Shakti Scheme: ಮಹಿಳೆಯರೇ ಬರ್ತಿದೆ ಹೊಸ ಅಪ್ಡೇಟ್ ; ಬಸ್ಸಿನ ಕೆನ್ನೆಗೆ ಕಾರ್ಡು ಉಜ್ಜಿ, ಉಚಿತ ಪ್ರಯಾಣಿಸಿ !

Latest Karnataka news Shakti scheme update metro type smartcard for women for free travel in Karnataka

Shakti Scheme: ಕಾಂಗ್ರೆಸ್ ಸರ್ಕಾರದ (Congress Government) 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ (Shakti Scheme) ಈಗಾಗಲೇ ಜಾರಿಯಾಗಿದೆ. ರಾಜ್ಯದ ಉದ್ದಗಲಕ್ಕೆ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ (Free Bus Service) ಸೌಲಭ್ಯ ರಾಜ್ಯ ಸರ್ಕಾರ ಒದಗಿಸಿದೆ. ಶಕ್ತಿ ಯೋಜನೆಗೆ (Shakthi Scheme) ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ. ದಿನೇ ದಿನೇ ನಾರಿಮಣಿಯರ ಪ್ರಯಾಣ ಹೆಚ್ಚಾಗುತ್ತಿದೆ.

ಮಹಿಳೆಯರು ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ ತೋರಿಸಿ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಇದೀಗ ಶಕ್ತಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರೋ ಮಹಿಳೆಯರೇ ಗಮನಿಸಿ, ಇನ್ಮುಂದೆ ನೀವು ಬಸ್ಸಿನ ಕೆನ್ನೆಗೆ ಕಾರ್ಡು ಉಜ್ಜಿ, ಉಚಿತ ಪ್ರಯಾಣಿಸಬಹುದು. ಏನಪ್ಪಾ ಇದು ಕೆನ್ನೆಗೆ ಕಾರ್ಡ್ ಉಜ್ಜಿ ಪ್ರಯಾಣಿಸೋದು ಅಂತ ಅಂದುಕೊಂಡ್ರಾ? ಹಾಗಾದ್ರೆ ಈ ಮಾಹಿತಿ ಓದಿ,

ಸದ್ಯ ಶಕ್ತಿ ಯೋಜನೆ ಹಿನ್ನೆಲೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಮಹಿಳಾ ಪ್ರಯಾಣಿಕರ ದಾಖಲೆ ಪರಿಶೀಲಿಸಿ ಟಿಕೆಟ್‌ ನೀಡುವುದಕ್ಕೆ ಸಾಕಷ್ಟು ಸಮಯ ತಗುಲಲಿದೆ. ಹಾಗೇ ಬೇರೆ ರಾಜ್ಯದ ಮಹಿಳಾ ಪ್ರಯಾಣಿಕರಿದ್ದರೆ ಅವರಿಗೆ ಪುರುಷರಿಗೆ ನೀಡುವ ಮಾದರಿಯಲ್ಲಿ ಹಣ ಪಡೆದು ಟಿಕೆಟ್‌ ನೀಡಬೇಕಿದೆ. ಇದರಿಂದ ನಿರ್ವಾಹಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅದಕ್ಕಾಗಿ ಮಹಿಳಾ ಪ್ರಯಾಣಿಕರಿಗೆ ಮಾಮೂಲಿ ಸ್ಮಾರ್ಟ್‌ಕಾರ್ಡ್‌ ಬದಲು, ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌ ವಿತರಿಸಲು ಚಿಂತನೆ ನಡೆಸಲಾಗಿದೆ.

ಟ್ಯಾಪ್‌ ಸ್ಮಾರ್ಟ್‌ಕಾರ್ಡ್‌ ಗಳನ್ನು ಮಹಿಳೆಯರು ಬಸ್‌ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಟ್ಯಾಪ್‌ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್‌ ಮಾಡಬೇಕಿದೆ. ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು ಎನ್ನಲಾಗಿದೆ. ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌ ಬಳಸಲಾಗುತ್ತಿದೆ. ಅದೇ ಮಾದರಿಯ ಸ್ಮಾರ್ಟ್‌ಕಾರ್ಡ್‌ನ್ನು ಮಹಿಳಾ ಪ್ರಯಾಣಿಕರಿಗೆ ನೀಡುವ ಬಗ್ಗೆ ಚರ್ಚಿಸಲಾಗಿದೆ.

ಆದರೆ, ಇದು ದುಬಾರಿಯಾಗಿದ್ದು, ಹೆಚ್ಚಿನ ಹೊರೆ‌ ಬೀಳಲಿದೆ. ಪ್ರತಿ ಟ್ಯಾಪ್‌ ಸ್ಮಾರ್ಟ್‌ಕಾರ್ಡ್‌ಗೆ ಕನಿಷ್ಠ 20ರಿಂದ 30 ರು. ತಗಲುಲಿದ್ದು, ಕನಿಷ್ಠ 2 ಕೋಟಿ ಸ್ಮಾರ್ಟ್‌ಕಾರ್ಡ್‌ ವಿತರಿಸಬೇಕಿದೆ. ಸ್ಮಾರ್ಟ್‌ಕಾರ್ಡ್‌ಗಾಗಿಯೇ ಅಂದಾಜು 20 ಕೋಟಿ ರು.ಗೂ ಹೆಚ್ಚಿನ ಹಣ ಖರ್ಚಾಗಲಿದೆ. ಅಲ್ಲದೆ, ಬಸ್ ಗಳಿಗೆ ಸ್ಮಾರ್ಟ್‌ಕಾರ್ಡ್‌ ಟ್ಯಾಪ್‌ ಮಾಡುವುದಕ್ಕಾಗಿ ಬೇಕಾಗುವ ಯಂತ್ರವನ್ನು ಅಳವಡಿಸಬೇಕಿದೆ.
ಪ್ರತಿಯಂತ್ರಕ್ಕೆ ಕನಿಷ್ಠ 5 ರಿಂದ 6 ಸಾವಿರ ರೂ. ವೆಚ್ಚವಾಗುವ ಅಂದಾಜಿಸಲಾಗಿದೆ. ಎರಡು ದ್ವಾರ ಹೊಂದಿರುವ ಬಸ್ ಗಳಿಗೆ ಎರಡೂ ದ್ವಾರಕ್ಕೂ ಯಂತ್ರ ಅಳವಡಿಸಬೇಕಿದೆ. ಯಂತ್ರ ಅಳವಡಿಕೆಗಾಗಿಯೇ 15 ಕೋಟಿ ರು.ಗೂ ಹೆಚ್ಚಿನ ವೆಚ್ಚ ಮಾಡಬೇಕಾಗಿದೆ. ಸದ್ಯ ಆರ್ಥಿಕ ಸ್ಥಿತಿ ಹಿನ್ನಡೆ ಇರುವ ಕಾರಣ‌ ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಬಲಗೊಂಡ ನಂತರ ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: China: ಶಿಶು ವಿಹಾರ ಶಿಕ್ಷಕಿಯನ್ನು ಗಲ್ಲಿಗೆ ತೂಗು ಹಾಕಿದ ಚೀನಾ! ಅಂಥ ತಪ್ಪು ಏನು ನಡೆದಿತ್ತು ?

Leave A Reply

Your email address will not be published.