವೈಶಿಷ್ಟ್ಯಗಳನ್ನು ಕಾರು ನೀಡುತ್ತದೆ. $580 ಗಾರ್ಡ್ 6.0 ಲೀಟರ್ V12 ಎಂಜಿನ್‌ನೊಂದಿಗೆ ಸಜ್ಜುಗೊಂಡಿದ್ದು, 612 Ps ಪವರ್ ಮತ್ತು 830 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆದರೆ, ಈ ಕಾರು ಸಾಮಾನ್ಯ ಕಾರಲ್ಲ. ಇದರ ವಿಶೇಷತೆ ಏನು ಗೊತ್ತಿದೆಯಾ?! ಬುಲೆಟ್ ಗ್ರೂಫ್ ಕಾರಲ್ಲಿ ಮೆಷಿನ್ ಗನ್‌ಗಳಿಂದ ದಾಳಿ ಮಾಡಿದ್ರೂ ಕಾರೊಳಗಿದ್ದವರು ಸೇಫ್ ಆಗಿರುತ್ತಾರೆ. ಕೇವಲ ಗುಂಡೇಟು ಮಾತ್ರವಲ್ಲ ಈ ಕಾರಿಗೆ ಬೆಂಕಿ ಅವಘಡಗಳನ್ನು ತಪ್ಪಿಸುವ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇದು ಬಾಂಬ್ ದಾಳಿಗಳನ್ನು ಕೂಡ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಮುಕೇಶ್ ಅಂಬಾನಿ ಅವರು ಕಾರಿಗೆ ಹೆಚ್ಚುವರಿ ಭದ್ರತಾ ರಿಂಗ್ ಅನ್ನು ಕೂಡ ರಚಿಸಿಕೊಂಡಿದ್ದಾರೆ.

ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕಾರಣ ಹಾಗೂ ವ್ಯಾಪಾರ ಸ್ಪರ್ಧೆಯ ಕಾರಣದಿಂದಾಗಿ ಅವರಿಗೆ ಕೇಂದ್ರ ಸರ್ಕಾರದ ಝಡ್ ಪ್ಲಸ್ ರಕ್ಷಣೆ ನೀಡಲಾಗಿದೆ. ಇವರಿಗೆ ರಾಜ್ಯದ ಮುಖ್ಯಮಂತ್ರಿಗೆ ಒದಗಿಸುವ ಭದ್ರತೆಗೆ ಸಮಾನವಾದ ಭದ್ರತೆ ಒದಗಿಸಲಾಗುತ್ತದೆ ಎಂದೇ ಹೇಳಬಹುದು.

 

ಇದನ್ನು ಓದಿ: Samsung Galaxy 23 ultra pro: ಯಬ್ಬೋ.. ಸ್ಯಾಮ್‌ಸಂಗ್‌ ಗ್ಯಾಲಕ್ಸಿಯಾ ಈ ದೈತ್ಯ ಮೊಬೈಲ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್- ಗ್ರಾಹಕರಿಗಂತೂ ಭರ್ಜರಿ ಉಳಿತಾಯ !!

Leave A Reply

Your email address will not be published.