ಸವಣೂರು: ನಶಾ ಮುಕ್ತ ಭಾರತ ಅಭಿಯಾನ ಉದ್ಘಾಟನೆ ಮಾದಕ ಪದಾರ್ಥ ಪೂರೈಕೆ, ಸೇವನೆ ಇವೆರೆಡೂ ಕಾನೂನಿನ ಪ್ರಕಾರ ಅಪರಾಧ -ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್

Latest news intresting news Savanur Nasha Mukt Bharat Abhiyan Inauguration

 

ಸವಣೂರು : ಬೆಳ್ಳಾರೆ ಪೊಲೀಸ್‌ ಠಾಣೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ, ಸರಕಾರಿ ಪದವಿಪೂರ್ವ ಕಾಲೇಜು,ಮಕ್ಕಳ ಸುರಕ್ಷಾ ಸಮಿತಿ (ಪ್ರೌಢಶಾಲಾ ವಿಭಾಗ) ಸವಣೂರು ಇದರ ಸಹಯೋಗದೊಂದಿಗೆ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಸವಣೂರು ಸ.ಪ.ಪೂ.ಕಾಲೇಜಿನಲ್ಲಿ ಜು.20ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ಅವರು,
ಮಾದಕ ವಸ್ತು ಡ್ರಗ್ಸ್ ಚಟಗಳು ಯುವ ಸಮುದಾಯವನ್ನು ಹೆಚ್ಚಾಗಿ ಕಾಡುತ್ತಿದೆ. ಡ್ರಗ್ಸ್ ಮಾರಾಟ ದಂಧೆಯು ಚೈನ್ ಮಾದರಿಯಲ್ಲಿ ವ್ಯವಹಾರ ನಡೆಯುತ್ತದೆ.ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಯಾವುದೇ ಭಾಗದಲ್ಲೂ ಸಂಶಯಿತ ಚಟುವಟಿಕೆ ಕಂಡು ಬಂದಲ್ಲಿ ಮಾಹಿತಿ ನೀಡಬೇಕು.ಇಂತಹ ಪ್ರಕರಣವನ್ನು ಗೌಪ್ಯವಾಗಿಡುವುದರಿಂದ ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಿದಂತಾಗುತ್ತದೆ.ಮಾದಕ ಪದಾರ್ಥ ಪೂರೈಕೆ, ಸೇವನೆ ಇವೆರೆಡೂ ಕಾನೂನಿನ ಪ್ರಕಾರ ಅಪರಾಧ. ಇದಕ್ಕೆ ಶಿಕ್ಷೆ ಇದೆ.ಮಾದಕ ದ್ರವ್ಯ ವ್ಯಸನದಿಂದ ಬದುಕು ಹಾಳಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ನವೀನಚಂದ್ರ ಜೋಗಿ ಮಾತನಾಡಿದರು.

ವೇದಿಕೆಯಲ್ಲಿ ಬೆಳ್ಳಾರೆ ಠಾಣಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಹಾಸ್ ಆರ್,ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನ‌ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಕೆ.ಸವಣೂರು, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ಸವಣೂರು ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಎನ್.ಪಿ,ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಬಿ.ಆರ್.ರಘು,ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಾಕೇಶ್ ರೈ ಕೆಡೆಂಜಿ ,ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ಉಪಸ್ಥಿತರಿದ್ದರು.

ಕಾರ್ಯಕ್ರಮ‌ ಸಂಯೋಜಕ ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್ ಎಸ್ ಸ್ವಾಗತಿಸಿದರು.ಅಧ್ಯಕ್ಷ ಜಿತಾಕ್ಷ ಜಿ. ವಂದಿಸಿದರು.ಯುವಕ ಮಂಡಲದ ಮಾಜಿ ಕಾರ್ಯದರ್ಶಿ ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

 

ಇದನ್ನು ಓದಿ: Bank Selling Homes: ಆಫರ್ ಬೆಲೆಯಲ್ಲಿ ಮನೆ ಖರೀದಿಸೊ ಪ್ಲಾನ್ ಉಂಟಾ ? ನ್ಯಾಷನಲ್ ಬ್ಯಾಂಕ್ ಮಾಡುತ್ತೆ ನೇರ ಮಾರಾಟ ! 

Leave A Reply

Your email address will not be published.