Home News H D Kumaraswamy: JDS ಕಾರ್ಯಕರ್ತರೆಲ್ಲರಿಗೂ ಶಾಕ್ ಕೊಟ್ಟ HDK !! ಚುನಾವಣಾ ಗೆಲುವಿಗಾಗಿ ಕೊನೆಗೂ...

H D Kumaraswamy: JDS ಕಾರ್ಯಕರ್ತರೆಲ್ಲರಿಗೂ ಶಾಕ್ ಕೊಟ್ಟ HDK !! ಚುನಾವಣಾ ಗೆಲುವಿಗಾಗಿ ಕೊನೆಗೂ ‘ಆ’ ನಿರ್ಧಾರ ಮಾಡಿಬಿಟ್ರಾ ಕುಮಾರಸ್ವಾಮಿ?

H D Kumaraswamy
Image source- The new Indian Express

Hindu neighbor gifts plot of land

Hindu neighbour gifts land to Muslim journalist

HD Kumaraswamy: ಇತ್ತೀಚೆಗಷ್ಟೆ ಮಾಜಿ ಸಿಎಂ, ಜೆಡಿಎಸ್(JDS) ನಾಯಕ ಎಚ್ ಡಿ ಕುಮಾರಸ್ವಾಮಿ(HD Kumaraswamy)ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಯಾರಿಗೂ ಟಿಕೆಟ್ ಇಲ್ಲ, ಯಾರೂ ಸ್ಪರ್ಧಿಸುವುದೂ ಇಲ್ಲ ಎಂದು ಹೇಳಿ ತಮ್ಮ ಫ್ಯಾಮಿಲಿಗೇ ಶಾಕ್ ನೀಡಿದ್ದರು. ಆದರೀಗ ಈ ಬೆನ್ನಲ್ಲೇ ಮತ್ತೆ ತಮ್ಮ ಅಣ್ಣನ ಪುತ್ರ, ಹಾಲಿ ಸಂಸದ ಪ್ರಜ್ವಲ್ ರೇವಣ್ಣನಿಗೆ(Prajwal revanna) ಶಾಕ್ ನೀಡಿದ್ದಾರೆ. ಇದರಿಂದ JSD ಕಾರ್ಯಕರ್ತರಿಗೂ ಶಾಕ್ ಹೊಡೆದಂತಾಗಿದೆ.

ಕುಟುಂಬ ರಾಜಕಾರಣದಿಂದಲೇ(Family politics) ಜೆಡಿಎಸ್ ಗೆ ಸೋಲಾಗುತ್ತಿದೆ ಎಂಬುದನ್ನು ಕೊನೆಗೂ ಮನಗಂಡಂತಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪಕ್ಷವನ್ನು ಈ ಕಳಂಕದಿಂದ ಪಾರುಮಾಡಲು, ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಕಳೆದ ತಿಂಗಳು ಇನ್ನು ಯಾವುದೇ ಚುನಾವಣೆಯಲ್ಲಿ ನಮ್ಮ ಕುಟುಂಬದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲೂ(Parliament election)ಯಾರೂ ಸ್ಪರ್ಧಿಸುವುದಿಲ್ಲ ಎಂದಿದ್ದರು. ಆದರೀಗ ಈ ಬೆನ್ನಲ್ಲೇ ಮತ್ತೊಂದು ಶಾಕ್ ನೀಡಿದ ಕುಮಾರಸ್ವಾಮಿ ಅವರು ಹಾಸನದ ಹಾಲಿ ಸಂಸರಾದ ಪ್ರಜ್ವಲ್‌ ರೇವಣ್ಣ ಅವರಿಗೂ ಟಿಕೆಟ್ ನೀಡಲ್ಲ ಎಂದಿದ್ದಾರೆ.

ಹೌದು, ಹಲವು ವರ್ಷಗಳಿಂದ ಕುಟುಂಬ ರಾಜಕಾರಣದ ಕಳಂಕದ ಹಣೆ ಪಟ್ಟಿಯನ್ನ ಹೊತ್ತುಕೊಂಡಿರುವ ಜೆಡಿಎಸ್‌ ನಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡದೇ ಕಾರ್ಯಕರ್ತರನ್ನ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಅನ್ನು ಮತ್ತೆ ಗೆಲ್ಲಿಸುವುದಾಗಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೆ 2024 ರ ಚುನಾವಣೆಗೆ ನಾನ್ನೊಬ್ಬ ಮಾತ್ರವಲ್ಲದೇ , ನಿಖಿಲ್ ಕುಮಾರಸ್ವಾಮಿಯೂ(Nikhil Kumaraswamy)ಸ್ಪರ್ಧಿಸಲ್ಲ. ಜೊತೆಗೆ ಹಾಸನ ಕ್ಷೇತ್ರದ ಹಾಲಿ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರು ಸಹ ನಿಲ್ಲುವುದು ಬೇಡ, ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡ ಕುಟುಂಬದಿಂದ ಯಾರಿಗೂ ಟಿಕೆಟ್ ಇಲ್ಲ ಎಂದಿದ್ದಾರೆ.