Gruha lakshmi: ರೇಷನ್ ಕಾರ್ಡ್‌ನಲ್ಲಿ ಯಾಜಮಾನಿ ಹೆಸರಿಲ್ಲವೆ? ಹಾಗಿದ್ರೆ ಚಿಂತೆ ಬಿಡಿ, ಜಸ್ಟ್ ಹೀಗ್ ಮಾಡಿ- ಗೃಹಲಕ್ಷ್ಮೀ ದುಡ್ಡು ಪಡೆಯಿರಿ !!

Latest Karnataka news Congress guarantee good news for those who did not include the wife name in the ration card

Gruha Lakshmi scheme: ಸರ್ಕಾರ ಇಂದು ಗೃಹಲಕ್ಷ್ಮೀ(Gruhalakshmi)ಯೋಜನೆಗೆ ಚಾಲನೆ ನೀಡಿದೆ. ಆದರೆ ಯೋಜನೆ ಜಾರಿಗೂ ಮುಂಚೆ ಕೆಲವು ನಿಯಮಗಳನ್ನು ತಂದಿತ್ತು. ರೇಷನ್‌ ಕಾರ್ಡ್‌ನಲ್ಲಿ(Ration card)ಕುಟುಂಬದ ಮುಖ್ಯಸ್ಥರಾಗಿ ಪುರುಷರ ಹೆಸರು ಇದ್ದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುವುದಿಲ್ಲ ಎಂಬ ನಿಯಮ ಕೂಡ ಅದರಲ್ಲಿ ಒಂದಾಗಿತ್ತು. ಆದರೀಗ ಈ ಚಿಂತೆ ಬಿಡಿ. ಜಸ್ಟ್ ಹೀಗೆ ಮಾಡಿ, ಯಜಮಾನಿ ಹೆಸರು ಸೇರಿಸಿ.

ಹೌದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಾಗಿನಿಂದ ರೇಷನ್ ಕಾರ್ಡ್(Ration card), ಆಧಾರ್ ಕಾರ್ಡ್(Adhar card), ಬ್ಯಾಂಕ್ ಅಕೌಂಟ್(Bank account) ವಿಚಾರವಾಗಿ ಕೆಲವು ಚುಟವಟಿಕೆಗಳು ಗರಿಗೆದರಿವೆ. ಗೃಹಲಕ್ಷ್ಮಿ ಯೋಜನೆಗೆ ( Gruha Lakshmi scheme) ರೇಷನ್ ಕಾರ್ಡ್ ಬೇಕಾಗಿದ್ದು, ಅದರಲ್ಲೂ ಆ ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿ ಇರುವುದು ಬಹಳ ಮುಖ್ಯ. ಮನೆಯ ಯಜಮಾನ ಪುರುಷನಾಗಿದ್ದರೆ ಈ ಯೋಜನೆಯ ಲಾಭ ಅರ್ಥವಾಗುವುದಿಲ್ಲ. ಹೀಗಿದ್ದಾಗ ಯಜಮಾನಿ ಹೆಸರನ್ನು ಸೇರಿಸುವುದು, ಬದಲಾಯಿಸುವುದು ತುಂಬಾ ಸುಲಭ. ಹೇಗೆ ಗೊತ್ತಾ?

ಮುಖ್ಯಸ್ಥರ ಹೆಸರು ಬದಲಾಯಿಸಲು ಬೇಕಾದ ದಾಖಲೆಗಳು:
* ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣಪತ್ರ
* ಮೂಲ ಪಡಿತರ ಚೀಟಿ
* ಅರ್ಜಿದಾರರ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ಪೂರಕ ದಾಖಲೆಗಳು
* ಅರ್ಜಿದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ಪೂರಕ ದಾಖಲೆಗಳು
* ಸ್ವಯಂ ಘೋಷಣೆ (ಅನ್ವಯವಾಗುವಂತೆ)
* * ಹೊಸ ಕುಟುಂಬದ ಮುಖ್ಯಸ್ಥರ ಪಾಸ್‌ಪೋರ್ಟ್ ಗಾತ್ರದ ಫೋಟೋ
* ಅವರ ಆಧಾರ್ ಕಾರ್ಡ್

