Mahila Samman Ulitaya Patra Yojane: ರಾಜ್ಯದ ‘ಗೃಹಲಕ್ಷ್ಮಿ’ಗೇ ಸೆಡ್ಡು ಹೊಡೆಯುತ್ತಿದೆ ಕೇಂದ್ರದ ಈ ಹೊಸ ಯೋಜನೆ- 2,000ವನ್ನೂ ಬಿಟ್ಟು ಇದಕ್ಕೆ ಅರ್ಜಿ ಹಾಕಲು ಮುಗಿಬಿದ್ದ ಮಹಿಳೆಯರು

Latest national news women applying for new scheme from Central Government mahila samman ulitayaya Patra Yojane

Mahila-Samman Ulitaya Patra Yojane: ಮಹಿಳೆಯರ ಸಬಲೀಕರಣವನ್ನು ಬಯಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ತರುತ್ತಿದೆ. ಅಂತೆಯೇ ಕರ್ನಾಟಕ ಸರ್ಕಾರ ಇದೀಗ ಶಕ್ತಿ ಯೋಜನೆ(Shakthi yojane)ಹಾಗೂ ಗೃಹಲಕ್ಷ್ಮೀ(Gruhalakshmi) ಯೋಜನೆಯಂತಹ ಮಹತ್ವಾಕಾಂಕ್ಷೀ ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೊಳಿಸಿದೆ. ಈ ನಡುವೆ ಕೇಂದ್ರ ಸರ್ಕಾರದ ಯೋಜನೆಯೊಂದು ಭಾರೀ ಸದ್ದು ಮಾಡುತ್ತಿದೆ.

ಹೌದು, ರಾಜ್ಯದಲ್ಲಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ ಈ ನಡುವೆ ಕೇಂದ್ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ (Mahila-Samman Ulitaya Patra Yojane)ಯು ಕೂಡ ಭಾರೀ ಪ್ರಚಾರ ಪಡೆದುಕೊಳ್ಳುತ್ತಿದೆ. ಮಹಿಳೆಯರು ಕೂಡ ಈ ಯೋಜನೆಯ ಫಲಾನುಭವಿಗಳಾಗಲು ಎದ್ದು ಬಿದ್ದು ಅರ್ಜಿ ಹಾಕುತ್ತಿದ್ದಾರೆ. ಹಾಗಿದ್ರೆ ಏನು ಈ ಯೋಜನೆ? ಇದರ ಪ್ರಯೋಜನಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಏನಿದು ಹೊಸ ಯೋಜನೆ?
2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala sitaraman) ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪರಿಚಯಸಿದ್ದರು. ಇದು ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗಾಗಿ ರೂಪಿಸಿರುವ ಯೋಜನೆಯಾಗಿದೆ. ಇದು ಸಣ್ಣ ಉಳಿತಾಯ ಯೋಜನೆಯಾಗಿದ್ದು, ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ರೂಪಿಸಲಾಗಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ (Money Investment) ಮಾಡುತ್ತಾ ಬಂದರೆ, ಮಹಿಳೆಯರಿಗೆ ಉತ್ತಮವಾದ ಬಡ್ಡಿ ಸಿಗುವುದರ ಜೊತೆಗೆ ಭವಿಷ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗುತ್ತದೆ. ಇದರಲ್ಲಿ ಹೆಂಗಸರು ಮತ್ತು ಹುಡುಗಿಯರು ಯಾರೇ ಇದ್ದರು ಖಾತೆ ತೆರೆಯಬಹುದು. ನಿಮಗೆ ಹತ್ತಿರ ಇರುವ ಪೋಸ್ಟ್ ಆಫೀಸ್(Post office)ನಲ್ಲಿ ಯೋಜನೆಯು ಲಭ್ಯವಿದ್ದು ಇದಕ್ಕಾಗಿ ಅಪ್ಲೈ ಮಾಡಬಹುದು. ಈ ಯೋಜನೆಯಲ್ಲಿ ನಿಮಗೆ FD ಗೆ ಕೊಡುವುದಕ್ಕಿಂತ ಜಾಸ್ತಿ ಬಡ್ಡಿ ಸಿಗುತ್ತದೆ.

ಇದೀಗ ಬ್ಯಾಂಕ್ ಗಳಲ್ಲೂ ಈ ಯೋಜನೆ ಲಭ್ಯ:
ಅಂಚೆ ಕಚೇರಿಯಲ್ಲಿ ಲಭ್ಯವಿದ್ದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಇದೀಗ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳಿಗೆ ವಿಸ್ತರಿಸಿದೆ. 2023ರ ಏಪ್ರಿಲ್ 1ರಿಂದ ಜಾರಿಗೆ ಬಂದ ಈ ಯೋಜನೆಯನ್ನು ಮೊದಲಿಗೆ ಅಂಚೆ ಕಚೇರಿಯಲ್ಲಿ ಪರಿಚಯಿಸಲಾಗಿತ್ತು. ಈಗ ಇದರ ಖಾತೆಗಳನ್ನು 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು ಹಾಗೂ 4 ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ತೆರೆಯಬಹುದು ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಗಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. 2023ರ ಜೂನ್ 27ರಂದು ಈ ಅಧಿಸೂಚನೆ ಹೊರಡಿಸಿದೆ.

