Job Interview Tips: ಜಾಬ್ ಇಂಟರ್ ವ್ಯೂ ಕ್ವೆಶ್ಚನ್ ಪೇಪರ್ ಲೀಕ್ ಆಗಿದೆ ಗುರೂ, ಇದೊಂದು ಪ್ರಶ್ನೆ ಪ್ರತಿ ಬಾರಿ ಗ್ಯಾರಂಟಿಯಾಗಿ ಕೇಳ್ತಾರೆ !
Latest news job news Job Interview Tips Job interview question paper is leaked
Job Interview Tips: ಈ ಜೀವನದಲ್ಲಿ ಪ್ರತಿ ವ್ಯಕ್ತಿಯೂ ಕೂಡ ಒಂದಲ್ಲ ಒಂದು ಬಾರಿ ತನ್ನ ಜೀವನದಲ್ಲಿ ಸಂದರ್ಶನವನ್ನು ಎದುರಿಸಿಯೇ ಎದುರಿಸುತ್ತಾನೆ. ನಾವು ಎಲಿಮೆಂಟರಿ ಶಾಲೆಗೆ ಜಾಯಿನ್ ಆಗುವುದರಿಂದ ಹಿಡಿದು ಪ್ರೀತಿಸಿದ ಹುಡುಗಿಯ ಅಪ್ಪನ ಕೈಯಲ್ಲಿ ಸಂದರ್ಶನ ಮಾಡಿಕೊಳ್ಳುವವರೆಗೆ, ಮುಂದಕ್ಕೆ ಕೆಲಸಕ್ಕೆ ಅಪ್ಲೈ ಮಾಡಿ ಕಾಲ್ ಲೆಟರ್ ಬಂದು, ನಾವು ತಿಳಿದಷ್ಟು ತಯಾರಾಗಿ ಇಂಟರ್ ವ್ಯೂ ಅಟೆಂಡ್ ಮಾಡುವವರೆಗೆ ಈ ಸಂದರ್ಶನದ ಪ್ರಕ್ರಿಯೆ ಜೀವನಪೂರ್ತಿ ನಿರಂತರ. ಸಂದರ್ಶನ ಎದುರಿಸೋದು ಅಂದ್ರೆ ಹೊಸ ಅವಕಾಶಗಳನ್ನು ಬಾಚಿಕೊಳ್ಳುವುದು ಮಾತ್ರವಲ್ಲ, ಅದು ತೀರಾ ಅಗತ್ಯವಾದ ಸಾಮಾನ್ಯ ಬದುಕಿಗೆ ಪ್ಲಾನ್ ಮಾಡಿಕೊಳ್ಳುವುದು ಕೂಡ.
ಇವತ್ತಿನ ಈ ಲೇಖನದಲ್ಲಿ ನಾವು ಯಾವುದೇ ಇಂಟರ್ವ್ಯೂನಲ್ಲಿ ನಮ್ಮನ್ನು ಕೇಳಬಹುದಾದ ಒಂದು ಸಾಮಾನ್ಯ ಪ್ರಶ್ನೆಗೆ ತುಂಬಾ ವಿಷದವಾಗಿ, ಮತ್ತು ಯೋಜಿತವಾಗಿ ಉತ್ತರಿಸುವ ಬಗೆಯನ್ನು ಹೇಳಿ ಕೊಡಲಿದ್ದೇವೆ. ಇದು ನಿಮ್ಮ ಮುಂಬರುವ ಜಾಬ್ ಇಂಟರ್ವ್ಯೂ ಇರಲಿ ಅಥವಾ ವೈವಾ ಇರಲಿ, ಅಥವಾ ಯಾವುದೋ ಸ್ಪರ್ಧಾತ್ಮಕ ಪರೀಕ್ಷೆಗಳ ಇಂಟರ್ವ್ಯೂ ಇರಲಿ, ಎಲ್ಲ ಕಡೆಯೂ ಒಂದು ಕಾಮನ್ ಪ್ರಶ್ನೆ ನಿಮ್ ಮುಂದೆ ಪ್ರತ್ಯಕ್ಷವಾಗುತ್ತದೆ. ನಿಜಕ್ಕೂ ಈ ಪ್ರಶ್ನೆ ತುಂಬಾ ಸರಳವಾದದ್ದು. ಅದು ಬೇರೆ ಏನೂ ಕಷ್ಟದ ಪ್ರಶ್ನೆಗಳನ್ನು ಕೇಳುವುದಿಲ್ಲ. ಅದು ನಿಮಗೆ ಗೊತ್ತಿರುವ ನಿಮ್ಮದೇ ವಿಷಯವನ್ನು ಪ್ರಸ್ತಾಪಿಸುತ್ತದೆ. ಆದರೆ ದುರದೃಷ್ಟವಶಾತ್ ನಿಮ್ಮ ಬಗ್ಗೆ ಉತ್ತರಿಸಲಿ ಉತ್ತರಿಸಲು ನೀವೇ ತಡಕಾಡುತ್ತೇವೆ. ಹೆಚ್ಚಿದ ಜನರು ಈ ಸಿಂಪಲ್ ಪ್ರಶ್ನೆಗೆ ಉತ್ತರಿಸಲು ತತ್ತರಿಸಿ ಹೋಗುತ್ತಾರೆ. ಎಲ್ಲಾ ಗೊತ್ತಿದ್ದೂ, ಏನು ಹೇಳಲಾರದೆ ಅಥವಾ ಉತ್ತರಿಸಿದರೂ ಅದನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಲಾಗದೆ ಕೆಲಸ ಕೆಡಿಸಿಕೊಳ್ಳುತ್ತಾರೆ. ಅಂತಹ ಸಮಸ್ಯೆಗಳಿಗೆ ಉತ್ತರವಾಗಿ ನಿಲ್ಲುವುದೇ ಇವತ್ತಿನ ಈ ನಮ್ಮ ಸುಧೀರ್ಘ ಲೇಖನ.