ಯಜಮಾನಿಯ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ!
* ಮೊದಲಿಗೆ ನಿಮ್ಮ ಹತ್ತಿರದ ಪಡಿತರ ಚೀಟಿ ಸೇವಾಕೇಂದ್ರಗಳಿಗೆ ಬೇಟಿ ನೀಡಿರಿ
* ಮುಖ್ಯಸ್ಥರ ಹೆಸರು ಬದಲಾಯಿಸುವುದಕ್ಕೆ ಒಂದು ಅರ್ಜಿ ನಮೂನೆಯನ್ನು ತುಂಬಿರಿ
* ಜೊತೆಗೆ ಅರ್ಜಿ ನಮೂನೆಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.
* ನಂತರ ನಿಮ್ಮ ಬಯೋಮೆಟ್ರಿಕ್‌ ದೃಡೀಕರಣದ ಮೂಲಕ ದಾಖಲೆಗಳನ್ನು ದೃಡೀಕರಿಸಿ
* * ಇದೀಗ ನಿಮ್ಮ ಪಡಿತರ ಸೇವಾ ಕೇಂದ್ರದಲ್ಲಿ ನಿಮಗೆ ಅಗತ್ಯವಿರುವ ಮಾರ್ಪಾಡುಗಳನ್ನು ಸೇವ್‌ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.
* ನಂತರ ಅವರು ನೀಡುವ ಸ್ವೀಕೃತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ
* ಮುಂದಿನ ದಿನಗಳಲ್ಲಿ ಆಹಾರ ಕಚೇರಿಯಿಂದ ನಿಮಗೆ SMS ಬರಲಿದೆ
* ಎಸ್‌ಎಂಎಸ್‌ ಸ್ವೀಕರಿಸಿದ ನಂತರ ನೀವು ಸ್ವೀಕರಿಸಿದ ಸ್ವೀಕೃತಿಯೊಂದಿಗೆ ನಿಮ್ಮ ಪಡಿತರ ಚೀಟಿಯನ್ನು ಪ್ರಿಂಟ್‌ ತೆಗೆದುಕೊಳ್ಳಿ.

ಆನ್‌ಲೈನ್‌ ಮೂಲಕ ಯಜಮಾನಿಯ ಹೆಸರು ಬದಲಾಯಿಸುವುದು ಹೇಗೆ?
* ಮೊದಲಿಗೆ ನೀವು https://ahara.kar.nic.in/ಗೆ ಲಾಗ್ ಇನ್ ಆಗಿ
* ಇದರಲ್ಲಿ ಕಾಣುವ ಮೇನ್‌ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿ
* ನಂತರ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅಲ್ಲಿ ಕ್ಲಿಕ್‌ ಮಾಡಿರಿ
* ಇದೀಗ ಹೊಸ ಪೇಜ್‌ ತೆರೆಯಲಿದೆ
* ನಂತರ ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿರಿ
* ನೀವು ಆಯ್ಕೆ ಮಾಡುವ ಅಂದರೆ ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
* ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ
* ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು(ಸಬ್ಮೀಟ್) ಮಾಡಿರಿ
* ಅರ್ಜಿ ಸಲ್ಲಿಕೆಯ ರಿಜಿಸ್ಟರ್‌ ನಂಬರ್‌ ಸಿಗಲಿದೆ
* ಈ ನಂಬರ್‌ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್‌ ಅನ್ನು ಟ್ರ್ಯಾಕ್‌ ಮಾಡಲು ಸಾಧ್ಯವಿದೆ

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ Ration Card ಕಡ್ಡಾಯ:
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿ 2,000ರೂ. ಗಳನ್ನು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ (Ration Card) ಹೊಂದಿರುವುದು ಕಡ್ಡಾಯ. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಮನೆ ಯಜಮಾನಿ ಹೆಸರಿನಲ್ಲಿ ಇರಬೇಕು. ಗೃಹಲಕ್ಷ್ಮೀಗೆ ಅರ್ಜಿ ಹಾಕಲು ನಿನ್ನೆ ತಾನೇ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಹಾಗಾಗಿ ಆದಷ್ಟು ಬೇಗ ಕಾರ್ಡ್ ಅಪ್ಟೇಡ್ ಕೊಡಿ, ಅರ್ಜಿ ಹಾಕಿ, ದುಡ್ಡು ಪಡೆಯಿರಿ. ಇನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತ ಅಕ್ಕಿ ಬದಲು ರಾಜ್ಯದಿಂದ ಸಿಗುವ ಹಣವನ್ನು ಪಡೆಯಲು ಕೂಡ ಪಡಿತರ ಚೀಟಿಯಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯನ ಹೆಸರು ಸೇರಿಸುವುದು ಕೂಡ ಮುಖ್ಯ, ಇಲ್ಲವಾದರೆ ಹಣ ಸಿಗುವುದಿಲ್ಲ.

ಇದನ್ನೂ ಓದಿ: Chattisgad: ಅಧಿವೇಶನಕ್ಕೆ ತೆರಳುತ್ತಿದ್ದ ಶಾಸಕರು, ಸಚಿವರು- ಪೂರ್ತಿ ಬೆತ್ತಲಾಗಿ ಬಂದು ಮುತ್ತಿಗೆ ಹಾಕಿದ ಯುವಕರು !! ವಿಡಿಯೋ ವೈರಲ್

Leave A Reply

Your email address will not be published.