PM kisan Scheme: ರೈತರೇ.. ಪಿಎಂ ಕಿಸಾನ್ ದುಡ್ಡು ಬೇಕಂದ್ರೆ ಕೂಡಲೇ ಇದನ್ನು ಮಾಡಿ- ಇಲ್ಲಾಂದ್ರೆ ಕೈ ಸೇರಲ್ಲ 14 ನೇ ಕಂತು !!

Latest news politics PM kisan Scheme news update for 14th installment

PM kisan Scheme: ಕೇಂದ್ರ ಸರ್ಕಾರ ರೈತರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಅಂತೆಯೇ ಈ ಪ್ರಯುಕ್ತ ಮೋದಿ ಸರ್ಕಾರವು ವಿಶೇಷವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರಿಗೆ ಸಾಕಷ್ಟು ಲಾಭವಾಗುತ್ತಿದೆ ಎಂದು ಹೇಳಬಹುದು. ಸದ್ಯ ಇದೀಗ 14 ನೇ ಕಂತಿನ ಹಣವನ್ನ ಬಿಡುಗಡೆಗೊಳಿಸಲು ಸರ್ಕಾರ ಮುಂದಾಗಿದ್ದು, ರೈತರು ಇದನ್ನು ಪಡೆಯಲು ಈ ಕೂಡಲೇ ಇದೊಂದ ಕೆಲಸವನ್ನು ಮಾಡಬೇಕು.

ಹೌದು, ಭಾರತ ಸರ್ಕಾರವು ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆಯಡಿ 13 ಕಂತುಗಳ ಹಣವನ್ನು ಜಮಾ ಮಾಡಿದೆ. ಇದರಿಂದ ರೈತರ ಬ್ಯಾಂಕ್ ಖಾತೆಗೆ 26 ಸಾವಿರ ಜಮಾ ಮಾಡಲಾಗಿದೆ. ಈಗ ಮತ್ತೊಂದು ಕಂತಿನ ಹಣವೂ ಬಾಕಿ ಇದೆ. ಅಂದರೆ 14 ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.14ನೇ ಕಂತಿನ ಹಣ ಶೀಘ್ರವೇ ಜಮಾ ಆಗುವ ಸಾಧ್ಯತೆ ಇದೆ. ಆದರೆ ಇ-ಕೆವೈಸಿ ಮಾಡಿಸಿದ ರೈತರಿಗೆ ಕೇಂದ್ರ ಸರಕಾರ ಯೋಜನೆ (PM kisan Scheme)ಪಡೆಯಲು ಅರ್ಹರಾಗಿರುತ್ತಾರೆ.

ಸಾಮಾನ್ಯವಾಗಿ, ಪಿಎಂ ಕಿಸಾನ್ 14 ನೇ ಕಂತಿನ ಹಣವನ್ನು ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಆದರೆ ಇನ್ನೂ ಕೇಂದ್ರ ಸರ್ಕಾರ ಈ ಹಣ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ವರ್ಷ ಮೇ ಅಂತ್ಯದೊಳಗೆ ಹಣ ಜಮೆಯಾಗುತ್ತಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಹಣವನ್ನು ನೇರವಾಗಿ ಫಲಾನುಭವಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಆದರೀಗ 14ನೇ ಕಂತಿ ಹಣ ಕೈಸೇರಲು ಕಡ್ಡಾಯವಾಗಿ ರೈತರು ಆಧಾರ್ ಆಧಾರಿತ ಇ-ಕೆವೈಸಿ ಮಾಡಬೇಕಾಗಿದೆ. ಹೀಗಾಗಿ ರೈತರು ಹತ್ತಿರದ ಗ್ರಾಮ ಒನ್, ಸಿಎಸ್ಸಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹ ಇ ಕೆ ವೈ ಸಿ ಮಾಡಿಸಿ.

