Chattisgarh: ಅಧಿವೇಶನಕ್ಕೆ ತೆರಳುತ್ತಿದ್ದ ಶಾಸಕರು, ಸಚಿವರು- ಪೂರ್ತಿ ಬೆತ್ತಲಾಗಿ ಬಂದು ಮುತ್ತಿಗೆ ಹಾಕಿದ ಯುವಕರು !! ವಿಡಿಯೋ ವೈರಲ್
Latest national news men run naked to stage protest over fake caste certificates in Chattisgarh
Chattisgarh: ಸರ್ಕಾರದ ಅಧಿವೇಶನ(Assembly sessions)ಅಥವಾ ಕಲಾಪ ಪಡೆಯಬೇಕಾದರೆ ಅಲ್ಲಿ ಎಷ್ಟೊಂದು ಭದ್ರತೆ ಏರ್ಪಡಿಸಲಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಮೊನ್ನೆ ಮೊನ್ನೆ ತಾನೇ ಕರ್ನಾಟಕದ ಅಧಿವೇನದಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಬಂದು ಕುಳಿತು ಭದ್ರತಾ ಲೋಪವಾಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೀಗ ಈ ಬೆನ್ನಲ್ಲೇ ಅಧಿವೇಶನಕ್ಕೆ ತೆರಳುತ್ತಿದ್ದ ಶಾರಸಕರು(MLA), ಸಚಿವರನ್ನು(Ministers) ಯುವಕರ ಗುಂಪೊಂದು ಬೆತ್ತಲಾಗಿ ಓಡಿ ಬಂದು, ತಡೆದು ಪ್ರತಿಭಟಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಚತ್ತೀಸಘಡದಲ್ಲಿ(Chattisgarh) ವಿಧಾನಸಭೆ ಕಲಾಪ ಆರಂಭಗೊಂಡಿದೆ. ಇಂದು ಕಲಾಪಕ್ಕೆ ತೆರಳುತ್ತಿದ್ದ ದಾರಿಯಲ್ಲಿ ಯುವ ಸಮೂಹ ಬೆತ್ತಲೇ ಪ್ರತಿಭಟನೆ ಮಾಡಿದೆ. ಪ್ರಮುಖ ರಸ್ತೆಯಲ್ಲಿ ಹಲವು ಯುವಕರು ಬೆತ್ತಲಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಸರ್ಕಾರಿ ಉದ್ಯೋಗ(Government job) ಪಡೆದುಕೊಂಡಿರುವವರನ್ನು ಕೆಲಸದಿಂದ ತೆಗೆಯಬೇಕು ಎಂದು ಆಗ್ರಹಿಸಿ ಈ ಯುವಕರ ಗುಂಪು ಬೆತ್ತಲಾಗಿ(Nude) ಪ್ರತಿಭಟನೆ ನಡೆಸಿದ್ದು ಸರ್ಕಾರಕ್ಕೆ ಭಾರೀ ಮುಜುಗರ ತಂದಿದೆ. ಅಲ್ಲದೆ ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಅಂದಹಾಗೆ ಚತ್ತೀಸಘಡದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ(Duplicate cast certificate)ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವ ಹಲವು ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಹಲವು ಹಿರಿಯ ಅಧಿಕಾರಿಗಳು ಅಮಾನತ್ತಾಗಿದ್ದಾರೆ. 2021ರಲ್ಲಿ ಪಿಡಬ್ಲೂಡಿ ಎಂಜಿನಿಯರ್ ಇದೇ ರೀತಿ ನಕಲಿ ಜಾತಿ ಪ್ರಮಾಣಪತ್ರ ನೀಡಿದ ಪ್ರಕರಣದಲ್ಲಿ ಅಮಾನತ್ತಾಗಿದ್ದರು. ಬಳಿಕ ಚತ್ತೀಸಘಡದಲ್ಲಿ ನಕಲಿ ಜಾತಿ ಪ್ರಮಾಣ ದಂಧೆ ಭಾರಿ ಚರ್ಚೆಯಾಗಿತ್ತು. ಸರ್ಕಾರದ ವಿರುದ್ಧ ಪ್ರತಿಭಟನೆ ಹೋರಾಟಗಳು ನಡೆದಿತ್ತು. ಮೀಸಲಾತಿಗಾಗಿ ಹಲವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವ ದಂಧೆಗೆ ಕಡಿವಾಣ ಹಾಕಲು ಭಾರಿ ಹೋರಾಟ ನಡೆದಿತ್ತು. ಆದರೀಗ ತಾಳ್ಮೆ ಕಳೆದುಕೊಂಡ ಯುವಕರು ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ವೈರಲ್ ಆದ ಈ ವಿಡಿಯೋದಲ್ಲಿ ಯುವಕರ ಗುಂಪೊಂದು ಬಿತ್ತಿಪತ್ರಗಳನ್ನು ಹಿಡಿದು ರಸ್ತೆಯಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿರುವುದು ಕಂಡು ಬರುತ್ತದೆ. ಈ ವೇಳೆ ವಿವಿಐಪಿಯೊಬ್ಬರ ಕಾರೊಂದು ವಿಧಾನಸಭೆ ಆವರಣವನ್ನು ಪ್ರವೇಶಿಸುತ್ತಿರುವುದನ್ನು ಗಮನಿಸಿದ ಯುವಕರು ಅದನ್ನು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಬೆತ್ತಲೇ ಪ್ರತಿಭಟನೆಯಿಂದ ಸರ್ಕಾರದ ಸಚಿವರು ಮುಜುಗರಕ್ಕೀಡಾಗಿದ್ದಾರೆ. ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿದೆ. 2021ರಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ, ದಂಧೆ ಅಂತ್ಯಗೊಂಡಿಲ್ಲ. ಕಳೆದೊಂದು ವರ್ಷದಲ್ಲಿ ಹಲವು ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಸರ್ಕಾರ ಈ ದಂಧಗೆ ನೆರವು ನೀಡುತ್ತಿದೆ ಅನ್ನೋ ಆರೋಪವೂ ಕೇಳಿಬಂದಿದೆ.
ಇನ್ನು ಪಡೆದಿದ್ದಕ್ಕಾಗಿ ಛತ್ತೀಸ್ಗಢದ ಸರ್ಕಾರವು ಲೋಕೋಪಯೋಗಿ ಇಲಾಖೆಯ(PWD Department)ಇಂಜಿನಿಯರ್ ಒಬ್ಬರನ್ನು ಸೇವೆಯಿಂದ ಅಮಾನತು ಮಾಡಿತ್ತು. ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಪ್ರತಿಭಟನಾ ನಿರತರೊಬ್ಬರು ಸರ್ಕಾರಿ ನೌಕರಿ ಪಡೆಯಲು ಅಭ್ಯರ್ಥಿಗಳು ನಕಲಿ ಜಾತಿ ಪ್ರಮಾಣಪತ್ರವನ್ನು ಬಳಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಹಾಗೂ ದೂರುಗಳನ್ನು ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಅರ್ಹತೆ ಇಲ್ಲದವರು ಜಾತಿ ಪ್ರಮಾಣಪತ್ರವನ್ನು ಇಟ್ಟುಕೊಂಡು ಎಲ್ಲಾ ಸಮಲತ್ತುಗಳನ್ನು ಅನುಭವಿಸುತ್ತಿದ್ದು, ಸರ್ಕಾರ ಅಂತಹ ನೌಕರರ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವುದಕ್ಕೆ ಇಂದು ನಾವು ಈ ರೀತಿ ಪ್ರತಿಭಟಿಸಲು ಕಾರಣ ಎಂದು ಆಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.
छत्तीसगढ़ में आज विधानसभा सत्र शुरु हुआ है.
जब VVIP विधानसभा जा रहे थे, उसी समय दर्जन भर नौजवान पूरी तरह से नग्न हो कर सड़कों पर आ गए.
इन नौजवानों की माँग थी कि फ़र्ज़ी आरक्षण प्रमाण पत्र के आधार पर नौकरी कर रहे लोगों पर कार्रवाई की जाए. pic.twitter.com/e9gr8GuyXI
— Alok Putul (@thealokputul) July 18, 2023