Reattach Boy’s Decapitated Head: ಬಾಲಕನ ಬೇರ್ಪಟ್ಟ ತಲೆಯನ್ನು ಕೂಡಾ ಯಶಸ್ವಿ ಮರು ಜೋಡಿಸಿದ ವೈದ್ಯ ತಂಡ ; ಅಷ್ಟಕ್ಕೂ ಶಿರ ಬೇರ್ಪಟ್ಟದ್ದೇಗೆ ?!

Latest news health news medical news The Decapitated head of the boy was successfully reattached

Reattach Boy’s Decapitated Head: ಮನುಷ್ಯನ ದೇಹದಿಂದ ಆಂತರಿಕವಾಗಿ ಬೇರ್ಪಟ್ಟ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿರುವ (Reattach Boy’s Decapitated Head) ಘಟನೆ ಇಸ್ರೇಲ್ ನಲ್ಲಿ ನಡೆದಿದೆ.

ಹಸನ್ ಎಂಬ 12 ವರ್ಷದ ಎಂಬ ಬಾಲಕ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಬಿದ್ದಿದ್ದ. ಹಾಗೆ ಬಿದ್ದ ರಭಸಕ್ಕೆ ಆತನಿಗೆ ಪ್ರಜ್ಞೆ ತಪ್ಪಿ ಹೋಗಿತ್ತು. ಕೂಡಲೇ ಆತನನ್ನು ಸಮೀಪದ ಮೆಡಿಕಲ್ ಸೆಂಟರ್‌ಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿನ ವೈದ್ಯರು ಬಾಲಕನ ಕುತ್ತಿಗೆ ಬುಡವು ಬೆನ್ನುಮೂಳೆಯ ಮೇಲಿನ ಕಶೇರುಖಂಡದಿಂದ ಬೇರ್ಪಟ್ಟಿರುವುದನ್ನು ಗಮನಿಸಿದ್ದಾರೆ. ಈ ಸ್ಥಿತಿಯನ್ನು ದ್ವಿಪಕ್ಷೀಯ ಅಟ್ಲಾಂಟೊ ಆಕ್ಸಿಪಿಟಲ್ ಜಂಟಿ ಡಿಸ್ಲೊಕೇಶನ್ ಎಂದು ಮೆಡಿಕಲ್ ಟರ್ಮ್ ನಲ್ಲಿ ಕರೆಯಲಾಗುತ್ತಿದ್ದು ಅದು ಅಪರೂಪದ ವೈದ್ಯಕೀಯ ಸ್ಥಿತಿಯಾಗಿದೆ.

ಪರಿಸ್ಥಿತಿಯ ತೀವ್ರತೆಯನ್ನು ಮನಗಂಡ ವೈದ್ಯರು ಆ ಕೂಡಲೇ, ಆತನಿಗೆ ಅಪರೂಪದ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಬಾಲಕ ಬದುಕುಳಿಯುವ ಸಾಧ್ಯತೆ 50% ಮಾತ್ರ ಇತ್ತು. ಬಾಲಕನ ಬದುಕುಳಿಯುವಿಕೆಯ ಪ್ರಮಾಣವು ಕೇವಲ 50% ಇದ್ದ ಕಾರಣ, ಶಸ್ತ್ರಚಿಕಿತ್ಸಕರ ತಂಡವು ಹುಡುಗನ ಪ್ರಾಣ ಉಳಿಸುವುದನ್ನು ಒಂದು ದೊಡ್ದ ಸವಾಲಾಗಿ ಸ್ವೀಕರಿಸಿತ್ತು. ಆ ನಂತರ ನಡೆದದ್ದು ಸುದೀರ್ಘ ಶಸ್ತ್ರಚಿಕಿತ್ಸೆ. ಹಲವು ಗಂಟೆಗಳ ದೀರ್ಘ ಶಸ್ತ್ರ ಚಿಕಿತ್ಸೆಯ ನಂತರ ಕೊನೆಗೂ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿ ಆತನ ಜೀವ ಉಳಿಸುವಲ್ಲಿ ವೈದ್ಯರುಗಳು ಯಶಸ್ವಿಯಾಗಿದ್ದಾರೆ.

ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿ ಆತನ ಜೀವ ಉಳಿಸಿದ ವೈದ್ಯರು ಈ ಬಗ್ಗೆ ಮಾತನಾಡಿದ್ದಾರೆ.‌ ಈ ಶಸ್ತ್ರಚಿಕಿತ್ಸೆಯ ವಿಧಾನವು ದೊಡ್ಡ ಸವಾಲಾಗಿತ್ತು. ಹಾನಿಯಾಗಿದ್ದ ತಲೆ ಬುರುಡೆಯ ತಳಭಾಗದಲ್ಲಿ ಪ್ರಮುಖ ರಕ್ತನಾಳಗಳು ಹಾಗೇ ಉಳಿದುಕೊಂಡಿತ್ತು. ಅಲ್ಲದೆ, ಮೆದುಳಿಗೆ ರಕ್ತದ ಹರಿವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಸದ್ಯ ದೀರ್ಘ ಪ್ರಕ್ರಿಯೆಯ ಹೊರತಾಗಿಯೂ, ಯಾವುದೇ ವಸ್ತುವಿನ ಸಹಾಯವಿಲ್ಲದೇ ಬಾಲಕನ ಕುತ್ತಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮೂಳೆ ಚಿಕಿತ್ಸಕ ತಜ್ಞ ಡಾ. ಓಹಾದ್ ಐನಾವ್ ಹೇಳಿದರು.

ತಂತ್ರಜ್ಞಾನ ಮುಂದುವರಿದಂತೆ ನಾನಾ ವಿಷಯಗಳಲ್ಲಿ ಬದಲಾವಣೆ ಆಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲೂ ವಿವಿಧ ರೀತಿಯ ಉನ್ನತ ಬದಲಾವಣೆಗಳಾಗುತ್ತಿವೆ. ಸದ್ಯ ದೇಹದಿಂದ ಆಂತರಿಕವಾಗಿ ಬೇರ್ಪಟ್ಟ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿರುವುದು ವೈದ್ಯಲೋಕಕ್ಕೆ ಹೆಮ್ಮೆಯ‌ ಸಂಗತಿ.

 

ಇದನ್ನು ಓದಿ: Beltangadi: ಕೊರಗಜ್ಜನ ಕಟ್ಟೆಗೆ ಬೆಂಕಿ ಪ್ರಕರಣಕ್ಕೆ ಟ್ವಿಸ್ಟ್!! 13 ಮಂದಿಯ ವಿರುದ್ಧ ದಾಖಲಾಯ್ತು ಕೇಸ್ – ಏನಾಗಿತ್ತು ಅಲ್ಲಿ 

Leave A Reply

Your email address will not be published.