ನಿಮ್ಮ ಬಗ್ಗೆ ಹೇಳಿ ಟೆಲ್ ಮಿ ಅಬೌಟ್ ಯುವರ್ ಸೆಲ್ ನೀವು ಯಾರು ಏನು ಓದಿದ್ದೀರಿ ಇಂತಹ ಎಲ್ಲ ಪ್ರಶ್ನೆಗಳಿಗೂ ಇರುವುದು ಒಂದೇ ಉತ್ತರ. ಎಲ್ಲಾ ಸಂಘರ್ಷಣೆಗಳು ಸಾಮಾನ್ಯವಾಗಿ ಇದೇ ಪ್ರಶ್ನೆ ಇದ್ದ ಪ್ರಾರಂಭವಾಗುತ್ತದೆ ಈ ಪ್ರಶ್ನೆ ನಿಜಕ್ಕೂ ಇಲ್ಲಿ ಪ್ರಶ್ನೆ ಪತ್ರಿಕೆ ಬಾರಿ ಕೂಡ ನಮಗೆ ಈ ಪ್ರಶ್ನೆಯನ್ನು ಕೇಳಿಯೇ ಕೇಳುತ್ತಾರೆ ಎನ್ನುವುದು ಗೊತ್ತಿರುತ್ತದೆ ಆಗಬಾರದು ಎನ್ನುವುದಕ್ಕೆ ಈ ನಮ್ಮ ಲೇಖನ.
‘ಟೆಲ್ ಮಿ ಅಬೌಟ್ ಯುವರ್ ಸೆಲ್ಫ್ ‘, ನಿಮ್ಮ ಬಗ್ಗೆ ಹೇಳಿ, ಲೆಟ್ ಮೀ ನೋ ಮೋರ್ ಅಬೌಟ್ ಯೂ, ನಿಮ್ಮ ಬಗ್ಗೆ ಜಾಸ್ತಿ ತಿಳಿದುಕೋಬಹುದಾ? ಅಥವಾ ಸಿಂಪಲ್ಲಾಗಿ ನಿಮ್ಮ ಬಗ್ಗೆ ಹೇಳಿ ಅಂತ ಸಂದರ್ಶಕ ನಿಮ್ಮನ್ನು ಕೇಳಿಯೇ ಕೇಳುತ್ತಾನೆ.
‘ಟೆಲ್ ಮಿ ಅಬೌಟ್ ಯುವರ್ ಸೆಲ್ಫ್ ‘ ಎನ್ನುವ ಪ್ರಶ್ನೆ ಎದುರಾದ ಕೂಡಲೇ ಯಾವುದೇ ಅಳುಕಿಲ್ಲದೆ, ನಾವು ಅದನ್ನು ಉತ್ತರಿಸಬೇಕಾಗುತ್ತದೆ. ಈ ಒಂದು ಪ್ರಶ್ನೆಯ ಒಳಗೆ ಹಲವಾರು ಸಬ್ ಅಂದರೆ ಉಪ ಪ್ರಶ್ನೆಗಳಿವೆ. ಅವೆಲ್ಲಕ್ಕೂ ನಾವು ಪರಿಣಾಮಕಾರಿಯಾಗಿ ಉತ್ತರಿಸಬೇಕಾಗುತ್ತದೆ. ಇದು ಪ್ರತಿ ಇಂಟರ್ವ್ಯೂನಲ್ಲು ಕೂಡ ಗ್ಯಾರಂಟಿಯಾಗಿ ಬರುವ ಮೊತ್ತ ಮೊದಲ ಪ್ರಶ್ನೆಯಾಗಿರುವ ಕಾರಣ ನಮಗೆ ಕ್ವೆಶ್ಚನ್ ಪೇಪರ್ ನ ಮೊದಲ ಬಹುಮುಖ್ಯ ಪ್ರಶ್ನೆಗಳು ಲೀಕ್ ಆಗಿದ್ದಾವೆ. ಅಂದುಕೊಳ್ಳಬಹುದು.