ರೈತರೇ ಇ-ಕೆವೈಸಿಯನ್ನು ನೀವೇ ಮಾಡಬಹುದು:
ಪಿಎಂ ಕಿಸಾನ್ ಸಮ್ಮಾನ್ ನಿಧಿ ಪಡೆಯಲು ರೈತರೇ ತಮ್ಮಲ್ಲಿರುವ ಮೊವೈಲ್‌ಗಳಲ್ಲಿ ಇ-ಕೆವೈಸಿ ನೋಂದಾಯಿಸಬಹುದು.
• ಮೊಬೈಲ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪಿಎಂ ಕಿಸಾನ್ ಇಕೆವೈಸಿ ಎಂದು ಟೈಪ್ ಮಾಡಿ.
• ಇದರ ತಳ ಭಾಗದಲ್ಲಿ ಕಾಣುವ ಟು ಓಟಿಪಿ ಬೇಸ್ಡ್ ಇ-ಕೆವೈಸಿ ಕ್ಲಿಕ್ ಮಾಡಿದರೆ ಪೇಜ್ ಓಪನ್ ಆಗುತ್ತದೆ.
• ಅಲ್ಲಿ ಕೇಳಿರುವ ಬಾಕ್ಸ್ನಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಎಂದು ತೋರಿಸುತ್ತೆ.
• ಅಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಿದರೆ ಆಗ ಆಧಾರ್ ಸಂಖ್ಯೆಗೆ ನೀಡಿರುವ ಮೊಬೈಲ್ ಸಂಖ್ಯೆ ಕೇಳುತ್ತದೆ.
• ಮೊಬೈಲ್ ಸಂಖ್ಯೆ ನಮೂದಿಸಿದ ಮೇಲೆ ಗೆಟ್ ಮೊಬೈಲ್ ಒಟಿಪಿ ಎಂದು ಕ್ಲಿಕ್ ಮಾಡಿದ ಮೇಲೆ ಮೊಬೈಲ್‌ಗೆ ನಾಲ್ಕು ಅಂಕೆಯ ಓಟಿಪಿ ಬರುತ್ತದೆ.
• ಅದನ್ನು ನಮೂದಿಸಿ ಸಬ್ಮಿಟ್ ಓಟಿಪಿ ಎಂದು ಕ್ಲಿಕ್ ಮಾಡಿದರೆ ಆರು ಸಂಖ್ಯೆಯ ಓಟಿಪಿ ಬರುತ್ತದೆ.
• ಅದನ್ನು ಅಲ್ಲಿರುವ ಬಾಕ್ಸ್ನಲ್ಲಿ ಟೈಪ್ ಮಾಡಿ ಸಬ್ಮಿಟ್ ಮಾಡಿದರೇ ಇ-ಕೆವೈಸಿ ಡನ್ ಸಕ್ಸ್ಸ್ ಫುಲ್ ಬರುತ್ತದೆ.

ಮತ್ತೊಂದು ವಿಧಾನವೂ ಇದೆ:
• Google Play Store ನಿಂದ PM KISAN GOI app aadhar face Rd app ಡೌನ್‌ಲೋಡ್ ಮಾಡಿಕೊಂಡು ನಂತರ login ಆಗಿ.
• ಆಧಾರ್ ಸಂಖ್ಯೆಯನ್ನು ನಮೂದಿಸಿವುದು
• ನಂತರ ಆಧಾರ್ ಸಂಖ್ಯೆಯೊAದಿಗೆ ನೊಂದಣಿಯಾಗಿರುವ ಮೊಬೈಲ್‌ಗೆ OTP ರವಾನೆಯಾಗುತ್ತದೆ.
• OTP ಯನ್ನು ದಾಖಲಿಸುವುದು
• Click here to complet e-KYC ಎಂಬ ಮಾಹಿತಿಯು ಗೋಚರಿಸುತ್ತದೆ.
• ಮತ್ತೇ OTP ದಾಖಲಿಸಿ I am agri for face authentication ಎಂದು ನಮೂದಿಸುವುದು ನಂತರ ರೈತರ/ಫಲಾನುಭವಿಯ ಮುಕದ ಛಾಯ ಚಿತ್ರವನ್ನು ಕ್ಲೀಕ್ ಮಾಡುವುದು
• ನಂತರ image successfully processed ಎಂಬ ಮಾಹಿತಿಯು ಗೋಚರಿಸುತ್ತದೆ.
• ನಂತರ e-KYC successful ಎಂಬ ಮಾಹಿತಿಯನ್ನು ಗೋಚರಿಸುತ್ತದೆ. ಹೀಗೆ face authentication ಮೂಲಕ e-KYC ಮಾಡಿಸಬಹುದು.

ಈ ವಿಷಯವನ್ನು ಅಗ್ರಿಕಲ್ಚರ್ ಇಂಡಿಯಾ ಟ್ವಿಟರ್ ವೇದಿಕೆಯಲ್ಲಿ ಬಹಿರಂಗಪಡಿಸಿದೆ. ಆದ್ದರಿಂದ ಪಿಎಂ ಕಿಸಾನ್ ರೈತರು ಕೂಡಲೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಉತ್ತಮ. ಪಿಎಂ ಕಿಸಾನ್ 14 ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು.

 

ಇದನ್ನು ಓದಿ: BJP MLA Munirathna: ಶಾಸಕ ಮುನಿರತ್ನ ಸ್ಟುಡಿಯೋ ಇರೋದು ಹನಿ ಟ್ರಾಪ್ ಮಾಡಲು: ಮುನಿ ಆಪ್ತನಿಂದಲೇ ಆರೋಪ !

Leave A Reply

Your email address will not be published.