Shashi Tharoor Appreciate Modi: ಪ್ರಧಾನಿ ಮೋದಿಯನ್ನು ಟೀಕಿಸಿದ್ದೆ, ಆದರೆ…. ಮೋದಿಯ ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ !
latest news political news Congress MP Shashi Tharoor praised /Appreciate Modi
Shashi Tharoor Appreciate Modi: ಜಿ-20ಯಲ್ಲಿ ಭಾರತದ ತನ್ನದೇ ಸಂಚಲನ ಸೃಷ್ಟಿಸಿರುವುದರಲ್ಲಿ ಯಶಸ್ವಿಯಾಗಿರುವ ಮೋದಿ ನೇತೃತ್ವದ ಸರ್ಕಾರವನ್ನು ಮೆಚ್ಚಿದ ಶಶಿ ತರೂರ್, ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ್ದು (Shashi Tharoor Appreciate Modi) , ಇದು ಅಚ್ಚರಿಯನ್ನು ಮೂಡಿಸಿದೆ. ಅಲ್ಲದೆ, ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೆಚ್ಚಿಸಿರುವುದಕ್ಕೆ ಪ್ರಧಾನಿ ಮೋದಿಯವರನ್ನು (PM Narendra Modi) ಶ್ಲಾಘನಿಸಿದ್ದಾರೆ.
ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಾಂಗ ನೀತಿಯಲ್ಲಿ, ಒಟ್ಟಾರೆಯಾಗಿ, ನಾನು ಮೋದಿ ಆಡಳಿತದ ಸರ್ಕಾರವನ್ನು ಆರಂಭದಲ್ಲಿ ಟೀಕೆ ಮಾಡುತ್ತಿದ್ದೆ. ಆದರೆ ಅವರು ಈಗ ಎಲ್ಲಾ ನೆಲೆಗಳನ್ನು ಸಮಂಜಸವಾಗಿ ಸ್ಪರ್ಶಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತರೂರ್ ಹೇಳಿದರು.
ನನಗೆ ನೆನಪಿರುವಂತೆ ಮೋದಿಯವರು ಪ್ರಧಾನಿಯಾದ ಆರಂಭದ ವರ್ಷದಲ್ಲಿ ಒಟ್ಟು 27 ದೇಶಗಳಿಗೆ ಪ್ರಯಾಣ ಬೆಳೆಸಿದರು. ಆದರೆ ಒಂದೇ ಒಂದು ಮುಸ್ಲಿಂ ರಾಷ್ಟ್ರಕ್ಕೆ ಭೇಟಿ ನೀಡಲಿಲ್ಲ. ಆ ಬಗ್ಗೆ ನಾನು ಕಾಂಗ್ರೆಸ್ (Congress) ಸಂಸದನಾಗಿ ಸಂಸತ್‌ನಲ್ಲಿ ಗಲಾಟೆ ಮಾಡಿದ್ದೆ. ಆದರೆ ಇದಾದ ನಂತರ ಅವರು ಇಸ್ಲಾಮಿಕ್ ಜಗತ್ತನ್ನು ತಲುಪಲು ಏನೇಲ್ಲಾ ಕೆಲಸಗಳನ್ನು ಮಾಡಿದ್ದಾರೆಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಇದೊಂದು ಅನುಕರಣೀಯ ನಡೆ. ಜಗತ್ತಿನ ದೊಡ್ಡ ಮುಸ್ಲಿಂ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದ್ದು, ಈ ಹಿಂದೆಂದೂ ಈ ರೀತಿ ಇರಲಿಲ್ಲ. ಈ ಹಿಂದೆ ಮೋದಿಯವರ ಬಗ್ಗೆ ಮಾಡಿದ್ದ ಟೀಕೆಗಳನ್ನು ಹಿಂಪಡೆಯಲು ಬಯಸುತ್ತೇನೆ ಎಂದು ತರೂರ್ ಮನಬಿಚ್ಚಿ ಮಾತನಾಡಿದ್ದಾರೆ.
ಜಿ20ಯಲ್ಲಿ (G-20) ಭಾರತ ಅತ್ಯಂತ ಬುದ್ಧಿವಂತಿಕೆ ತೋರಿ ಕಾರ್ಯಕ್ರಮದಲ್ಲಿ ಭಾರತವೇ ಬೆಳಗುವಂತೆ ಮಾಡಿದೆ. ಜಗತ್ತು ಇನ್ನೆಂದಿಗೂ ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಇದರಲ್ಲಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯ ಪ್ರಭಾವವಿದೆ ಎಂದರು.
ಇದೇ ವೇಳೆ ಚೀನಾ ಜೊತೆಗಿನ ಸರ್ಕಾರದ ಯೋಜನೆಯ ಬಗ್ಗೆ ಮಾತನಾಡಿದ ಇವರು, ಈ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟತೆ ಇಲ್ಲ. ಭಾರತದ ವಿರುದ್ಧ ಕತ್ತಿ ಮಸೆಯಲು ಇದು ಚೀನಾಗೆ ” ಫ್ರೀ ಪಾಸ್” ನೀಡಿದಂತೆ, ಪಾರ್ಲಿಮೆಂಟ್‌ನಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಚೀನಾ ಆಪ್‌ಗಳ (Chinese apps) ಮೇಲಿನ ನಿಷೇಧ ಕೇವಲ ಸಂಕೇತಿಕವಾಗಿದೆಯಷ್ಟೇ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor), ಪದೇ ಪದೇ ಮೋದಿ ಸರ್ಕಾರವನ್ನು ಹೊಗಳುತ್ತಿದ್ಧಾರೆ. ಈ ಹಿಂದೆಯೂ ಯೋಗ ದಿನದಂದು ನೆಹರೂ ಅವರ ಯೋಗ ಭಂಗಿಯ ಫೋಟೋ ಪ್ರಕಟ ಮಾಡಿದ್ದ ಕಾಂಗ್ರೆಸ್ ಟ್ವೀಟನ್ನೇ ಕೋಟ್ ಮಾಡಿರುವ ಶಶಿ ತರೂರ್, ಯೋಗಕ್ಕೆ ಜಾಗತಿಕ ಮಾನ್ಯತೆ ತಂದು ಕೊಟ್ಟ ಮೋದಿ ಸರ್ಕಾರವನ್ನು (Modi government) ಶ್ಲಾಘಿಸಬೇಕು ಎಂದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದರು.
ಇದನ್ನು ಓದಿ: HIV – AIDS ನಿಂದ ಬಳಲುವ ರೋಗಿಗಳ ಪಾಲಿಗೆ ದಿವ್ಯ ಆಹಾರ ಸಿದ್ದ, ಏನಾ ಮನೆಮದ್ದು ?!