ಹೂಡಿಕೆ ಹೇಗೆ ?
ಇಲ್ಲಿ ನೀವು ಮಿನಿಮಮ್ 1000 ರೂಪಾಯಿ ಮತ್ತು ಮ್ಯಾಕ್ಸಿಮಮ್ 2,00,000 ರೂಪಾಯಿ ಹೂಡಿಕೆ ಮಾಡಬಹುದು, 2 ವರ್ಷಗಳ ನಂತರ ಮೆಚ್ಯುರ್ ಆಗುವ ಯೋಜನೆ ಇದಾಗಿದೆ. ಹಾಗೆಯೇ ಈ ಯೋಜನೆಗೆ 7.50% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ 2 ವರ್ಷಗಳ ಬಳಿಕ ಒಳ್ಳೆಯ ಆದಾಯ ಉತ್ತಮ ಬಡ್ಡಿ ಮೊತ್ತ ನಿಮ್ಮದಾಗುತ್ತದೆ. ಈ ಯೋಜನೆಯಲ್ಲಿ ನೀವು 2025ರ ಮಾರ್ಚ್ ವರೆಗು ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಹಣಕಟ್ಟುವ ಅಗತ್ಯವಿಲ್ಲ, 1000 ಹೂಡಿಕೆ ಮಾಡಿದರು ಅಥವಾ 2,00,000 ಹೂಡಿಕೆ ಮಾಡಿದರು ಅದು 2 ವರ್ಷಗಳವರೆಗೆ ಹಾಗೆಯೇ ಇರುತ್ತದೆ (One Time Investment). 2 ವರ್ಷಗಳ ಬಳಿಕ ಉತ್ತಮ ಬಡ್ಡಿ ಜೊತೆಗೆ ನಿಮಗೆ ಸಿಗುತ್ತದೆ.

ಲಾಭ ಏನು?
ಈ ಯೋಜನೆಯಲ್ಲಿ ನಿಮಗೆ ಸಿಗುವ ಬಹುಮುಖ್ಯವಾದ ಉಪಯೋಗ, ಇಲ್ಲಿ ನಿಮಗೆ ತೆರಿಗೆ ವಿನಾಯಿತಿ (Tax Free) ಸಿಗುತ್ತದೆ. ಬಡ್ಡಿ ಸಿಗುವುದು ಹೇಗೆ ಎಂದು ನೋಡಿದರೆ, ಇಲ್ಲಿ 3 ತಿಂಗಳಿಗೆ ಒಂದು ಸಾರಿ ಬಡ್ಡಿ ಹಣವನ್ನು ಸೇರಿಸಲಾಗುತ್ತದೆ. ಒಂದು ವೇಳೆ ನೀವು ₹1000 ಹೂಡಿಕೆ ಮಾಡಿದರೆ 2 ವರ್ಷಗಳ ನಂತರ ₹1,160 ರೂಪಾಯಿ ಬಡ್ಡಿ ಜೊತೆಗೆ ನಿಮಗೆ ಸಿಗುತ್ತದೆ. ಗರಿಷ್ಠ ಮೊತ್ತ, ₹2,00,000 ಹೂಡಿಕೆ ಮಾಡಿದರೆ ₹2,32,044 ರೂಪಾಯಿ ನಿಮಗೆ ಸಿಗುತ್ತದೆ. ಈ ಯೋಜನೆಯಲ್ಲಿ ಖಾತೆ ತೆರೆಯಲು ನೀವು ಪೋಸ್ಟ್ ಆಫೀಸ್ (Post Office) ಗೆ ಭೇಟಿ ನೀಡಬೇಕು. ಅಲ್ಲಿ ಫಾರ್ಮ್ ಪಡೆದು, ಫಿಲ್ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ನಿಮ್ಮದೊಂದು ಪಾಸ್ ಪೋರ್ಟ್ ಸೈಜ್ ಫೋಟೋ ಸಹ ಕೊಡಬೇಕಾಗುತ್ತದೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಕೂಡ ಬೇಕಾಗುತ್ತದೆ. ಒಂದು ವೇಳೆ ನಿಮಗೆ ತುರ್ತು ಪರಿಸ್ಥಿತಿ ಎದುರಾದರೆ ಹೂಡಿಕೆಯ ಹಣದಲ್ಲಿ 40% ವಾಪಸ್ ಪಡೆಯಬಹುದು. ಪರಿಸ್ಥಿತಿಗಳ ಅನುಸಾರ ಖಾತೆ ಕ್ಲೋಸ್ ಮಾಡಬೇಕು ಎಂದರು ಮಾಡಬಹುದು. ಕ್ಲೋಸ್ ಮಾಡಿದರು ನಿಮಗೆ ಪೂರ್ತಿ ಬಡ್ಡಿ ಸಿಗುತ್ತದೆ. ಖಾತೆ ಶುರು ಮಾಡಿ 6 ತಿಂಗಳ ನಂತರ ಕ್ಲೋಸ್ ಮಾಡುವುದಾದರೆ ಪೂರ್ತಿ ಬಡ್ಡಿ ಅಥವಾ 2% ಬಡ್ಡಿ ಕಟ್ ಮಾಡಿ ಇನ್ನುಳಿದ ಹಣ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ದೇಶಾದ್ಯಂತ ಬ್ಯಾಂಕ್ ಗಳು ಹಾಗೂ ಅಂಚೆ ಕಚೇರಿ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪರಿಚಯಿಸಲಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳು ವಿಶೇಷ ಆಂದೋಲನ ಹಾಗೂ ಕ್ಯಾಂಪೇನ್ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪ್ರಚುರಪಡಿಸುವಂತೆ ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

ಇದನ್ನೂ ಓದಿ: Arecanut price: ಈ ಮಾರುಕಟ್ಟೆಯಲ್ಲಿ ಕೊನೆಗೂ ಏರಿಕೆ ಕಂಡ ಅಡಿಕೆ ಬೆಲೆ- ಉಳಿದೆಡೆ ಕುಸಿತ, ಎಷ್ಟಿದೆ ಬೆಲೆ ?

Leave A Reply

Your email address will not be published.