Twitter: ಪುರ್ರನೆ ಹಾರಿ ಹೋಯ್ತು ನೀಲಿ ಹಕ್ಕಿ ; ಟ್ವೀಟರ್’ಗೆ ಹೊಸ ಲೋಗೊ ಎಂಟ್ರಿ ! ಹೇಗಿದೆ ಲೋಗೊ?!

Latest news twitter updates How is the new logo for twitter

Twitter: ಜಗತ್ತಿನ ನಂ.1 ಶ್ರೀಮಂತ, ಟೆಸ್ಲಾ ಸಿಇಒ ಎಲಾನ್​ ಮಸ್ಕ್ ಕಳೆದ ವರ್ಷ ಅಕ್ಟೋಬರ್ ನಲ್ಲಿ ಶತಕೋಟಿ ಡಾಲರ್‌ಗೆ ಟ್ವಿಟರ್ ಅನ್ನು ಖರೀದಿಸಿದ್ದಾರೆ. ಆ ಬಳಿಕ ಟ್ವಿಟರ್ (Twitter) ವಿಚಾರವಾಗಿ ಹಲವು ಬದಲಾವಣೆಗಳು, ಚರ್ಚೆಗಳು ನಡೆಯುತ್ತಲೇ ಇತ್ತು. ಇದೀಗ ಮಸ್ಕ್ ಟ್ವಿಟರ್ ಲೋಗೋವನ್ನು ಬದಲಾಯಿಸಿದ್ದಾರೆ. ಟ್ವಿಟರ್ ನೀಲಿ ಹಕ್ಕಿ ಪುರ್ರನೆ ಹಾರಿ ಹೋಗಿದೆ. ಟ್ವೀಟರ್’ಗೆ ಹೊಸ ಲೋಗೋ ಎಂಟ್ರಿಯಾಗಿದೆ. ಹೇಗಿದೆ ಲೋಗೋ ಗೊತ್ತಾ?!

ಎಲಾನ್ ಮಸ್ಕ್ ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ‘ನೀಲಿ ಹಕ್ಕಿ’ಯನ್ನು ಬದಲಾಯಿಸಿ ‘X’ ಎಂಬ ಹೊಸ ಲೋಗೋವನ್ನು ಹಾಕಿದ್ದಾರೆ. ಟ್ವಿಟರ್ ಹೊಸ ಲೋಗೊದ ಕುರಿತು ಎಲಾನ್ ಮಸ್ಕ್ (Elon Musk) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಸ್ಕ್ ಟ್ವಿಟ್ ನಲ್ಲಿ ಈ ಲೋಗೊದ ಕಿರು ವಿಡಿಯೊ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಅವರ ಪ್ರೊಫೈಲ್ ಫೋಟೊ ಕೂಡ ‘X’ ಆಗಿದೆ. ಹಾಗಾಗಿ, ಎಲಾನ್ ಮಸ್ಕ್ ಅವರು ಅಧಿಕೃತವಾಗಿ X ಹೊಸ ಲೋಗೊ ಎಂದು ಘೋಷಿಸದಿದ್ದರೂ, ಇದೇ ಲೋಗೊ ಎಂದು ಹೇಳಲಾಗುತ್ತಿದೆ.

ಟ್ವಿಟರ್ ಸಂಸ್ಥೆಯು ಮಸ್ಕ್ ಹಿಡಿತಕ್ಕೆ ಬಂದ ನಂತರದಲ್ಲಿ ಹಲವಾರು ಬದಲಾವಣೆಗಳಿಗೆ ಮೈಕ್ರೋಬ್ಲಾಗಿಂಗ್ ತಾಣ ಸಾಕ್ಷಿಯಾಗಿದೆ. ಆರಂಭದಲ್ಲೇ ಮಸ್ಕ್ ಅವರು ತಮ್ಮ ಉದ್ಯಮದ ಹೆಸರನ್ನು “ಎಕ್ಸ್ ಕಾರ್ಪ್’ ಎಂದು ಬದಲಾಯಿಸಿಕೊಂಡಿದ್ದರು. ಏಪ್ರಿಲ್‌ನಲ್ಲಿ ಟ್ವಿಟರ್‌ನ ಹಕ್ಕಿಯ ಲೋಗೋ ಇರುವ ಸ್ಥಳವನ್ನು ನಾಯಿ (ಇನು ಡಾಗ್)ಯು ಆಕ್ರಮಿಸಿಕೊಂಡಿತ್ತು. ಅನಂತರದಲ್ಲಿ ಬ್ಲೂಟಿಕ್ ಚಂದಾದಾರಿಕೆ, ಪದಗಳ ಮಿತಿ, ಕಚೇರಿಯಲ್ಲಿನ ಬದಲಾವಣೆಗಳು ಭಾರೀ ವಿವಾದಕ್ಕೂ ಕಾರಣವಾಗಿತ್ತು.

ಇನ್ನು ಟ್ವಿಟರ್ ಭವಿಷ್ಯದ ದಿನಗಳಲ್ಲಿ ಸ್ವತಂತ್ರ ಕಂಪನಿಯಾಗಿ ಇರುವುದಿಲ್ಲ ಅದು ನೂತನವಾಗಿ ರಚನೆಯಾಗಲಿರುವ ಎಕ್ಸ್ ಕಾರ್ಪ್ (X Corp) ಕಂಪನಿಯಲ್ಲಿ ವಿಲೀನವಾಗಲಿದೆ. ಚೀನಾದ ವಿ ಚಾಟ್ (WeChat ಮಾದರಿಯಲ್ಲಿ ಸೂಪರ್ ಅಪ್ಲಿಕೇಶನ್ ತಯಾರಿಸುವ ಬಯಕೆಯೂ ಎಲಾನ್ ಮಸ್ಟ್ ಅವರಿಗೆ ಇದೆ. ಹಾಗಾಗಿ ಟ್ವಿಟರ್ ನೂತನ ಲೋಗೋ ಎಕ್ಸ್ ಆಗಿರಲಿದೆ ಎನ್ನಲಾಗುತ್ತಿದೆ. ಸದ್ಯ ಟ್ವಿಟರ್ ಹೊಸ ಲೋಗೊ ಅನಾವರಣಗೊಳಿಸುತ್ತಲೇ ಪರ-ವಿರೋಧ ವ್ಯಕ್ತವಾಗಿದೆ, ಚರ್ಚೆಯಾಗುತ್ತಿದೆ.

 

ಇದನ್ನು ಓದಿ: Karnataka government: ರಾಜ್ಯ ಸರ್ಕಾರಕ್ಕೆ ಮತ್ತೊಂದು ಬಿಗ್ ಶಾಕ್ – ಅನ್ನಭಾಗ್ಯದ ಅಕ್ಕಿಗೂ ಕೋಕ್ ?! 

Leave A Reply

Your email address will not be published.