Karadi Sanganna: ಬಸ್ಸಲ್ಲಿ ಫ್ರೀ ಬೇಡ, ಪುರುಷ, ಸ್ತ್ರೀ ಇಬ್ರಿಗೂ ಅರ್ಧ ಚಾರ್ಜ್‌ ಮಾಡಿ ಬಿಡಿ: ಬ್ಯೂಟಿಫುಲ್ ಸಲಹೆ ನೀಡಿದ್ದು ಯಾರ್ ಗೊತ್ತಾ ?

Do you know who advised that men and women Hebrews should be charged half of the bus

Karadi Sanganna: ಕರ್ನಾಟಕ ಸರ್ಕಾರದ (karnataka Government) ಶಕ್ತಿ ಯೋಜನೆಯ (Shakti Scheme) ಉಚಿತ ಬಸ್‌ ಪ್ರಯಾಣಕ್ಕೆ (Free bus travel) ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ. ದಿನೇ ದಿನೇ ನಾರಿಮಣಿಯರ ಪ್ರಯಾಣ ಹೆಚ್ಚಾಗುತ್ತಿದೆ. ಬಸ್ ಗಳು ರಶ್ ಆಗಿ ಸಾಗುತ್ತಿವೆ. ಗಂಡಸರಿಗೆ ಸ್ವಲ್ಪವೂ ಜಾಗ ಸಿಗದ ಹಾಗೇ ಮಹಿಳೆಯರು ಬಸ್ ಪೂರ್ತಿ ಬುಕ್ ಮಾಡಿದವರೂ ಇದ್ದಾರೆ. ಮಹಿಳೆಯರಿಗೆ ಜಾರಿಯಾದ ಯೋಜನೆಯನ್ನು ಚೆನ್ನಾಗಿಯೇ ಹೆಂಗಸರು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಶಕ್ತಿ ಯೋಜನೆಯ (Shakti Yojana) ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರಕ್ಕೆ ಬ್ಯೂಟಿಫುಲ್ ಸಲಹೆಯನ್ನು ನೀಡಿದ್ದಾರೆ.

image sourceL : oneindia kannada

ಹೌದು,ಮಹಿಳೆಯರಿಗೆ ಮಾತ್ರ ಪ್ರಯಾಣಿಸಲು ಉಚಿತವಿರುವ ಈ ಶಕ್ತಿ ಯೋಜನೆಯ ಬದಲಾಗಿ, ಪುರುಷ ಮತ್ತು ಮಹಿಳೆಯರಿಗೆ ಅರ್ಧ ಟಿಕೆಟ್‌ ಮಾಡಿದ್ದರೂ ಅನುಕೂಲವಾಗುತ್ತಿದ್ದು. ಎಂದು ಸಂಸದ ಸಂಗಣ್ಣ ಕರಡಿ (karadi Sanganna) ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಕೇವಲ ಮಹಿಳೆಯರಿಗೆ ಮಾತ್ರ ಮಾಡಿದ್ದರಿಂದ ಮಹಿಳೆಯರು ಮನೆಯಲ್ಲಿ ನಿಲ್ಲದೆ ಊರೆಲ್ಲಾ ಸುತ್ತುತ್ತಿದ್ದಾರೆ. ಮನೆಯಲ್ಲಿ ಇದರಿಂದ ಸಮಸ್ಯೆಯಾಗುತ್ತಿದೆ. ಸಾಂಸಾರಿಕ ಜೀವನ ಹಾಳಾಗುತ್ತಿದೆ. ಶಕ್ತಿ ಯೋಜನೆಯ ಲಾಭ ಮಹಿಳೆಯರಿಗೆ ಮಾತ್ರ ಸಿಗುವುದರಿಂದ ಇವರು ಮಾತ್ರ ಪ್ರವಾಸ, ಪುಣ್ಯಕ್ಷೇತ್ರಗಳಿಗೆ ಹೊರಟಿದ್ದಾರೆ. ಅದೇ, ಪುರುಷ ಮತ್ತು ಮಹಿಳೆಯರಿಗೆ ಅರ್ಧ ಟಿಕೆಟ್‌ ಮಾಡಿದ್ದರೆ, ಇವರಿಬ್ಬರೂ ಸೇರಿ ಪ್ರವಾಸ , ದೇವಸ್ಥಾನ ಮುಂತಾದ ಕಡೆ ಹೋಗಬಹುದು ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.

ಉಚಿತ ಬಸ್ ಸೌಲಭ್ಯ ನೀಡಿದಾಗಿನಿಂದ ಮನೆಯಲ್ಲಿ ಹೆಂಗಸರು ಅಡುಗೆ ಮಾಡುತ್ತಿಲ್ಲ. ಯಾವ ಕೆಲಸವೂ ಆಗುತ್ತಿಲ್ಲ. ಬಸ್ಸಿನಲ್ಲಿ ತಿರುಗುವುದೇ ಆಯಿತು. ಇದರಿಂದ ಮನೆಯಲ್ಲೂ ಸಮಸ್ಯೆಯಾಗುತ್ತಿದೆ .ಹೆಂಗಸರಿಗೆ ಮಾತ್ರ ಯಾಕೆ ಫ್ರೀ ಕೊಡಬೇಕು, ಇಬ್ಬರಿಗೂ ಕೊಟ್ಟಿದ್ದರೇ ಅನುಕೂಲವಾಗುತ್ತಿತ್ತು. ಇಲ್ಲವೇ ಇಬ್ಬರಿಗೂ ಅರ್ಧ ಚಾರ್ಜ್‌ ನಿಗದಿ ಮಾಡಿದ್ದರೂ ಅನುಕೂಲವಾಗುತ್ತಿತ್ತು. ಎಂದು ಪುರುಷರ ನೋವನ್ನು ಅರ್ಥೈಸಿಕೊಂಡ ಸಂಸದ ಸಂಗಣ್ಣ ಕರಡಿ, ಸಿದ್ದು ಸರ್ಕಾರಕ್ಕೆ ಉತ್ತಮ ಸಲಹೆಯನ್ನು ನೀಡಿದ್ದಾರೆ.

 

ಇದನ್ನು ಓದಿ: Marriage: ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಾಗ ಮಿಸ್ಸೆಸ್ ಗುಟ್ಟು ಬಿಚ್ಚಿತ್ತು, 27 ಮಂದಿಗೂ ಒಬ್ಲೇ ಪತ್ನಿ ಎಂಬ ಅಸಲಿಯತ್ತು !

Leave A Reply

Your email address will not be published.