Ration card update: ಬಿಪಿಎಲ್ ಕಾರ್ಡ್ ಬಗ್ಗೆ ಬೊಂಬಾಟ್ ಸುದ್ದಿ: ಹೊಸ ಪಡಿತರ ಚೀಟಿ ನೀಡಿಕೆ ಯಾವಾಗ ಗೊತ್ತಾ ?

Latest news Ration card update Discussion in the Cabinet meeting about issuing new BPL ration card

Ration card update: ಹೊಸ ಪಡಿತರ ಚೀಟಿ (Ration card update) ಪಡೆಯಲು ಕಾದಿರುವವರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಹೊಸ ಬಿಪಿಎಲ್ ಪಡಿತರ ಕಾರ್ಡ್ (BPL CARD) ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ರೇಷನ್ ಕಾರ್ಡ್​​ನಲ್ಲಿ (Ration Card ) ಹೆಸರು ಸೇರ್ಪಡೆ ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi Scheme) ಹಿನ್ನೆಲೆಯಲ್ಲಿ ರೇಷನ್ ಕಾರ್ಡ್​ನಲ್ಲಿ ಹೆಸರು ಸೇರ್ಪಡೆಗೆ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಯುಬಿ ಬಣಕಾರ್ (UB Banakar) ಮನವಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna byre Gowda) ಅವರು, ಇದೊಂದು ಗಂಭೀರ ಸಮಸ್ಯೆ, ನನ್ನ ಕ್ಷೇತ್ರದಲ್ಲೂ ಈ ಸಮಸ್ಯೆ ಇದೆ ಎಂದಿದ್ದಾರೆ.

ಕೇಂದ್ರ ಸರ್ಕಾರದ (Central Government) ನಿಯಮದಂತೆ ಶೇಕಡಾ 60 ರಷ್ಟು ರೇಷನ್ ಕಾರ್ಡ್ ಇರಬೇಕು. ಆದರೆ ಈಗ ಶೇಕಡಾ 80 ರಷ್ಟು ಕಾರ್ಡ್‌ ಇವೆ. ಕೆಲವು ನಿರ್ದಿಷ್ಟ ಸೂಚನೆಗಳನ್ನು ಮೀರಲಾಗಿದೆ. ಆರೋಗ್ಯ ವಿಚಾರಕ್ಕೆ ಬಂದಾಗ ಎಲ್ಲರಿಂದಲೂ ಬಿಪಿಎಲ್ ಕಾರ್ಡ್ ಗೆ ಬೇಡಿಕೆ ಇದೆ. ಹೀಗಾಗಿ ಬಿಪಿಎಲ್ ಕಾರ್ಡ್ (BPL CARD) ನೀಡುವ ಬಗ್ಗೆ ಕ್ಯಾಬಿನೆಟ್​​ನಲ್ಲಿ (Cabinet Meeting ) ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

ಇದನ್ನು ಓದಿ: Marks Card: ಫೆಬ್ರವರಿ 30ರಂದು ಜನಿಸಿತಂತೆ ಮಗು: ಮುಖ್ಯೋಪಾಧ್ಯಾಯರ ಎಡವಟ್ಟಿಗೆ ಶಿಕ್ಷಣಾಧಿಕಾರಿ ನೀಡಿದ್ರು ಶಾಕ್ 

Leave A Reply

Your email address will not be published.