Waqar Younis: ಭಾರತವನ್ನು ಹುಲಿಗಳಂತೆ ಬೇಟೆಯಾಡಿ – ಪಾಕಿಸ್ತಾನಿ ಕ್ರಿಕೆಟರ್ ವಕಾರ್ ಯೂನಿಸ್

Latest Cricket news Pakistan can beat India anywhere waqar younis claim on India versus Pak big rivalry sports

Waqar Younis: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ (ODI World Cup 2023) ಇನ್ನೇನು ಎರಡು ತಿಂಗಳು ಬಾಕಿ ಇದೆ. ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಕಾತುರದ ಹುಮ್ಮಸ್ಸು ಹೆಚ್ಚುತ್ತಿದೆ. ಇದೀಗ ಸದ್ಯ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ವಕಾರ್​ ಯೂನಿಸ್ ಅವರ ಪ್ರಕಾರ, ಓವಲ್‌ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾದರೆ, ಪಾಕಿಸ್ತಾನ ಆ ತಂಡವನ್ನು ಜಗತ್ತಿನ ಎಲ್ಲಿ ಬೇಕಾದರೂ ಸೋಲಿಸಬಹುದು. ಹುಲಿಯಾಗಿ ಆಡುತ್ತಾ ಎದುರಾಳಿಯನ್ನು ಬೇಟೆಯಾಡಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಪಾಕಿಸ್ತಾನ ಗೆಲ್ಲಲು ಉತ್ತಮ ಬೂಸ್ಟ್ ನೀಡಿದ್ದಾರೆ.

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಟೀಂ ಇಂಡಿಯಾ (Team India), 2021ರ ಟಿ20 ವಿಶ್ವಕಪ್‌ನಲ್ಲೂ ಸೋಲು ಅನುಭವಿಸಿತ್ತು. ಆದರೆ 2022ರ ಟಿ20 ವಿಶ್ವಕಪ್​ನಲ್ಲಿ (T20 World Cup 2022) ಭಾರತ ಅಮೋಘ ಗೆಲುವು ದಾಖಲಿಸಿ, ತಿರುಗೇಟು ನೀಡಿತ್ತು. ಇದೀಗ ಪಾಕಿಸ್ತಾನದ ಮಾಜಿ ನಾಯಕ ವಕಾರ್ ಯೂನಿಸ್ (Waqar Younis), 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಪಾಕಿಸ್ತಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಕದಿನ ವಿಶ್ವಕಪ್ ಗೆಲ್ಲುವ ಏಕೈಕ ಮಾರ್ಗವೆಂದರೆ ಚೆನ್ನಾಗಿ ಆಡುವುದು. ಪಾಕ್ ತಂಡ ಸಾಕಷ್ಟು ಸಮರ್ಥ ಆಟಗಾರರನ್ನು ಹೊಂದಿದೆ. ನಮ್ಮ ಪ್ರತಿಭೆಗೆ ತಕ್ಕಂತೆ ಆಡಿದರೆ, ಯಾರನ್ನಾದರೂ ಸೋಲಿಸಬಹುದು. ಈಗ ಪಾಕಿಸ್ತಾನ ಯಾವುದೇ ತಂಡವನ್ನು ಸೋಲಿಸಬಹುದು. ನಾವು ಎಲ್ಲಿ ಆಡುತ್ತಿದ್ದೇವೆ ಎಂಬುದು ಮುಖ್ಯವಲ್ಲ ಎಂದು ಹೇಳಿದ್ದಾರೆ.

ಓವಲ್‌ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾದರೆ, ಪಾಕಿಸ್ತಾನ ಆ ತಂಡವನ್ನು ಜಗತ್ತಿನ ಎಲ್ಲಿ ಬೇಕಾದರೂ ಸೋಲಿಸಬಹುದು. ಹುಲಿಯಾಗಿ ಆಡುತ್ತಾ ಎದುರಾಳಿಯನ್ನು ಬೇಟೆಯಾಡಿ. ಭಾರತವನ್ನು ಸೋಲಿಸಲು ಅದೊಂದೇ ದಾರಿ. ಆ ದಿನದ ಒತ್ತಡವನ್ನು ನೀವು ಹೇಗೆ ನಿಭಾಯಿಸುತ್ತೀರಿ ಎಂಬುದು ಮಾತ್ರ ಮುಖ್ಯ ಎಂದು ಪಾಕ್ ಆಟಗಾರರಿಗೆ ಸಲಹೆ ನೀಡಿದ್ದಾರೆ.

ಟೀಮ್​ ಇಂಡಿಯಾ ಮೇಲೆ ಮೇಲುಗೈ ಸಾಧಿಸಲು ಆ ಭಯ ಸಾಕು. ಅತಿಯಾದ ಉತ್ಸಾಹವು ಪಂದ್ಯದ ಫಲಿತಾಂಶ ಬದಲಾಯಿಸಬಹುದು. ಗೆಲ್ಲಲು ಏನು ಮಾಡಬೇಕೆಂದು ನಿಮಗೆ ಈಗಾಗಲೇ ಅರ್ಥವಾಗುತ್ತದೆ. ಅದರಂತೆ ಕಾರ್ಯ ಯೋಜನೆ ರೂಪಿಸಿ. ಗೇಮ್​ ಪ್ಲಾನ್​​ಗಳನ್ನು ಪಂದ್ಯಕ್ಕೆ ತಕ್ಕಂತೆ ಕಾರ್ಯಗತಗೊಳಿಸಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಪ್ರತಿಕ್ರಿಯಿಸಿದ್ದಾರೆ.

ಸದ್ಯಕ್ಕೆ ಅಕ್ಟೋಬರ್ 15ರಂದು ಅಹ್ಮದಾಬಾದ್​​ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ (India vs Pakistan) ಸಜ್ಜಾಗುತ್ತಿದ್ದೂ, ಈ ಪಂದ್ಯಕ್ಕೂ ಮುನ್ನ ಭಾರತ-ಪಾಕಿಸ್ತಾನ ಏಷ್ಯಾ ಕಪ್ 2023 ಟೂರ್ನಿಯಲ್ಲಿ (Asia Cup 2023) ಎರಡು ಬಾರಿ ಮುಖಾಮುಖಿಯಾಗಲಿವೆ.

ಏಷ್ಯಾಕಪ್ 2023 ಟೂರ್ನಿಯ ಅಂಗವಾಗಿ ಭಾರತ-ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ನಡೆಯಲಿದೆ. 4 ಸುತ್ತಿನ ಭಾಗವಾಗಿ ಉಭಯ ತಂಡಗಳು ಕೊಲಂಬೊದಲ್ಲಿ ಸೆಪ್ಟೆಂಬರ್ 10 ರಂದು ಎದುರಾಗುವ ಸಾಧ್ಯತೆ ಇದೆ. ಒಂದು ವೇಳೆ ಎರಡೂ ತಂಡಗಳು ಫೈನಲ್ ತಲುಪಿದರೆ, ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಸೋದರ ಸಂಬಂಧಿಗಳ ನಡುವೆ 3 ಪಂದ್ಯಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Chandigarh : ತನ್ನ ಠಾಣೆಯ ವಿರುದ್ಧವೇ ತಿರುಗಿಬಿದ್ದ ಪೇದೆ: ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ, ಹೈಡ್ರಾಮ !

Leave A Reply

Your email address will not be published.