ಯಾವುವು ಆ ಪ್ರಶ್ನೆಯೊಳಗಿನ ಖಚಿತ ಉಪ ಪ್ರಶ್ನೆಗಳು ಎಂದು ನೋಡೋಣ:
1. ನಿಮ್ಮ ಹೆಸರು ಮತ್ತು ಟೋಟಲ್ ಅನುಭವ (ಯಾವ ಫೀಲ್ಡ್)
2. ಕೃತಜ್ಞತೆ ಮತ್ತು ನಿಮ್ಮ ವಿದ್ಯಾರ್ಹತೆ
3. ನಿಮ್ಮ ಊರು ಮತ್ತು ಕುಟುಂಬದ ಸಂಕ್ಷಿಪ್ತ ಮಾಹಿತಿ
4. ಈಗ ಎಲ್ಲಿ ಕೆಲಸ ಮಾಡುತ್ತಿದ್ದೀರಿ ಎಂಬ ಮಾಹಿತಿ (ಫ್ರೆಶರ್ ಆಗಿದ್ರೆ) ಮತ್ತು ಯಾವ ಹುದ್ದೆಯಲ್ಲಿ ಇದ್ದೀರಿ ಎನ್ನುವ ಮಾಹಿತಿ
5. ಹಿಂದೆ ಎಲ್ಲೆಲ್ಲಿ ಕೆಲಸ ಮಾಡಿದ್ರಿ ಅನ್ನುವ ಬಗ್ಗೆ ಸಂಕ್ಷಿಪ್ತ ಮಾಹಿತಿ
6.ನಿಮ್ಮ ಓದಿನ ಅಥವಾ ಕೆಲಸದ ವಿಷಯದಲ್ಲಿನ ಬಹು ಮುಖ್ಯ ಸ್ಟ್ರಾಂಗ್ ಪಾಯಿಂಟ್ಸ್ (ಸ್ಟ್ರೆಂಗ್ತ್)
7. ಸಣ್ಣ ಮುಕ್ತಾಯದ ಮಾತು – Conclusion
1.ನನ್ನ ಹೆಸರು ಆರುಶ್ ಎಸ್.ಆರ್. ನನಗೆ ಒಟ್ಟು ಸಾಫ್ಟ್ವೇರ್ ಡೆವೆಲಪ್ ಮೆಂಟ್ ನಲ್ಲಿ 5 ವರ್ಷಗಳ ಅನುಭವ ಇದೆ.
2. ನನಗಿಲ್ಲಿ ಇವತ್ತು ಇಂಟರ್ವ್ಯೂಗೆ ಕರೆದು ಅವಕಾಶ ಕೊಟ್ಟದ್ದಕ್ಕೆ ನಾನು ಆಭಾರಿಯಾಗಿದ್ದೇನೆ.
3.ನಾನು 2018 ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಡಿಗ್ರಿ ಮುಗಿಸಿದ್ದು, ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿರುತ್ತೇನೆ.
4. ನಾನು ಮೂಲತ: ಮೈಸೂರಿನವನಾಗಿದ್ದು, ಮೂಲತಃ ನಮ್ಮದು ಕೃಷಿ ಕುಟುಂಬವಾಗಿದೆ. ನಾನೀಗ ಅಪ್ಪ ಅಮ್ಮನ ಜೊತೆ ವಾಸವಾಗಿದ್ದು ನನಗೊಬ್ಬ ಅಣ್ಣ ಇದ್ದು, ಆತ ಕಾಲೇಜು ಒಂದರಲ್ಲಿ ಲೆಕ್ಚರರ್ ಆಗಿದ್ದಾನೆ.
5. ಇದೀಗ ನಾನು ಕಳೆದ ಮೂರು ವರ್ಷಗಳಿಂದ ಇನ್ಫೋಸಿಸ್ ನಲ್ಲಿ ಟೀಮ್ ಲೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ.
