Snakes as Dowry in Chattisgarh: ಇಲ್ಲಿ ವರದಕ್ಷಿಣೆಯಾಗಿ ಹಾವನ್ನು ಕೊಡ್ಲೇಬೇಕು ; ಇಲ್ಲಾಂದ್ರೆ ಮದುವೆನೇ ನಡೆಯಲ್ಲ ! ಏನಿದು ವಿಚಿತ್ರ ನಿಯಮ ?!

Latest news strange tradition Snakes as Dowry in Chattisgarh

Snakes as Dowry in Chattisgarh: ಭಾರತದಲ್ಲಿ ಮದುವೆಗಳನ್ನು ಅವರವರ ಸಂಪ್ರದಾಯಕ್ಕೆ ತಕ್ಕಂತೆ ಅದ್ದೂರಿಯಾಗಿ ನಡೆಸುತ್ತಾರೆ. ಮದುವೆ ಎಂದ ಮೇಲೆ ಸಾಕಷ್ಟು ಖರ್ಚು ವೆಚ್ಚಗಳಿರುತ್ತದೆ. ಮದುವೆಗಳಲ್ಲಿ, ವಧುವಿನ ತಂದೆ ವರದಕ್ಷಿಣೆ ರೂಪದಲ್ಲಿ ದುಬಾರಿ ಉಡುಗೊರೆಗಳನ್ನು ನೀಡುವುದು, ಬೆಲೆಬಾಳುವ ವಸ್ತುಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಹಣವನ್ನು ತಮ್ಮ ಹೆಣ್ಣುಮಕ್ಕಳ ಮದುವೆಯಲ್ಲಿ ವರದಕ್ಷಿಣೆಯಾಗಿ ನೀಡುವುದನ್ನು ನೀವು ನೋಡಿದ್ದೀರಿ. ಆದರೆ, ಎಂದಾದರೂ ನೀವು ಹಾವುಗಳನ್ನು ವರದಕ್ಷಿಣೆಯಾಗಿ ನೀಡುವುದನ್ನು ನೋಡಿದ್ದೀರಾ? ಇದೇನಪ್ಪಾ ಕೇಳಲು ವಿಚಿತ್ರವಾಗಿದೆಯಲ್ವಾ!? ಇಂತಹದ್ದೊಂದು ವಿಚಿತ್ರ ನಿಯಮ ಇರೋದು ಬೇರೆಲ್ಲೂ ಅಲ್ಲ ನಮ್ಮ ಭಾರತದಲ್ಲೇ!!.

ಹೌದು, ಛತ್ತೀಸ್‌ಗಢದ(Chattisgarh) ಕೊರ್ಬಾದಲ್ಲಿರುವ ಸನ್ವಾರ ಬುಡಕಟ್ಟು ಜನಾಂಗದವರು ತಮ್ಮ ವಿವಾಹಗಳಲ್ಲಿ (Marriage) ವಿಚಿತ್ರ ಮತ್ತು ವಿಶಿಷ್ಟವಾದ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇಲ್ಲಿನ ಜನರು ಹಾವುಗಳನ್ನು ವರದಕ್ಷಿಣೆಯಾಗಿ (Snakes as Dowry in Chattisgarh) ನೀಡುತ್ತಾರೆ. ವಧುವಿನ ಕಡೆಯವರು ಒಟ್ಟು ಒಂಬತ್ತು ವಿವಿಧ ಜಾತಿಯ ಹಾವುಗಳನ್ನು ವರನ ಮನೆಗೆ ನೀಡಬೇಕು, ಅವರೇನಾದರೂ ನೀಡಲು ವಿಫಲವಾದರೆ, ಮದುವೆ ಮುರಿಯುತ್ತದೆ. ಈ ಬುಡಕಟ್ಟು ಜನಾಂಗದಲ್ಲಿ ಹಾವನ್ನು ವರದಕ್ಷಿಣೆಯನ್ನಾಗಿ (Dowry) ನೀಡುವ ಪ್ರಾಚೀನ ಸಂಪ್ರದಾಯವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ವಾಸ್ತವವಾಗಿ ಸನ್ವರ ಬುಡಕಟ್ಟಿನ ಜನರು ವಿಷಕಾರಿ ಹಾವುಗಳನ್ನು ಹಿಡಿಯುವ ಕೆಲಸವನ್ನು ಮಾಡುತ್ತಾರೆ ಮತ್ತು ಇದು ಅವರ ಪೂರ್ವಜರು ಮಾಡುತ್ತಿದ್ದ ಕೆಲಸವಾಗಿದೆ. ಈ ಜನರು ವಿಷಪೂರಿತ ಹಾವುಗಳನ್ನು ತೋರಿಸಿ ಜನರಿಂದ ಹಣ ಕೇಳುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ

ಸ್ಥಳೀಯ ನಿವಾಸಿ ಭರತ್ ಲಾಲ್ ನೀಡಿರುವ ಮಾಹಿತಿ ಪ್ರಕಾರ, ಶತಮಾನಗಳಿಂದ ಸಮಾಜದಲ್ಲಿ ಈ ಸಂಪ್ರದಾಯ ಮುಂದುವರಿದಿದೆ.ಇಂದಿಗೂ ಮಗಳ ತಂದೆ ಅಳಿಯನಿಗೆ ವರದಕ್ಷಿಣೆಯಾಗಿ ಹಾವನ್ನು ಕೊಡುವ ವಾಡಿಕೆ ಇದೆ. ಈ ಬುಡಕಟ್ಟು ಸಮುದಾಯದ ಮಕ್ಕಳಿಗೂ ಹಾವು ಹಿಡಿಯುವುದು ಗೊತ್ತಿದೆ. ಮಕ್ಕಳು ಅವುಗಳನ್ನು ಹಿಡಿದು ಆಟವಾಡುತ್ತಾರೆ ಎಂದರು.

“ನಮ್ಮ ಪೂರ್ವಜರು ವರದಕ್ಷಿಣೆಗಾಗಿ 60 ಹಾವುಗಳನ್ನು ನೀಡುತ್ತಿದ್ದರು. ಅದು 14 ಕ್ಕೆ ಇಳಿದಿದೆ. ಈಗ ನಾವು ವರದಕ್ಷಿಣೆಯ ಭಾಗವಾಗಿ 21 ಹಾವುಗಳನ್ನು ನೀಡುತ್ತೇವೆ. ವರದಕ್ಷಿಣೆ ನೀಡದಿದ್ದರೆ ಸಮಾಜದಲ್ಲಿ ಯಾರೂ ಮದುವೆಯಾಗುವುದಿಲ್ಲ. ಆದ್ದರಿಂದ ನಾವು ಹಾವುಗಳನ್ನು ಹೇಗಾದರೂ ಹುಡುಕಬೇಕು. ವಧುವಿನ ಸಂಬಂಧಿಕರು ಹಾವುಗಳನ್ನು ಸಂಗ್ರಹಿಸಿ ನೀಡುತ್ತಾರೆ’ ಎಂದು ಸ್ಥಳೀಯ ಹಾವಾಡಿಗ ಕಟಂಗಿ ಹೇಳಿದರು.

ಈ ಪದ್ಧತಿಯನ್ನು ಸ್ಥಳೀಯ ಆಡಳಿತವು ಗೌರವಿಸುತ್ತದೆ. ಹಾಗೂ ಹಾವು ಹಿಡಿಯುವವರಿಗೆ ಜಾಗರೂಕರಾಗಿರಲು ಆಗಾಗ್ಗೆ ಸಲಹೆ ನೀಡುತ್ತದೆ. ಸದ್ಯ ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

 

ಇದನ್ನು ಓದಿ: Minority communities: ಅಲ್ಪಸಂಖ್ಯಾತರಿಗೆ ಹೊಡೀತು ಭರ್ಜರಿ ಲಾಟ್ರಿ- 1 ಲಕ್ಷ ರೂ. ಆರ್ಥಿಕ ನೆರವು ನೀಡಲು ಮುಂದಾದ ರಾಜ್ಯ ಸರ್ಕಾರ- ಈ ದಿನದಿಂದಲೇ ಜಾರಿ 

Leave A Reply

Your email address will not be published.