6. ನಾನು ನನ್ನ ಇಂಜಿನಿಯರಿಂಗ್ ಪದವಿ ಮುಗಿಸಿದ ಕೂಡಲೇ ಟಾಟಾ ಕಲ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸಕ್ಕೆ ಸೇರಿದೆ. ತದನಂತರ ಅಲ್ಲಿ ಎರಡು ವರ್ಷ ಅನುಭವ ಪಡೆದ ಮೇಲೆ, ಇದೀಗ ನಾನು ಕೆಲಸ ಮಾಡುತ್ತಿರುವ ಇನ್ಫೋಸಿಸ್ ಸೇರಿದೆ. ಇನ್ಫೋಸಿಸ್ ನಲ್ಲಿ ಕಳೆದ ಮೂರು ವರ್ಷಗಳಿಂದ ನಾನು ಕೆಲಸ ಮಾಡುತ್ತಿದ್ದು – (ಏನೆಲ್ಲಾ ಅಲ್ಲಿ ಕಲಿತಿದ್ದೀರಿ ಎನ್ನುವ ಮಾಹಿತಿ ಅಥವಾ ಯಾವ ಡಿಪಾರ್ಟ್ಮೆಂಟ್, ಪ್ರೋಗ್ರಾಂ ಇತ್ಯಾದಿ ವಿಷಯಗಳ ಬಗ್ಗೆ ಹೇಳಬಹುದು)
7.ಜಾವಾ ಪ್ರೊಗ್ರಾಮಿಂಗ್ ನನ್ನ ಇಷ್ಟದ ಸಬ್ಜೆಕ್ಟ್ ಆಗಿದ್ದು ಅದರಲ್ಲಿ ಯಾವುದೇ ಕ್ಲಿಷ್ಟಕರ ಸಮಸ್ಯೆಗಳನ್ನು ನಾನು ಸುಲಭವಾಗಿ ಬಗೆಹರಿಸಬಲ್ಲೆ.
8. ಇದೀಗ ನಾನು ಅಪ್ಲೈ ಮಾಡಿರುವ ಹುದ್ದೆಗೆ ಬೇಕಾದ ಅಗತ್ಯ ವಿದ್ಯಾಭ್ಯಾಸ ಮತ್ತು ಕೆಲಸದ ಅನುಭವ ನನಗಿದ್ದು, ನನ್ನ ಪ್ರೊಫೈಲ್ ನೀವು ತಿಳಿಸಿದ ಜಾಬ್ ಪ್ರೊಫೈಲ್ ಗೆ ಸರಿಯಾಗಿ ಮ್ಯಾಚ್ ಆಗುತ್ತಿದೆ. ಹಾಗಾಗಿ ಈ ಹುದ್ದೆಗೆ ನನ್ನನ್ನು ನಾನು ಓರ್ವ ಸ್ಟ್ರಾಂಗ್ ಅಭ್ಯರ್ಥಿ ಎಂದು ಪ್ರೆಸೆಂಟ್ ಮಾಡಿಕೊಳ್ಳುತ್ತಿದ್ದೇನೆ. ಇದನ್ನೇ ಇಂಗ್ಲಿಷ್ ನಲ್ಲಿ ಓದಿ , ಯಾಕೆಂದರೆ ಈ ದಿನಗಳಲ್ಲಿ ಹೆಚ್ಚು ಕಮ್ಮಿ ಎಲ್ಲಾ ಇಂಟರ್ವ್ಯೂಗಳು ಇಂಗ್ಲೀಷ್ ಭಾಷೆಯಲ್ಲಿ ನಡೆಯುತ್ತವೆ.
1. My name is Arush. I have total 5 years of experience as a Software developer
2. I am very thankful to you for giving me an opportunity here
3.I completed my BE in Computer Science with distinction and passed out during 2018
4.I am from Mysore and living with my parents. I have a elder brother, who’s working as lecturer for a prestigious organisation
5. Currently I am associated with Infosys limited as the team leader for the last 3 years
6. Immediately after after my graduation, I joined Tata consultancy as a software developer and worked for 2 years. I am currently associating with Infosys. At Infosys I am leading a team of 8 members and responsible for developing and testing the …. soft ware solutions.
7.Java program is one of my favourite subject since my college days and now I excel in creating various opportunities with respect to Java
8. Having relevant education and experience I offer myself as a suitable candidate for this position as my profile is matching to the job description described by your company. ಇವಿಷ್ಟು ‘ ಟೆಲ್ ಮಿ ಅಬೌಟ್ ಯುವರ್ಸೆಲ್ಫ್ ‘ ಅನ್ನುವ ಖಚಿತ ಪ್ರಶ್ನೆಗೆ ನಾವು ನೀಡಿರುವ ಮಾದರಿ ಉತ್ತರ. ಇನ್ನಷ್ಟು ಸಂದರ್ಶನದ ಕುರಿತಾಗ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನೀಡಲಿದ್ದೇವೆ.
ಇದನ್ನು ಓದಿ: Karnataka assembly Opposition Leader: ವಿಪಕ್ಷ ನಾಯಕನ ಹೆಸರು ಪ್ರಕಟಿಸಲು ಕ್ಷಣಗಣನೆ: ಮುಹೂರ್ತ ಕೊನೆಗೂ ಫಿಕ್ಸ್ !